ನನಗೆ ಈಗ ಅನ್ನಿಸ್ತಿದೆ
ದುಡ್ಡಿನ ಗಿಡ ಇರಬೇಕಿತ್ತು!
ನನಗೆ ಬಂದ ಸಮಸ್ಯೆಗೆ
ದುಡ್ಡೇ ಉತ್ತರ ಕೊಡಬೇಕಿತ್ತು
ಚಿಕ್ಕ ವಯಸ್ನಲ್ ಅಮ್ಮ ಹೇಳಿದ್ನ
ಹಾಸ್ಯ ಅಂತ ತಿಳ್ಕೊಂಡಿದ್ದೆ
ದುಡ್ಡೂ ಕೂಡ ಹಾಳೆಯಂತೆ! ಬೆಲ್ಲೆಯಂತೆ!
ಹೇಗೆ ಬೆಳೆಸೋದ್ ಅಂದ್ಕೊಂಡಿದ್ದೆ
ವಸುಂಧರೆ ತಾಯಿ ನೀನು
ಬೀಜ ಹಾಕಿದ್ರೆ ಮರ ಮಾಡ್ತಿ
ನಾಣ್ಯವೊಂದ ಬಿತ್ತುತ್ತೀನಿ
ದುಡ್ಡಿನ ಗಿಡ ಮಾಡ್ತೀಯಾ?
ಜೀವಕ್ ಬೇಕಾದ್ ಅನ್ನ, ನೀರು
ಎಲ್ಲಾ ನೀನೆ ಕೊಡ್ತೀಯಾ
ಜೀವನ ಸಾಗಿಸೋಕ್ ಬೇಕೀ ದುಡ್ಡು
ಇನ್ನೂ ಯಾಕೆ ಕೊಟ್ಟಿಲ್ಲ?
ನಾಣ್ಯಕ್ ಜೀವ ಕೊಟ್ಟು ನೋಡು
ಬಿತ್ತಿ ಪ್ರಯತ್ನ ಮಾಡ್ತೀನಿ!
ದುಡ್ಡಿನ ಗಿಡ ಬಂದ್ರೆ ಸಾಕು
ಬಡವರ ಸಮಸ್ಯೆ ಪರಿಹರಿಸ್ತೀನಿ.
ನನಗೆ ಈಗ ಅನ್ನಿಸ್ತಿದೆ
ದುಡ್ಡಿನ ಗಿಡ ಇರಬೇಕಿತ್ತು!
ನನಗೆ ಬಂದ ಸಮಸ್ಯೆಗೆ
ದುಡ್ಡೇ ಉತ್ತರ ಕೊಡಬೇಕಿತ್ತು.
ಜ್ಞಾನದ ಬಗ್ಗೆ
-
ಜ್ಞಾನದಿಂ ಮೇಲಿಲ್ಲ| ಶ್ವಾನನಿಂ ಕೀಳಿಲ್ಲ|ಭಾನು ಮಂಡಲದಿಂ ಬೆಳಗಿಲ್ಲ ಜಗದೊಳಗೆ|ಜ್ಞಾನವೇ
ಮೇಲು ಸರ್ವಜ್ಞ||ಜ್ಞಾನದಿಂದಲಿ ಇಹವು| ಜ್ಞಾನದಿಂದಲಿ ಪರವು|ಜ್ಞಾನವಿಲ್ಲದಲೆ ಸಕಲವೂ
ತನಗಿದ್ದು|ಹಾನಿ...
15 years ago
9 ಜನ ಸ್ಪಂದಿಸಿರುವರು:
ಜಯಶಂಕರ,
ನನಗೂ ಸಹ ಅದೇ ಬೇಕಾಗಿರೋದು;ಸಿಗ್ತಾ ಇಲ್ಲ!
ಇದ್ದಕ್ಕಿದ್ದಂತೆ ಯಾಕೀ ಯೋಚನೆ? :-)
ಜಯಶನಕರ್,
ತುಂಬಾ ವಾಸ್ತವ ಇದೆ ಇದರಲ್ಲಿ, ದುಡ್ಡಿಲ್ಲದೆ ಜಗತ್ತೇ ನಡೆಯೋಲ್ಲ, ಮುಂಚೆ ದುಡ್ಡು ಇಲ್ದೆ ಇದ್ರೂ ಒಳ್ಳೆತನ ಕಾಪಾಡ್ತಿತ್ತು. ಈಗ ದುಡ್ಡೇ ಬೇಕು
Ha Ha Ha... yav thara bayake...
ಜಯಶಂಕರ್,
ಅರ್ಜೆಂಟಾಗಿ ನನಗೂ ಅದರ ಸೂತ್ರ ಬೇಕಿತ್ತು....
ಶಂಕರ್,
ಈ ಗಿಡದ ಬೀಜ ಏನಾದ್ರೂ ಸಿಕ್ಕಿದ್ರೆ ನಂಗೂ ಕೊಡಿ ಪ್ಲೀಸ್..:) ನಿಮ್ಮ ಕಲ್ಪನೆಯೇನೋ ಚೆನ್ನಾಗಿದೆ.... :)
mmenting so late. sakhat concept. nanna hesare lakshmi aadru nan hatra nu duddilla :( nanagu bekalla duddina gida !
nangu ondu duddina sasi idre bekaagittu:):)
ಎಲ್ಲಾರಿಗೂ ವಂದನೆಗಳು
ದೇವರು ನನಗೆ ದುಡ್ಡಿನ ಗಿಡ ಕೊಟ್ಟರೆ.. ಖಂಡಿತ ಎಲ್ಲರಿಗೂ ಸಸಿ ಹಂಚುತ್ತೀನಿ.
ಹರಿ,
ಸಂದರ್ಭ ನನ್ನನು ಕವಿಯಾಗಿ ಮಾಡಿದೆ.......
ಈ ಕವನ ಬರೆಸಿದೆ
Post a Comment