ನಮ್ಮ ಮನೆಯಿಂದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಸ್ವಲ್ಪ ಮಟ್ಟಿಗೆ ಹತ್ತಿರವೆನ್ನ ಬಹುದು. ಅದೂ ಅಲ್ಲದೆ ಜಕ್ಕೂರಿನಲ್ಲಿ ತರಬೇತಿ ನಡೆಸುವ ಪೈಲಟ್ ಗಳು, ವಿಮಾನವನ್ನು ನಮ್ಮ ಮನೆ ಮೇಲೆ ಹಾರಾಟ ನಡೆಸುತ್ತಾಯಿರುತ್ತಾರೆ.
ಹೀಗಿರುವಾಗ ಒಂದು ದಿನ ನಮ್ಮ ಮನೆಯ ಹಿಂಭಾಗದಲ್ಲಿರುವ ಖಾಲಿ ನಿವೇಶನದಲ್ಲಿ ವಿದೇಶಕ್ಕೆ ಹಾರ ಬೇಕಿದ್ದ ವಿಮಾನವು ನಾನು ನೋಡುತ್ತಿದ್ದಂತೆಯೇ..ದುರಂತಕ್ಕೀಡಾಯಿತು. ಕ್ಷಣ ಕಾಲ ಏನೂ ತೋಚದಂತಾಯಿತು. ವಿಮಾನಕ್ಕೆ ಬೆಂಕಿ ತಗುಲಿದ್ದರಿಂದ ಸುತ್ತ ಮುತ್ತಲಿನ ಮನೆಗಳಿಗೆ ಹಾನಿ ಮಾಡ ಬಹುದೆಂದು ತಿಳಿದು ಕೂಡಲೆ ನಮ್ಮ ಮನೆಯಿಂದ ದೊಡ್ಡ ಪೈಪು ತಂದು, ಟ್ಯಾಂಕಿನ ಸಹಾಯದಿಂದ ವಿಮಾನದ ಬೆಂಕಿಯನ್ನು ಆರಿಸ ತೊಡಗಿದೆ. ಅಷ್ಟು ಹೊತ್ತಿಗೆ ನಮ್ಮ ಬಡಾವಣೆಯ ಜನರು ಅಲ್ಲಿ ಸೇರಿದ್ದರು. ಎಂದೂ ಯಾರ ಮೇಲೂ ರೀಗಾಡದ ನಾನು ಅಂದು ಏನಾಯಿತೋ ಗೊತ್ತಿಲ್ಲ. ಎಲ್ಲರ ಮೇಲು ರೇಗಾಡಿಬಿಟ್ಟೆ. "ಇಲ್ಲೇನ್ರಿ ನೋಡುತ್ತಿದ್ದೀರ. ನಿಮ್ಮ ಮನೆಯಿಂದ ನೀರು ತಂದು ವಿಮಾನ ನಂದಿಸಲು ಸಹಾಯ ಮಾಡಿ. ಇನ್ನೊಂದು ವಿಷಯ ಕೇಳಿಸಿಕೊಳ್ಳಿ, ಇವತ್ತಿನಿಂದ ಎಲ್ಲರ ಮನೆಯ ಮುಂದೆ Fire Extinguisher ಇಡಿ. ಇಲ್ಲಿ ತುಂಬಾ ವಿಮಾನಗಳು ಹಾರಾಡುತ್ತಾಯಿರುತ್ತವೆ. ಯಾವಾಗ ಏನು ಆಗುವುದೋ ತಿಳಿಯೋದಿಲ್ಲ"
ಆ ಸಮಯಕ್ಕೆ ಅಗ್ನಿ ಶಾಮಕ ದಳದವರು ಬಂದರು. ಬಂದ ಮೇಲೆ, ನನ್ನ ಬಗ್ಗೆ ಮಾತಾಡಿಕೊಳ್ಳುತ್ತಿದ್ದರು..." ಏನಪ್ಪಾ ಇವನು ನಮಗೆ ಜಾಸ್ತಿ ಕೆಲ್ಸ ಉಳಿಸಿಲ್ಲ.. ಬೆಂಕಿyಯನ್ನು ಇವನೇ ನಂದಿಸುತ್ತಾಯಿದ್ದಾನೆ." ನಂತರ ಒಂದು ನಿಮಿಷದೊಳಗೆ ಅವರು ಹೊರಟು ಹೋದರು.
