Wednesday, 18 March 2009

ಫಿನ್ ಲ್ಯಾಂಡಿಗೆ ಪ್ರವಾಸ (೨) - ಫಿನ್ ಲ್ಯಾಂಡಿಗೆ ಟಾಟ

ಹಿಂದಿನ ಭಾಗ

ಫೊಟೋ ಸೆಶನ್ ಆದ ಮೇಲೆ, ನಮ್ಮ Majestic ಎದುರುಗಡೆ Sangam ಚಿತ್ರಮಂದಿರ ಇತ್ತಲ್ಲಾ.. ಅದೇ ರೀತಿ ಇಲ್ಲೂ ಈ ಚಿತ್ರಮಂದಿರ ಕಾಣಿಸಿತು.
ನಾಯಕನ ೫೦ ಅಡಿಯ ಕಟ್ ಔಟು, ಹೂವಿನ ಹಾರ, ಕ್ಷೀರಾಭಿಷೇಕ, ಸಿಹಿ ಹಂಚಿಕೆ ಇವೆಲ್ಲಾ ಅಲ್ಲಿ ಕಾಣಿಸಲಿಲ್ಲ ಆದರೆ ಹೊರ ಭಾಗದ ನೋಟ ನಮ್ಮ ಪುಟ್ಟಣ್ಣಚೆಟ್ಟಿ ಟೌನ್ ಹಾಲ್ ನ ಜ್ಞಾಪಿಸುತ್ತಿತ್ತು.

ಅಲ್ಲಿದ್ದ ಒಂದೆರಡು ಕಟ್ಟಡಗಳ ಚಿತ್ರ ತೆಗೆದುಕೊಂಡು, ಐಸ್ ಕ್ರೀಂ ತಿನ್ನುತ್ತಾ ಸಂಜೆ ಕಳೆದೆ.

ಗುರುವಾರ ಮತ್ತೊಂದು ಲೇಕ್:

ಆ ದಿನ ನಾನು ರೈಲ್ವೇ ನಿಲ್ದಾಣದ ಹಿಂಭಾಗದ ಕಡೆ ಹೊರಟೆ. ಕಳೆದ ಪೋಸ್ಟಿನಲ್ಲಿ ನನ್ನ ಕೈಯಲ್ಲಿದ್ದ ಪುಸ್ತಕ ದಾರಿ ತೋರಿಸುತ್ತಿತ್ತು. ಇಲ್ಲಿಯ ಸೂರ್ಯನಿಗೆ ಹೇಗೂ Overtime ಕೆಲಸ, ಹಾಗಾಗಿ ನನ್ನ ಕೆಲಸವಾದ ಮೇಲೆ ಸುತ್ತಾಟಕ್ಕೆ ತುಂಬಾ ಸಮಯ ಸಿಗುತ್ತಿತ್ತು. ಫೋಟೋಗ್ರಾಫಿಗೆ Natural light ಹೆಚ್ಚು ಸಿಗುತ್ತಿತ್ತು. ಹಾಗೆ ಸಾಗುತ್ತ ಒಂದು ಸರೋವರದ ಹತ್ತಿರ ಬಂದೆ.

ಎಲ್ಲಿ ನೋಡಿದರಲ್ಲಿ ಲೇಕುಗಳು
ಅಲ್ಲಿ ಕಾಣಿಸಲಿಲ್ಲ ಪ್ರೇಮಿಗಳು

ಕಾಣಿಸಿದ್ದು,
ಗಿಡಗಳಲ್ಲಿ ಹೂವುಗಳು

ಕಣ್ಣಿಗೊಳ್ಳೆ ನೋಟಗಳು


ಇಲ್ಲಿಯ ಹುಲ್ಲುಗಾವಲಿನ ಮೇಲೆ ಅಂದಿನ ಸಂಜೆ ಕಳೆದೆ. ನಂತರ ಹೊಟೆಲಿಗೆ ಬಂದು ಅಲ್ಲಿಯ ಚಿತ್ರಗಳನ್ನು ಸೆರೆ ಹಿಡಿದೆ.

