ನಿನ್ನ ಮರೆತಿಹ ಚಣಗಳೆಲ್ಲಿದೆ
ನಿನ್ನ ನೆನೆಯದ ದಿನಗಳೆಲ್ಲಿದೆ
ನೀನು ನನ್ನೊಳಗಿರುವ ಸತ್ಯವ ನಾನು ಮರೆತಿಲ್ಲ
ನನ್ನ ಮೊಗದಲಿ ನಗುವ ತರಿಸುವೆ
ನನ್ನ ನಯನದಿ ಬಿಂದು ಸುರಿಸುವೆ
ನನ್ನ ಕಂಬನಿ ಒರೆಸುವ ನಿನ್ನ ಹೇಗೆ ಮರೆಯಲಿ ನಾ
[ಇದನ್ನು ಯಾರ ಕುರಿತಾಗಿ ಬರೆದಿದ್ದೇನೆಂದು ಬಿಡಿಸಿ ಹೇಳ ಬೇಕಿಲ್ಲ ಅನಿಸುತ್ತೆ. ಮತ್ತೊಂದು ಭಾಮಿನೀ ಷಟ್ಪದಿಯ ಪ್ರಯತ್ನ]
ಜ್ಞಾನದ ಬಗ್ಗೆ
-
ಜ್ಞಾನದಿಂ ಮೇಲಿಲ್ಲ| ಶ್ವಾನನಿಂ ಕೀಳಿಲ್ಲ|ಭಾನು ಮಂಡಲದಿಂ ಬೆಳಗಿಲ್ಲ ಜಗದೊಳಗೆ|ಜ್ಞಾನವೇ
ಮೇಲು ಸರ್ವಜ್ಞ||ಜ್ಞಾನದಿಂದಲಿ ಇಹವು| ಜ್ಞಾನದಿಂದಲಿ ಪರವು|ಜ್ಞಾನವಿಲ್ಲದಲೆ ಸಕಲವೂ
ತನಗಿದ್ದು|ಹಾನಿ...
15 years ago
10 ಜನ ಸ್ಪಂದಿಸಿರುವರು:
ಜಯಶಂಕರ್,
ಭಾಮಿನಿ ಷಟ್ಪದಿಯಲ್ಲಿ ಬರೆದ ಕವನ ತುಂಬಾ ಚೆನ್ನಾಗಿದೆ. ನಿಮಗೆ ಷಟ್ಪದಿ ಒಲಿಯುವಂತೆ ಕಾಣುತ್ತಿದೆ ಮುಂದುವರಿಸಿ..
ಚುಟುಕಾಗಿದ್ದರೂ ಬಲು ಸೊಗಸಾಗಿದೆ ನಿಮ್ಮ ಷಟ್ಪದಿ. ಹಾಂ.. ಗೊತ್ತಾಯಿತು ಯಾರ ಕುರಿತು ಬರೆದದ್ದು ಎಂದು.... ಆ ದೇವರು ಇನ್ನಷ್ಟು ಇಂತಹ ಷಟ್ಪದಿಯನ್ನು ರಚಿಸುವ ಸಾಮರ್ಥ್ಯ ಕೊಡಲೆಂದು ಹಾರೈಸುವೆ.
ಭಾಮಿನಿ ಷಟ್ಪದಿ ಚೆನ್ನಾಗಿದೆ,.
ಸುಂದರ ಭಾಮಿನಿ!
ಎಲ್ಲರಿಗೂ ವಂದನೆಗಳು.
ನಿಮ್ಮ ಪ್ರೋತ್ಸಾಹ ಹೀಗೆ ಇರಲಿ
chennagide ri:)
ಜಯ ಶಂಕರ್ ಸರ್...
ಉತ್ತಮ ಪ್ರಯತ್ನ.. ಕವನ ಇಷ್ಟವಾಯ್ತು...
ಭಾಮಿನೀ ಷಟ್ಪದಿ ಯ ಕವನಗಳಲ್ಲಿ ಆದಿ ಪ್ರಾಸ ಇರ್ಬೇಕಂತ ನಿಯಮ... ಇಲ್ಲಿ ಅಂತ್ಯ ಪ್ರಾಸವೂ ಬಂದಿದೆ...
ಪ್ರಯತ್ನ ಮುಂದುವರೆಸಿ...
ಗೌತಮ್ ಹಾಗು ದಿಲೀಪ್ ಅವರೆ
ವಂದನೆಗಳು
ಕವನ ತುಂಬಾ ಚೆನ್ನಾಗಿದೆ.....i like it.
very nice lines...
Post a Comment