Thursday 27 December, 2007

ಅಂಬಿಗನ ಮಮತೆ

ತುಂಗೆಯ ಅಂಬಿಗ ಕಂಡನು
ತಂಗಿಯ ಕುಂಚದಿಂದ ಬಂದ
ಚಂದ್ರನ ಬೆಳದಿಂಗಳ ಚಿತ್ರವೊಂದ್ದನ್ನು.
ಬೆಳದಿಂಗಳ ಅಂದದಲಿ ತಂಗಿಯೊಂದಿಗೆ ನಿಂತಿಹನು
ಮುಂಬರುವ ಬಾಳಸಂಗಾತಿ.

ಮುಂಜಾನೆಯಿಂದ ಸಂಜೆಯವರೆಗು
ದುಡಿದು ಪಡೆದದ್ದು ಪುಡಿ ಕಾಸು,
ಅದರಿಂದಲೆ ಪೂರೈಸಿದನು ಅವಳೆಲ್ಲಾ ಕನಸು,
ಅವನ ಪಾಲಿಗೆ, ಆಕೆ ಇನ್ನು
ಎತ್ತಿ ಆಡಿಸಿದ ಪುಟ್ಟ ಕೂಸು.

ಕಳೆದುಹೋದ ಬಾಲ್ಯದ ದಿನಗಳು ಮರುಕಳಿಸಿತು,
ಕಂಗಳಲಿ ನೂರೆಂಟು ನನಪು ತುಂಬಿಕೊಂಡಿತು.
ಮರೆಯಲಾರದ ಹಿಂದಿನ ನೆನಪುಗಳು;
ಬಡತನದಲ್ಲೂ ಅಂಗಳದಲ್ಲಿ
ಹಂಚಿ ತಿಂದ ತಂಗಳು.
ಮರೆಯಲಾದೀತೆ ಅವನ ಜೀವನದಲ್ಲಿ
ತಂಗಿಯನು ಚುಂಬಿಸಿ ಮುದ್ದಿಸಿದ ಕ್ಷಣಗಳು?

ಸೂಚನೆ: ಈ ಕವನದಲ್ಲಿ ಹೊಸ ಪ್ರಯತ್ನ ಮಾಡಿದ್ದೇನೆ. ಪಲ್ಲವಿಯಲ್ಲಿ ಇರೋ ಪದಗಳೆಲ್ಲವೂ "ಅನುಸ್ವಾರ" ಇರುವ ಪದಗಳೇ ಆಗಿವೆ.

Friday 14 December, 2007

ಮಗುವಾಗಬಾರದಿತ್ತೆ?

ತೊಟ್ಟಿಲಲಿ ಕಿಲ ಕಿಲ ನಗುವಾಗ
ಜಗದ ಅರಿವಿರಲಿಲ್ಲ.
ಮಂಡಿ ಊರಿ ಅಂಬೇಗಾಲಿಡುವಾಗ
ನಾಳಿನ ಚಿಂತೆ ಇರಲಿಲ್ಲ.
ತೊದಲು ಮಾತಾಡುವಾಗ
ಭಾಷೆಯ ಗಂಧವಿರಲಿಲ್ಲ.
ತಾಯಿಯಿಂದ ಕಲಿತಾಗ ಅ ಆ ಇ
ಮೂಡಿತು ಕಲಿಯಲು ಆಸಕ್ತಿ
ನನ್ನದೇ ಆದ ಪ್ರಪಂಚವಿತ್ತು
ಬೆಳೆದಾಗ ತಿಳಿಯಿತು,
ಜೀವನವೇ ದೊಡ್ಡ ಕಸರತ್ತು
ನಾನಿನ್ನು ಮಗುವಾಗಬಾರದಿತ್ತೇ??