ಇಲ್ಲಿ ಟಿ.ವಿಯನ್ನು ಇಟ್ಟಿದ್ದಾರಲ್ಲ.. cupboard ಅದೇ "ಮಿನಿ ಬಾರ್".

ಶುಕ್ರವಾರ ಶಾಪಿಂಗ್:
ಶುಕ್ರವಾರ ಇದ್ದ ಕೆಲಸವನ್ನು ಬೇಗನೆ ಮುಗಿಸಿ, ಸಾಮಿ, ತೆರೋ ಎಲ್ಲಾರಿಗೂ ಹೋಗಿ ಬರುತ್ತೇನೆಂದು ಹೇಳಿ ಬೇಗನೆ ಹೊರಟೆ. ದಾರಿಯಲ್ಲಿ ಭಾರತದ ವೃದ್ಧ ದಂಪತಿಗಳು ಹೆಲ್ಸಿಂಕಿ ಸುತ್ತಿಕೊಂಡು ತಾಂಪರೆಗೆ ಬಂದಿದ್ದರು. ನನ್ನ ಬಳಿ ಬಂದು ಭಾರತದ ಹೋಟೆಲು ಎಲ್ಲಿದೆ ಅಂತ ಕೇಳಿದರು. ನನಗೆ ಅದು ತಿಳಿದಿದ್ದರಿಂದ ನನ್ನೊಟ್ಟಿಗೆ ಬನ್ನಿ ತೋರಿಸಿತ್ತೇನೆ ಎಂದು ಹೇಳಲು ಅವರು, "ನಿಮಗೆ ಬೇರೆ ಏನಾದರು ಕೆಲಸವಿದ್ದರೆ ತೊಂದರೆಯಾಗ ಬಾರದು. ದಾರಿ ತೋರಿಸಿ ನಾವೇ ಹೋಗುತ್ತೇವೆ" ಅಂದರು. ನಾನು ಹೋಗುವ ಹೋಟೆಲಿನ ದಾರಿಯಲ್ಲಿ ಅದಿದೆ. ನನಗೆ ಏನು ತೊಂದರೆಯಿಲ್ಲ ಎಂದು ಅವರನ್ನು ಹೊಟೆಲಿನ ಬಳಿ ಬಿಟ್ಟು ಹೊರಟೆ.

ತಾಂಪರೆ ಫಿನ್ ಲ್ಯಾಂಡಿನ ಸಾಂಸ್ಕೃತಿಕ ರಾಜಧಾನಿ ಅನ್ನ ಬಹುದು. ಅಲ್ಲಿಯ ಜನರಿಗೆ ಅದು ಮೈಸೂರ! ಹಾಗಾಗಿ ಇಲ್ಲಿಗೆ ಅನೇಕ ಪ್ರವಾಸಿಗರು ಬರುತ್ತಿರುತ್ತಾರೆ. ಮತ್ತೊಂದು ಮಾಹಿತಿಯೆಂದರೆ ಅನೇಕ ಮಂದಿಯ ಕೈಯಲ್ಲಿರುವ "ನೋಕಿಯಾ" ಮೊಬೈಲಿನ ಉಗಮ ಸ್ಥಾನ ಕೂಡ ಈ ಫಿನ್ ಲ್ಯಾಂಡ್ ದೇಶ.

