ಈದಿನ ನನಗೆ ತುಂಬಾ ಬೇಕಾದಳ ಹುಟ್ಟು ಹಬ್ಬ. ಕಳೆದ ಎರಡು ವರ್ಷದಿಂದ ಈ ದಿನ ಅವಳಿಗೆ ಉಡುಗೊರೆ ಕೊಡುತ್ತಾ ಬಂದಿದ್ದೀನಿ. ಈ ಬಾರಿಯ ಉಡುಗೊರೆ ಸ್ವೀಕರಿಸೇ....
--
ಹೂವಿನಂತೆ ಬಾಳು
ಕಂಪನ್ನು ಎಲ್ಲೆಡೆ ಬೀರುತ--
ಹೂವಿನಂತೆ ಬಾಳು
ಬಾಡಿದ ಹೂ ಕಸದ ಪಾಲು
ಬಾಡದ ಹೂ ದೇವರ ಪಾಲು
ಚೆಲುವಿರಲಿ ನೋಟಕೆ
ಪರಿಮಳವಿರಲಿ ಆಕರ್ಷಣೆಗೆ
ಮುಳ್ಳಿರಲಿ ನಿನ್ನ ರಕ್ಷಣೆಗೆ
ಮಕರಂದವಿರಲಿ ಸದುದ್ದೇಶಕೆ
ಮುಡಿಯಲು ಬೇಕು ಹೂ
ಮಡಿದಾಗಲೂ ಬೇಕು ಹೂ
ಎಲ್ಲರ ಪಾಲಿಗು ಹೂವಾಗು
ಎಲ್ಲರ ಪಾಲಿಗು ಬೇಕಾಗು
11 ಜನ ಸ್ಪಂದಿಸಿರುವರು:
ಇಂದು ವಿಶ್ವ ಪರಿಸರ ದಿನ ಇವತ್ತು ಹುಟ್ಟಿದ ಆಕೆಯ ಹುಟ್ಟುಹಬ್ಬದ ಶುಭಾಶಯಗಳು.
ತುಂಬಾ ಬೇಕಾದವಳಿಗೆ ತುಂಬಾ ಒಳ್ಳೇದಾಗ್ಲಿ. :-) ಚಂದ ಕವನ.
ಅಂತರ್ವಾಣಿ,
ನಿಮ್ಮ ಬೇಕಾದವಳ ಹುಟ್ಟುಹಬ್ಬಕ್ಕೆ ನಮ್ಮಿಂದಲೂ ಶುಭಾಷಯ,
ಜೀವನ ನಗುವಿನ ಸಾಗರವಾಗಿರಲಿ,
ಹುಟ್ಟುಹಬ್ಬಕ್ಕೆ ನಿಮ್ಮ ಉಡುಗೊರೆ ಚನ್ನಾಗಿದೆ...
ನಮ್ಮ ಪರವಾಗಿಯೂ ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು
ಅಂತರ್ವಾಣಿ....
ಬಹಳ ಚಂದದ ಕವನ...
ನಿಮಗೆ ಬೇಕಾದವರು ಇದನ್ನು ಓದಿದರೆ..
ಅವರ ಮನಸ್ಸು ಹೂವಾಗುತ್ತದೆ...
ನಮ್ಮ ಶುಭಾಶಯಗಳನ್ನೂ ತಿಳಿಸಿಬಿಡಿ....
ಅಭಿನಂದನೆಗಳು...
ಸುಂದರ ಕವನ ಬಿಡಿಸಿಟ್ಟಿದ್ದಕ್ಕೆ....
ಕವನ ಚೆನ್ನಾಗಿದೆ. ನೀವು ಯಾರ ಕುರಿತಾಗಿ ಇದನ್ನು ಬರೆದಿದ್ದಿರೋ ಅವರ ಬಾಳು ಕವನದ ಆಶಯದ೦ತೆ ಹೂವಾಗಲಿ ಎ೦ದು ಹಾರೈಸುವೆ.
ನಿಮ್ಮೆಲ್ಲರಿಗೂ
ನನ್ನ ವಂದನೆಗಳು.
nice poem, keep it up
ಸು೦ದರವಾದ ಉಡುಗೊರೆಯನ್ನೇ ಕೊಟ್ಟಿದ್ದೀರಾ ಆಕೆಗೆ...
ತು೦ಬಾ ಚೆನ್ನಾಗಿತ್ತು ಕವಿತೆ.
ಯಾರವಳು..
ತುಂಬಾ ಬೇಕಾದವಳು..?
ಮನವ ಕಾಡುವವಳು?
ನಿದ್ದೆ ಕೆಡಿಸುವವಳು?
ಬೆಳಕಾಗುವವಳು..
ಹೂವಾಗುವವಳು..
ಯಾರವಳು..?
ಹೇಳಿದ್ರೇನು..ನಿಮ್ಮ ಗಂಟು ಹೋಗುತ್ತೇನ್ರೀ? ನಂಗ್ಯಾಕೋ ಡೌಟು..ಪರಿಸರ ದಿನದ ಕೊಡುಗೆ..ಪ್ರಕೃತಿಗೆ ಬರೆದದ್ದಾ? ಅಥವಾ ಪ್ರಕೃತಿ ನೆಪದಲ್ಲಿ ನಿಮ್ಮ ಹುಡುಗಿಗೆ ಬರೆದಿದ್ದಾ? ಒಟ್ಟಾರೆ ತುಂಬಾ ಚೆನ್ನಾಗಿದೆ ನಿಮ್ಮ ಕವನ.
ಕವಿವರ್ಯರೇ ಇನ್ನಷ್ಟು ಕವನಗಳನ್ನು ಬರೆಯಿರಿ...
-ಧರಿತ್ರಿ
hai,
tumba chenagide nim kavana
Post a Comment