ಸಮವಸ್ತ್ರ ಧರಿಸಿ ಶಾಲೆಗೆ ಹೋದಾಗ
ಕಲಿತೆನು ವಿದ್ಯೆ
ಆಟವು ಇತ್ತು ಪಾಠದ ಮಧ್ಯೆ
ನವವಸ್ತ್ರ ಧರಿಸಿ ಕಛೇರಿಗೆ ಹೋದಾಗ
ಕಳೆದೆನು ಅರ್ಧಾದಿನ ಕೂತಲ್ಲಿಂದ ಏಳದೇ
ಕಳೆದ ಬಾಲ್ಯ ಮತ್ತೆ ಬರುವುದೇ?
ನಾನಿನ್ನು ಮಗುವಾಗಬಾರದಿತ್ತೇ??

ಕನಸು

ಎಲ್ಲರಿಗು ಕನಸು ಬೀಳೊದು ಸಾಮನ್ಯ. ಕನಸುಗಳು ಯಾವಾಗಲು ವಿಚಿತ್ರವಾಗಿರುತ್ತವೆ. ಒಂದು ಕನಸು ಒಬ್ಬ ಮನುಷ್ಯನಿಗೆ ಏಷ್ಟು ಬಾರಿ ಬೀಳಬಹುದು..? ಇವತ್ತು ಬಂದ ಕನಸು ನಾಳೆ ಬರಬಹುದೇ ಅಂತ ನಿಮ್ಮನ್ನ ನೀವೆ ಪ್ರಶ್ನಿಸಿಕೊಳ್ಳಿ?

ನನಗೆ ಪದೇ ಪದೇ ಒಂದು ಕನಸು ಪುನರಾವರ್ತನೆ ಆಗ್ತಾ ಇದೆ..ಯಾಕೆ ಅಂತ ಗೊತ್ತಿಲ್ಲ. ಇದು ಸುಮಾರು ವರ್ಷದಿಂದ ನಡೆದುಬರುತ್ತಾಯಿದೆ. ಹುಡುಗೀರು ಕನಸಲ್ಲಿ ಬರ್ತಿರಬೇಕು ಅಂತ ನಿಮಗೆ ಅನಿಸಿದ್ದರೆ ಅದು ತಪ್ಪು.. ಈ ಕನಸು ನನ್ನ ದೇಹ ಬಾಗಕ್ಕೆ ಸಂಬಂಧಿಸಿದ ಕನಸು.


ಕನಸು: ಎಲ್ಲೋ ಒಂದು ಮದುವೆ ಮನೆಯಲ್ಲಿ ಚೆನ್ನಾಗಿ ಊಟ ಮಾಡಿದ ಹಾಗೆ ಕನಸು...(ವಿವಾಹ ಭೊಜನವಿದು... ವಿಶಿಷ್ಟ ಭಕ್ಷ್ಯಗಳಿವು... ಹ ಹ ಹ ಹ)..ಹಾಡು ಮುಗಿತಾ ಇದ್ದಂತೆನೆ ಊಟ ಮುಗಿಯುತ್ತೆ...ನಂತರ ಕೈ ತೊಳೆದು, ಬಾಯಿ ಮುಕ್ಕಳಿಸಿದಾಗ.. ನನ್ನ ಎಲ್ಲ ಹಲ್ಲುಗಳು ಕೆಳಗೆ ಬೀಳುತ್ತವೆ..ಎಂಥಾ ಆಶ್ಚರ್ಯ!!. ನಂತರ ನನಗೆ ಮುಂದಿನ ದಿನಗಳ ಚಿಂತೆ.. ಇನ್ನು ಮದುವೆಗೆ ಮುಂಚೆನೆ ಹಲ್ಲು ಬಿದ್ದೋಗಿದೆ ಯಾರೂ ಹೆಣ್ಣು ಕೊಡೋದಿಲ್ಲವಲ್ಲ ಅಂತ , ಕೆಲಸಕ್ಕೆ ಹೋಗೋದಾದರು ಹೇಗೆ

ಈ ಕನಸು ಮುಗಿತಿದ್ದ ಹಾಗೆ ಭಯದಿಂದ ಎಚ್ಚರವಾಗುತ್ತೆ.. ನನ್ನ ಹಲ್ಲುಗಳನ್ನ ಒಮ್ಮೆ ನೋಡ್ಕೋತೀನಿ.. ಎಲ್ಲ ಭಧ್ರವಾಗಿದೆ ಅಂದ್ಮೇಲೆ ಮನಸ್ಸಿಗೆ ನೆಮ್ಮದಿ..

