ಅಂದು ಈ ರೀತಿ ಕೇಳಿದ್ದೆ,
"ಗುಬ್ಬಿ ಮರಿ ಎಲ್ಲಮ್ಮ?
ಕಣ್ಣಿಗೇಕೋ ಕಾಣದಮ್ಮ....
ಪೂರ್ತಿ ಕವನ ಇಲ್ಲಿದೆ.
ಆದರೆ ಇಂದು (ತಿಂಗಳ ಹಿಂದೆ) ಮತ್ತೆ ಗುಬ್ಬಿ ಮರಿಯನ್ನು ಬೆಂಗಳೂರಿನಲ್ಲಿ ಕಂಡೆ! ಆ ಕ್ಷಣಕ್ಕೆ ನನಗಾದ ಆನಂದವನ್ನು ಕವನದ ಮೂಲಕ ಹೇಳಬೇಕೆಂದು, ಆ ಕವನದ ಧಾಟಿಯಲ್ಲೇ ಈ ಕವನವನ್ನು ಬರೆದೆ.
ಗುಬ್ಬಿ ಮರಿ ಕಂಡೆನಮ್ಮ
ಕಣ್ಣಿಗಿಂದು ಹಬ್ಬವಮ್ಮ
ನನ್ನ ನೋಡ ಬೇಕೆಂದು
ಮತ್ತೆ ಹಾರಿ ಬಂತೇನಮ್ಮ?
ನನ್ನ ಊಟ ಸುಲಭವಮ್ಮ
ನಿನ್ನ ಓಟ ನಿಲ್ಲಿಸಮ್ಮ
ಮನೆಯ ಅಂಗಳದಿ ಬಂದ
ಗುಬ್ಬಿ ಮರಿ ತೋರಿಸಮ್ಮ
ಆಟಿಕೆ ಗುಬ್ಬಿ ಏಕಮ್ಮ?
ಹಾರುವ ಗುಬ್ಬಿ ಇದೆಯಮ್ಮ
ಮರದ ಪುಟ್ಟ ಗೂಡಿನಲ್ಲಿ
ಕೂತಿಹ ಗುಬ್ಬಿ ತೋರಿಸಮ್ಮ
Wednesday, 22 July 2009
ಗುಬ್ಬಿ ಮರಿ ಕಂಡೆನಮ್ಮ
Posted By ಅಂತರ್ವಾಣಿ at 11:07 pm 7 ಜನ ಸ್ಪಂದಿಸಿರುವರು
Saturday, 11 July 2009
ಯಾವ ಚೆಲುವ ಬರುತ್ತಾನೋ..?
ಯಾವ ಚೆಲುವ ಬರುತ್ತಾನೋ
ಈ ಚೆಲುವೆಯ ನೋಡಲು?
ಯಾವ ಸುರನು ಬರುತ್ತಾನೋ
ಈ ದೇವತೆಯ ಪಡೆಯಲು?
ಎಲ್ಲೂ ಕಾಣದ ಮೂಗುತಿ ಸುಂದರಿ
ಇಲ್ಲೇ ಇಹಳು ಮೇನಕೆ ಸೋದರಿ!
ಕಣ್ಣ ಸನ್ನೆಯಲೆ ಮಾತು ಬೆಳೆಯಿತು
ತುಟಿಯು ಅದರುತ ಮುತ್ತ ಬಯಸಿತು!
ನಿನ್ನ ದನಿಯ ಕೇಳಲು
ಚಡಪಡಿಸಿತು ಅವನ ಕಿವಿ
ನಿನ್ನ ಕುರಿತು ಗೀಚುತ
ಅವನಾದನು ಕವಿ!
Posted By ಅಂತರ್ವಾಣಿ at 12:50 am 10 ಜನ ಸ್ಪಂದಿಸಿರುವರು
ವಿಭಾಗ: ಕವನಗಳು, ಪ್ರಣಯವಾಣಿ (Romantic )
Friday, 26 June 2009
ಅಗ್ರಜಾನುಭವ - ೩
ಜ್ಞಾನದ ಶಾಯಿ ಲೇಖನಿಯೊಳಿರಲು
ಹೊಮ್ಮುವುದು ಲೇಖನವು
ಜ್ಞಾನದ ಶಾಯಿ ಬರಿದಾದ ಮೇಲೆ
ಹೊಮ್ಮದು ಒಂದಕ್ಷರವೂ - ಅಗ್ರಜ
Posted By ಅಂತರ್ವಾಣಿ at 11:02 pm 6 ಜನ ಸ್ಪಂದಿಸಿರುವರು
ವಿಭಾಗ: ಅಗ್ರಜಾನುಭವ, ಕವನಗಳು
Friday, 5 June 2009
ಹೂವಿನಂತೆ ಬಾಳು
--
ಹೂವಿನಂತೆ ಬಾಳು
ಬಾಡಿದ ಹೂ ಕಸದ ಪಾಲು
ಬಾಡದ ಹೂ ದೇವರ ಪಾಲು
ಚೆಲುವಿರಲಿ ನೋಟಕೆ
ಪರಿಮಳವಿರಲಿ ಆಕರ್ಷಣೆಗೆ
ಮುಳ್ಳಿರಲಿ ನಿನ್ನ ರಕ್ಷಣೆಗೆ
ಮಕರಂದವಿರಲಿ ಸದುದ್ದೇಶಕೆ
ಮುಡಿಯಲು ಬೇಕು ಹೂ
ಮಡಿದಾಗಲೂ ಬೇಕು ಹೂ
ಎಲ್ಲರ ಪಾಲಿಗು ಹೂವಾಗು
ಎಲ್ಲರ ಪಾಲಿಗು ಬೇಕಾಗು
Posted By ಅಂತರ್ವಾಣಿ at 8:00 am 11 ಜನ ಸ್ಪಂದಿಸಿರುವರು
ವಿಭಾಗ: ಕವನಗಳು, ವಿಶೇಷ ಕವನಗಳು