ನನಗೆ ತುಂಬಾ ಬೇಜಾರಾಗಿತ್ತು. ಆ ವಿಮಾನ ದುರಂತದಿಂದ ಒಬ್ಬ ಪ್ರಯಾಣಿಕ ಕೂಡ ಜೀವಂತವಾಗಿರಲು ಸಾಧ್ಯವಿರಲಿಲ್ಲ! ಆ ಕಪ್ಪಾಗಿದ್ದ ಪ್ರದೇಶವನ್ನು ನೋಡಿ ಬರಲು ಹೊರೆಟೆ. ದಾರಿಯಲ್ಲಿ ನಾಲ್ವರು ಮಲಗಿದ್ದರು. ನಾನು ಅವರನ್ನು ಎಚ್ಚರಿಸಿ, "ಇಲ್ಲಿಯಾಕೆ ಮಲಗಿದ್ದೀರಾ?" ಅಂತ ಕೇಳಿದೆ. ಅದಕ್ಕೆ ಅವರಲ್ಲೊಬ್ಬನು "ನಾನು Spainಗೆ ಹೋಗಿಲ್ವಾ? ಎಲ್ಲಿದ್ದೀನಿ?" ಅಂತ ನನ್ನನ್ನೇ ಕೇಳಿದ. "ಅಯ್ಯೋ ನಿನ್ನ!. ನೀನು ಹೋಗುತ್ತಿದ್ದ ವಿಮಾನ ಅಪಘಾತವಾಗಿದೆ. ಅಲ್ಲಿ ನೋಡು. ಅದೇನು ಆಶ್ಚರ್ಯ ನೀವು ಇಷ್ಟೂ ಜನರು ಯಾವ ಪೆಟ್ಟಿಲ್ಲದೆ ಬದುಕುಳಿದ್ದಿದ್ದೀರ?" ಅಂತ ಮತ್ತೆ ಪ್ರಶ್ನಿಸಿದೆ.
ವಿಮಾನ ಈತರ ಕೆಳಕ್ಕೆ ಬಿದ್ದಿರೋದಕ್ಕೆ ಏನು ಕಾರಣವಿರಬಹುದು ಅಂತ ಎಲ್ಲರೂ ಯೋಚಿಸುತ್ತಿದ್ದೆವು. ಆಗ ಅವನು, "Mostly Pilot ಕುಡಿದು ಬಂದಿದ್ದಾನೆ ಅನಿಸುತ್ತೆ. ತಲೆ ಸುತ್ತಿದೆ.. ವಿಮಾನ ಓಡಿಸೋದಕ್ಕೆ ಆಗದೆ ನೆಲಕ್ಕೆ ಉರುಳಿಸಿದ್ದಾನೆ" ಅಂದ. ಅದಕ್ಕೆ ಇನ್ನೊಬ್ಬ ಇರಬಹುದು ಎಂದು ತಲೆಯಾಡಿಸಿದ. ಆಗ ನಾನು " Pilot ಕುಡಿದಿರೋದಕ್ಕೆ ಸಾಧ್ಯವಿಲ್ಲ." ಅಂದೆ. ಆಗ ಮತ್ತೊಬ್ಬ "ವಿಮಾನ ನಿಲ್ದಾಣದಲ್ಲಿ ಭದ್ರತಾ ಸಿಬ್ಬಂದಿಗಳು ನಮ್ಮ ಬ್ಯಾಗುಗಳನ್ನು ಚೆಕ್ ಮಾಡುತ್ತಾರೇ ಹೊರತು ನಮ್ಮ ಬಾಯಿಯನ್ನು ಅಲ್ಲ" ಅಂದ. ಹೀಗೆ ನಾವೆಲ್ಲ ಆ pilot ಕುಡಿತದ ಬಗ್ಗೆ ಮಾತಾಡುತ್ತಿರುವಾಗ ಅಮ್ಮ ಬಂದು "ಮಗು... ಎದ್ದೇಳು.. ಕಾಫಿ ಕುಡಿ... ಆಫೀಸಿಗೆ..ಹೋಗ ಬೇಕು...." ಅಂದರು..
ಜ್ಞಾನದ ಬಗ್ಗೆ
-
ಜ್ಞಾನದಿಂ ಮೇಲಿಲ್ಲ| ಶ್ವಾನನಿಂ ಕೀಳಿಲ್ಲ|ಭಾನು ಮಂಡಲದಿಂ ಬೆಳಗಿಲ್ಲ ಜಗದೊಳಗೆ|ಜ್ಞಾನವೇ
ಮೇಲು ಸರ್ವಜ್ಞ||ಜ್ಞಾನದಿಂದಲಿ ಇಹವು| ಜ್ಞಾನದಿಂದಲಿ ಪರವು|ಜ್ಞಾನವಿಲ್ಲದಲೆ ಸಕಲವೂ
ತನಗಿದ್ದು|ಹಾನಿ...