ಏಕಾಕ್ಷರಿ


ಗಂಗಾ ಗಂಗಾ ಗಾ ಗಾ
ಗಂಗಾ ಗಾಗೆ ಗೋ ಗಾ ಗಾ
ಗಿ ಗಿ ಗಂಗಾ ಗಾ ಗು
ಗಂಗಾಗೆ ಗಂಗು ಗುಂಗು
ಗಂಗು,ಗಂಗ ಗಾಗೆ ಗುಂಗು

ಅರ್ಥ:

ಗಂಗಾ ಅನ್ನೊ ಹುಡುಗಿ ಹಾಡ್ತಾಯಿದ್ದಾಳೆ. ಅವಳ ಹಾಡಿಗೆ ಹಸುಗಳು ಕೂಡ ಜೊತೆ ಹಾಡಲು ಪ್ರಯತ್ನ ಮಾಡ್ತ ಇವೆ. ಗಿಣಿಗಳು ಕೂಡ ಗಂಗಾ ಹಾಡನ್ನು ಗುಣುಗ್ತಾ ಇವೆ. ಗಂಗಾ ಗಂಗಾಧರನ ಗುಂಗಲ್ಲಿ ಹಾಡ್ತಾಯಿದ್ದಾಳೆ.ಗಂಗಾಧರನು ಗಂಗಾ ಹಾಡಿನ ಗುಂಗಲ್ಲೆಯಿದ್ದಾನೆ.

ಸೂಚನೆ: ಈ ಏಕಾಕ್ಷರಿ ಬಗ್ಗೆ ನನಗೆ ತಿಳಿಸಿದವರು.. ತ.ವಿ.ಶೀನಿವಾಸ್. ಅದರ ಸ್ಪೂರ್ತಿಯಿಂದ ನಾನು ಬರೆದ ಕವನ.


ತಂಗಾಳಿ

ಬೀಸುವೆ ನಾನು ಅಲೆಗಳ ಚಲನೆಗಲ್ಲ
ಬೀಸುವೆ ನಾನು ಎಲೆಗಳ ಪಲ್ಲಟಕ್ಕಲ್ಲ
ಬೀಸುವೆ ನಾನು ಹೂವಿನ ಸುಗಂಧ ಬೀರುವುದಕ್ಕಲ್ಲ

ಬೀಸುವೆ ನಾನು ಬೆಳದಿಂಗಳ ರಾತ್ರಿಯಲಿ
ನೀನಿರುವಾಗ ಅವಳ ಮನದಲಿ
ಅವಳಿರುವಾಗ ನಿನ್ನ ಎದುರಲಿ

ಬೀಸುವೆ ನಾನು ನಿಮ್ಮ ನಡುವಿನ ಮೌನ ಮುರಿಯಲು
ಬೀಸುವೆ ನಾನು ನಿಮ್ಮ ಮೊಗದಿ ಕಿರುನಗೆ ಕಾಣಲು
ಬೀಸುವೆ ನಾನು ಮಂತ್ರಘೋಷವಾಗಿ
ಬೀಸುವೆ ನಾನು ಮಂಗಳವಾದ್ಯವಾಗಿ
ನಿಮ್ಮಿಬ್ಬರ ಒಂದು ಮಾಡಲು

Finland ಚಳಿ

ಸೂರ್ಯನಿದ್ದರೂ ಇಲ್ಲಿ
ತುಂಬಾ ತುಂಬಾ ಚಳಿ
tar road ಎಲ್ಲಾ snow road ಆಗಿಹುದು
ಸಮುದ್ರದ ನೀರಂತೂ ಗೆಡ್ಡೆಯಾಗಿಹುದು