ನಾನು ಕೆಲವು chocolates ತೆಗೆದುಕೊಂಡು, Packing ಮಾಡಿ, ಬೆಳಿಗ್ಗೆ ಸುಮಾರು ೫ಕ್ಕೆ Alarm ಇಟ್ಟು ಮಲಗಿದೆ. ಬೆಳಿಗ್ಗೆ ೫.೩೦ - ೫.೪೫ ಕ್ಕೆ ಹೊಟೆಲ್ ಬಿಟ್ಟೆ. ಹೋಟೆಲ್ ಸಿಬ್ಬಂದಿಗೆ ಒಂದು ಟ್ಯಾಕ್ಸಿ ಬೇಕೆಂದು ಕೇಳಿಕೊಂಡೆ. ಆತ ಕರೆ ಮಾಡಿ ಟ್ಯಾಕ್ಸಿ ಕರೆಸಿದ. ಅದರಿಂದ ವಿಮಾನ ನಿಲ್ದಾಣಕ್ಕೆ ಪ್ರಯಾಣ ಬೆಳೆಸಿದೆ. ಇಲ್ಲಿಂದ ನಾನು "ಟಾಟ" ಮಾಡುವ ಕೆಲಸಕ್ಕೆ ನಾಂದಿ ಹಾಡಿದೆ. ದಾರಿಯಲ್ಲಿ ಗಮನಿಸಿದ ವಿಷಯ, ರಸ್ತೆ ಖಾಲಿಯಿದ್ದರೂ, ಕೆಂಪು ದೀಪವಿದ್ದಾಗ ಟ್ಯಾಕ್ಸಿ ಚಲಿಸಲೇ ಇಲ್ಲ! ಇಂತಹ ದೃಶ್ಯ ಭಾರತದಲ್ಲಿ ಕಾಣಿಸೋದಿಲ್ಲ.

ನಾನು ತಾಂಪರೆಯಿಂದ ಹೆಲ್ಸಿಂಕಿಗೆ ಬಂದೆ. ಸಮಯ ಸುಮಾರು ೭.೪೫ ಇರಬೇಕು. ನನ್ನ ದೆಹಲಿ ವಿಮಾನ ಇದ್ದದ್ದು, ಮಧ್ಯಾಹ್ನ ೨.೨೦ಕ್ಕೆ. ಅಲ್ಲಿಯವರೆಗು ಅಲ್ಲಿ ಸಮಯಕಳೆಯುತ್ತಿದ್ದೆ. ವಿ-ಅಂಚೆ ಮೂಲಕ ನಾನು ಹೆಲ್ಸಿಂಕಿಯಲ್ಲಿದ್ದೇನೆಂದು ತಾಯಿ ದೇವರಿಗೆ ತಿಳಿಸಿದೆ. ನಂತರ ಜ್ಯೂಸ್ ಕುಡಿದು ನನ್ನ ತಿಂಡಿ ಮುಗಿಸಿ, ಎಲ್ಲಾ ಅಂಗಡಿಗಳಲ್ಲಿ Window Shopping ಮಾಡಿದೆ.

ದೆಹಲಿಯ ವಿಮಾನ ಸಜ್ಜಾಗಿತ್ತು. ಅದು ಗಗನಕ್ಕೆ ಹಾರಿ ತುಸು ನಿಮಿಷದಲ್ಲೇ ಮುಂದಿನ ಆಸನದಲ್ಲಿ ಕೂತಿದ್ದ ಎಳೆ ಕಂದಮ್ಮ ತನ್ನಷ್ಟಕ್ಕೆ ತಾನೆ "ಇಂಡಿಯಾ ಆಗಯಾ....ಇಂಡಿಯಾ ಆಗಯಾ" ಅಂತ ಹರುಷದಲ್ಲಿತ್ತು. ಈ ದೃಶ್ಯ ಕಿರು ನಗು ಮೂಡಿಸಿ, "Good Boy Bad Boy" ಸಿನಿಮಾದತ್ತ ಕಣ್ಣು ಹಾಯಿಸುವಂತೆ ಮಾಡಿತು.