15 years ago
12 ಜನ ಸ್ಪಂದಿಸಿರುವರು:
ಎಲ್ಲಾ ಓಕೆ... ನಿನಗೇ ಯಾಕೆ?
ನನಗೆ ಯಾಕೆ (ಇಂಥ ವಿಚಿತ್ರ) ಕನಸುಗಳು ಬೀಳೋದೇ ಇಲ್ಲ? :-(
ಸರಿ.. ಫೈರ್ ಎಕ್ಸ್ಟಿಂಗ್ವಿಷರ್ ತಂದಿಟ್ಕೊಂಡಿದೀಯಾ?
ನಿಮಗೆ ಈ ಲೆವೆಲ್ಲಲ್ಲಿ ಕೆಟ್ಟ ಕನಸು ಬೀಳತ್ತೆ ಅಂದ್ರೆ...ಇದು ಯಾಕೋ ಸೀರಿಯಸ್ ವಿಷಯ. ಒಂದು ಕೆಲ್ಸ ಮಾಡಿ. ದಿನಕ್ಕೆ ಹತ್ತು ಶ್ಲೋಕ ಭಗವದ್ಗೀತೆ, ಎರಡು ಮಂಕುತಿಮ್ಮನ ಕಗ್ಗ ಮತ್ತು ಒಂದು ಪುಟ ಶ್ರೀಮದ್ಭಾಗವತ ಓದಿ, ಈ ಶ್ಲೋಕವನ್ನು ಹೇಳಿಕೊಳ್ಳಿ- "ರಾಮಂ ಸ್ಕಂದಂ ಹನುಮಂತಂ ವೈನತೇಯಂ ವೃಕೋದರಂ| ಶಯನೆಯೇ ಸ್ಮರೇನ್ನಿತ್ಯಂ ದುಃಸ್ವಪ್ನಂ ತಸ್ಯ ನಶ್ಯತಿ || ಆಮೇಲೆ, ಶಿವನೇ ಸದ್ಯೋಜಾತ ಅಂತ ಪ್ರಾರ್ಥಿಸಿ, ಮಲ್ಕೊಳಿ. ಒಂದು ತಿಂಗಳು ಹೀಗೆ ಮಾಡಿನೋಡಿ.
ಬೆಳಿಗ್ಗೆ ಹೊತ್ತ ಬಿದ್ದ ಕನಸುಗಳು ಖರೆ ಆಗ್ತಾವಂತ ಹೇಳ್ತಾರೀ!
ನಿಮಗೆ ಯಾವಾಗಿ೦ದ ಇ೦ಥ ಕನಸು ಬೀಳೋಕೆ ಶುರು ಆಗಿದ್ದು. ?? ಸ್ವಲ್ಪ ಹುಷಾರಾಗಿರಿ, ಸ್ವಪ್ನಫಲ ಭವಿಷ್ಯ ನೋಡಿ !! ಹಹಹಃ ತಮಾಷೆಗೆ ಹೇಳಿದೆ, ಚೆನ್ನಾಗಿದೆ ಬರಹ.
ಅಂತರ್ವಾಣಿ..
ಉಫ್....
ಸುಮ್ಮನೆ ಹೆದರಿಸಿ ಬಿಟ್ಟಿದ್ದೀರಲ್ಲ...
ಇವೆಲ್ಲ ಕನಸೇ ಆಗಿರಲಿ...
ನಿಮ್ಮ ಬರಹ ಚೆನ್ನಾಗಿದೆ...
haa vichitra kanasu chennagi ide
ಹರಿ,
ಈ ತರಹ ಕನಸು ಬೀಳುತ್ತಿಲ್ಲ ನಿನಗೆ.. ಸುಮ್ಮನಿರು.
