ಎಚ್ಚರಿಸುವ ಬನ್ನಿ, ಮಲಗಿರುವ ಭಾಸ್ಕರನ
ಕಾರ್ಮೋಡಗಳ ಹೊದಿಕೆಯ ಪಕ್ಕಕೆ ಸರಿಸುತ
ಕೋಗಿಲೆಗಳ ಕಂಠದಿ ಸುಪ್ರಭಾತವ ಹಾಡಿಸುತ
ಎಚ್ಚರಿಸುವ ಬನ್ನಿ, ಮಲಗಿರುವ ಭಾಸ್ಕರನ
ಎಲೆಗಳ ಮೇಲಿನ ಹನಿಗಳ ಕಣ್ಣಿಗೆ ಎರಚುತ
ಅರಳಿದ ಹೂಗಳು ಕಂಪನು ಬೀರುತ
ಹಾರುವ ಹಕ್ಕಿಯ ಸಾಲಿನ ಮೆರವಣಿಗೆಯಿಂದ
ಎಚ್ಚರಿಸುವ ಬನ್ನಿ, ಮಲಗಿರುವ ಭಾಸ್ಕರನ
ಆಗಸದಿ ತುಂಬಿಹ ಇಬ್ಬನಿ ಹಾಸು
ಇರುಳೆಂಬ ಭ್ರಮೆಯ ನೀಡುತಿದೆ!
ಗಂಟೆ ಏಳಾದರೂ ನೀ ಏಳ ಬಾರದೆ?
ಇರುಳನ್ನು ನೂಕಿ, ಬೆಳಕ ನೀಡ ಬಾರದೆ?
[ನಮಗಿಂತ ಬೇಗ ಏಳ ಬೇಕಾದ ಸೂರ್ಯ, ಆಲಸ್ಯದಿಂದ ಮಲಗಿದರೆ, ಈ ರೀತಿ ಪ್ರಾರ್ಥನೆ ಮಾಡ ಬಹುದಲ್ವಾ? ]
ಜ್ಞಾನದ ಬಗ್ಗೆ
-
ಜ್ಞಾನದಿಂ ಮೇಲಿಲ್ಲ| ಶ್ವಾನನಿಂ ಕೀಳಿಲ್ಲ|ಭಾನು ಮಂಡಲದಿಂ ಬೆಳಗಿಲ್ಲ ಜಗದೊಳಗೆ|ಜ್ಞಾನವೇ
ಮೇಲು ಸರ್ವಜ್ಞ||ಜ್ಞಾನದಿಂದಲಿ ಇಹವು| ಜ್ಞಾನದಿಂದಲಿ ಪರವು|ಜ್ಞಾನವಿಲ್ಲದಲೆ ಸಕಲವೂ
ತನಗಿದ್ದು|ಹಾನಿ...
15 years ago
9 ಜನ ಸ್ಪಂದಿಸಿರುವರು:
ಜಗತ್ತನ್ನು ಎಚ್ಚರಿಸುವ ಕೆಲಸ ಸೂರ್ಯನದು. ಆತನನ್ನೇ ಎಚ್ಚರಿಸುವ ಸಂದರ್ಭ ಬಂದರೆ! ಕಲ್ಪನೆ ತುಂಬಾ ಸೊಗಸಾಗಿದೆ.
ಅಂತರ್ವಾಣಿ,
ಎಂಥಹ ಯೋಚನೆ ನಿಮ್ಮದು, ಜಗವ ಬೆಳಗುವ ಸೂರ್ಯ ಒಂದು ದಿನ ಮಲಗಿದರೆ .....
ಕಲ್ಪಿಸಿಕೊಳ್ಳಲು ಸಾದ್ಯವಿಲ್ಲ, ಜಗದ ಜೀವನ ಪರಿಕ್ರಮವೇ ಬದಲಾಗಿಬಿಡುತ್ತದೆ,
ಒಳ್ಳೆಯ ಕವನ
:-)
ಜಯಶಂಕರ್,
ಸೂರ್ಯ ಮಲಗಿಬಿಟ್ಟರೆ! ಕಾನ್ಸೆಪ್ಟ್ ತುಂಬಾ ಚೆನ್ನಾಗಿದೆ. ಅದಕ್ಕೆ ತಕ್ಕಂತೆ ನಿಮ್ಮ ಪದ್ಯವೂ ಚೆನ್ನಾಗಿದೆ...
ನಂದು ಸೂರ್ಯವಂಶ.. ನೀ ಹೇಳಿರೋ ಪರಿಸ್ಥಿತಿ ಬರೋದೇ ಇಲ್ಲ ಬಿಡು :-)
ಸುನಾಥಂಕಲ್,
ಈ ಕಾಲದಲ್ಲಿ ಎಲ್ಲರಿಗೂ ಈ ಸಂದರ್ಭ ಬರುತ್ತೆ.
ವಂದನೆಗಳು,
ಡಾ|
ವಂದನೆಗಳು
ಲಕ್ಷ್ಮಿ,
ಇದು ಹಾಸ್ಯಕವನ ಅಲ್ಲ. ನಗೋಕೆ ಏನು ಕಾರಣ. ಚೆನ್ನಾಗಿಲ್ಲ ಅಂತಾನಾ?
ಶಿವಣ್ಣ,
ಸೂರ್ಯ ಮಲಗಿದರೆ ಇದ್ದೇ ಇದೆಯಲ್ಲ.. "ಎಚ್ಚರಿಸುವ ಬನ್ನಿ... ಮಲಗಿರುವ ಭಾಸ್ಕರನ"
ಹರೀಶ,
ನಿನ್ನ ವಂಶ ಬದಲಿಸಿಕೋ...ಸೂರ್ಯೋದಯ ನೋಡು..
ಚೆನ್ನಾಗಿದೆ ರೀ:)
gautam,
dhanyavaadagaLu :)
ಕಲ್ಪನೆ ಚೆನ್ನಾಗಿದೆ... ಪದ್ಯವೂ ಚೆನ್ನಾಗಿದೆ..
Post a Comment