[ ನಾನು ಬರೆದ ಕವನಗಳಿಗೆ ಜಾಗ ಕೊಡುವುದಕ್ಕೋಸ್ಕರ.. "ಫಿನ್ ಲ್ಯಾಂಡಿಗೆ ಪ್ರವಾಸ ಭಾಗ ೩" ಸ್ವಲ್ಪ ದಿನಗಳ ನಂತರ ಪ್ರಾರಂಭವಾಗುತ್ತದೆ.]

9 ಜನ ಸ್ಪಂದಿಸಿರುವರು:

shivu.k said...

ಜಯಶಂಕರ್,

ಮತ್ತದೇ ಸುಂದರ ಪಿನ್‌ಲ್ಯಾಂಡ್ ಅನಾವರಣ...
ಚೆನ್ನಾಗಿದೆ....

Unknown said...

:) olle town hall !

ಧರಿತ್ರಿ said...

ನಂಗ್ಯಾಕೋ ನಿಮ್ಮ ಪ್ರವಾಸಕ್ಕಿಂತ ಕವನಗಳೇ ಇಷ್ಟ. ಅದ್ರಲ್ಲೂ ಮಕ್ಕಳ ಕವನಗಳು....
-ಧರಿತ್ರಿ

Ittigecement said...

ಅಂತರ್ವಾಣಿ..

ಖುಷಿಯಾಗುತ್ತದೆ ನಿಮ್ಮ ಪ್ರವಾಸ ಕಥನ ಓದಲಿಕ್ಕೆ..

ಸಿನೇಮಾ ಹಾಲ್ ಚೆನ್ನಾಗಿದೆ..

ಕವನಗಳನ್ನೂ ಹಾಕಿ..

ಪ್ರವಾಸ ಕಥನ ಬಹಳ ದಿನ ಕಾಯಿಸ ಬೇಡಿ...

ಚಂದದ ಬರಹಕ್ಕೆ

ಅಭಿನಂದನೆಗಳು

ಅಂತರ್ವಾಣಿ said...

ಶಿವಣ್ಣ, ಮಾ, ಪ್ರಕಾಶಣ್ಣ ವಂದನೆಗಳು

ಧರಿತ್ರಿ,

ಸ್ವಾಗತ ಅಂತರ್ವಾಣಿಗೆ. ಮಕ್ಕಳ ಕವನ ಮೆಚ್ಚಿದ್ದಕ್ಕೆ ವಿಶೇಷ ವಂದನೆಗಳು.

ಮುಂದಿನ ಕವನ ಒಂದು ಮಕ್ಕಳ ಕವನ...ತಪ್ಪದೇ ಬಂದು ನೋಡಿ.

sunaath said...

ಆಹ್, ಫಿನ್‍ಲ್ಯಾಂಡ್ ಪ್ರವಾಸ ಮುಗಿದೇ ಹೋಯಿತೆ?

ಸುಧೇಶ್ ಶೆಟ್ಟಿ said...

ಮುಗಿಸೇ ಬಿಟ್ಟಿದ್ದೀರಲ್ಲಾ?

ಪರೀಕ್ಷೆಯಿ೦ದಾಗಿ ಬ್ಲಾಗ್ ಓದಲು ಆಗಿರಲಿಲ್ಲ. ಪೂರ್ತಿಯಾಗಿ ಓದಿಕೊ೦ಡೆ ಈಗ. ಚೆನ್ನಾಗಿತ್ತು ಪ್ರವಾಸ ಕಥನ. ಕವನಗಳಿಗೆ waitingu:)

ಅಂತರ್ವಾಣಿ said...

ಸನಾಥಂಕಲ್,
ಭಾಗ ಮೂರು ಬರುತ್ತದೆ.

ಸುಧೇಶ್,
ಕವನಗಳನ್ನೂ ಒದಿ.

Harisha - ಹರೀಶ said...

ಸ್ವಲ್ಪ ದಿನಗಳು ಕಳೆದಿದ್ರೆ ಮೂರನೆಯ ಭಾಗ ಬರುವಂತಾಗಲಿ..