ಮಾ,
ಭಗವದ್ಗೀತೆ ಶ್ಲೋಕ ಓದಿಕೊಂಡು ಮಲಗಿ, ನಾನೆ ಪ್ರವಚನ ಕೊಟ್ಟ ಹಾಗೆ ಕನಸು ಬಿದ್ದರೆ ಮತ್ತೆ ಇಲ್ಲೇ ಬರಿಬೇಕು ಅದನ್ನು :)
ಸುನಾಥಂಕಲ್,
ಈ ಕನಸು ಬಿದ್ದ ಮೇಲೆ ಅದೆಷ್ಟು ವಿಮಾನ ಕೆಳಗೆ ಬಿತ್ತೋ ನನಗೇ ಗೊತ್ತಿಲ್ಲ. ಆದರೆ ನಾನು ಆ ಬೆಂಕಿ ನಂದಿಸಲು ಆಗಲಿಲ್ಲ ಅದೇ ಬೇಜಾರಾದ ವಿಷಯ.
ಪರಾಂಜಪೆ ಅವರೆ,
ತುಂಬಾ ಹಿಂದಿನಿಂದ ಕನಸು ಬೀಳುತ್ತಿವೆ. ನನ್ನ ಬ್ಲಾಗಿನಲ್ಲಿ "ಕನಸುಗಳು" ಎಂಬ ವಿಭಾಗದಲ್ಲಿ ಮತ್ತಷ್ಟು ಹಾಕಿದ್ದೇನೆ. ಸಮಯ ಸಿಕ್ಕಾಗ ಓದಿ.
ಪ್ರಕಾಶಣ್ಣ,
ಕನಸಲ್ ಇರಲಿ ಇವು.
ಗುರು ಅವರೆ,
ವಂದನೆಗಳು
ಜಯಶಂಕರ್,
ಮೊದಲು ನಿಜವೆಂದುಕೊಂಡಿದ್ದೆ...ಆದ್ರೆ ಕೊನೆಯಲ್ಲಿ ಕನಸು ಅಂತ ಗೊತ್ತಾದಾಗ ಸ್ವಲ್ಪ ಸಮಾಧಾನವಾಯಿತು...
oLLe vimaana.. majvaagide.
ಜಯಶಂಕರ್...ಇಲ್ಲಿ ನಾನೇ ಗೆದ್ದಿದ್ದು. ನೀವು ಯಾವಾಗಲೂ ಕನಸಿನ ಬಗ್ಗೆ ಬರೇತೀರಲ್ಲಾ...ಹಾಗೇ ವಿಮಾನ ದುರಂತ ಅಂದಾಗ..ಪಕ್ಕನೆ ತಲೆಯಲ್ಲಿ ಹೋಯ್ತು...! ಅದಕ್ಕೆ ಉಲ್ಟಾ ಓದಕೆ ಶುರು ಮಾಡಿದೆ...ಕೆಳಗಿನಿಂದ ಮೇಲಕ್ಕೆ! ಅಷ್ಟೇ ಅಲ್ಲ, ನೀವು ಕಂಡ ವಿಮಾನ ದುರಂತ...ನಾವು ಕಾಣದಿರಲು ಸಾಧ್ಯವೇ? ಅದು ಪೇಪರ್ನಲ್ಲಿ ಟಿವಿಗಳಲ್ಲಿ ಸುದ್ದಿಯಾಗೊಲ್ವಾ? ಹಾಗೆ ನಂಗೆ ಮೊದಲೇ ಗೊತ್ತಾಗೋಯ್ತು..ಹ್ಹಿಹ್ಹಿ!! ಹೆಂಗೆ ನಮ್ಮ ತಲೆ..ಇಲ್ಲಿ ನಾನು ಪಾಸು...ನೀವು ನಾಪಾಸು!
-ಧರಿತ್ರಿ
idu ondu oLLe durantha ;-)
ShankraNNaa.... :-)
tumba common alwa ee thara... eega aa Ad kooda bantittalaa.. "chintooooo.." anta koogi amma aa huDgange ebsodu, aduu dhoni jote kansalli irvaaga...
hehe..
every dream has a significance.. aagaaga Interpretation of Dreams odtirteeni.. Sigmund Freud is a pioneer..
very interesting to know the patterns of our mind!
Crash in your dream means a significant achievement! The louder the crash, the more noteworthy the achievement!
Plane crash dream is not uncommon... it could indicate the dreamer has become too remote from the realities of life and on his way to achieve something large...
fire indicates warm human feelings and growth (ante)...
fire extinguisher inda benki aarsidyaa neenu :-D hehehee...
sadyOjaata na dhyaana and devr shloka heLodar jote ge, nin dreams na follow maaDu ShankraNNaaa,...
All the best!! :-) :-)
Post a Comment