ಎಲ್ಲಿ ನೋಡಿದರು snow ಫಾಲು
ಅದರ ಮೇಲೆ ಜನರ ಕಾಲು
ಇರಲೇಬೇಕು ಮೈ ಮೇಲೆ
sweatarru, jarkinnu, ಶಾಲು
ಕೈ ಇರಬೇಕು gloves ಒಳಗೆ,
ತಲೆಯು, Cap ಒಳಗೆ
ಕಾಲು, shoes ಒಳಗೆ

ಹೊಟೆಲ್ ಒಳಗೂ, office ಒಳಗೂ
ಕಾಲಿಟ್ಟರೆ ಸಾಕು
ಬದುಕುವುದು ನನ್ನ ಜೀವ
ಮನದೊಳಗೆ ಇನ್ನೂ ಇದೆ
ಮನೆಯಿಂದ ದೂರನಿದ್ದೀನಲ್ಲ .......!!!!
ಯಾರಿಗೆ ಹೇಳಲಿ ನನ್ನ ನೋವ?

ದುರಾದೃಷ್ಟ


ಬರಲಿಲ್ಲ ಅದೃಷ್ಟ ಕದ ತಟ್ಟಿ
ಈಡೇರಲಿಲ್ಲ ಮನದಾಸೆ
ಬಾಳಿಗಾಯಿತು ಅಡ್ಡ ಪಟ್ಟಿ.


ಯಾವ ಮಾಯದಾಟ ತಿಳಿದಿದೆಯೋ ದೇವರಿಗೆ
ದಾಳವಾಗಿ ಅವನು,
ಕಾಯಿಯಾಗಿ ನಾನು
ಕೂಡಿ ಆಡುತಿರುವೆವು
ಜೀವನದ ಆಟ


ದಾಳದ ಗರದಂತೆ ನಡೆಯುವುದು ನಿರ್ಜೀವ ಕಾಯಿ
ದಾಳವೇ ನಿರ್ಧರಿಸುವುದು ಅದರ ಸ್ಥಿತಿ
ಕಾಯಿಗಿಲ್ಲ ಅನುಮತಿ.


ಹಣ್ಣಾಗುವ ಕಾಲದಲ್ಲಿ ಬೀಳದು ಬೇಕಾದ ಗರ,
ಬರುವುದು ಹಿಂದೆ ಬೇರೊಂದು ಕಾಯಿ
ಆಗುವುದು ಆಟದಲ್ಲಿ ಅಪಸ್ವರ
ಪುನಃ ಪ್ರಾರಂಭಿಸಬೇಕು ಆಟ ಮೊದಲಿನಿಂದ
ಕಾಯಿಯನ್ನು ಹಣ್ಣುಮಾಡುವ ಆಸೆಯಿಂದ


ಬಂದರೆ ಅದೃಷ್ಟ ಕದ ತಟ್ಟಿ
ಕಾಯಿಯಾಗುವುದು ಹಣ್ಣು
ಆ ದಿನ ಬರಲೆಂದು
ಕಾದಿರುವ ಕಾಯಿ ನಾನು
ದಾಳದ ಗರ ನನ್ನ ಪರವಾಗಲಿ
ಜಯವು ನನಗೆ ಸಿಗಲಿ

ಚಲುವೆಗೆ ಬಲೆ

ಕೊನೆ ಕಾಣದ ಕಡಲಿನಲಿ
ರಭಸವಾಗಿ ಬಂದ ಅಲೆಯು
ಮರಳ ರಾಶಿಯ ಮೇಲೆ
ಬೆರಳ ತುದಿಯಿಂದ ಬರೆದ
ನಿನ್ನ ಹೆಸರ ಮೇಲೆ ಬೀಸಿತದರ ಬಲೆ |

ನಿನ್ನ ಹೆಸರು ಸೋಕಿದಾಗ
ಅದರ ರಭಸ ಕಡಿಮೆಯಾಗಿ
ಬಂದ ಹಾದಿಯಲ್ಲೇ
ಹಿಂದೆ ಹೋಗುವ ಶಪಥ ಮಾಡಿ
ಮುತ್ತೊಂದ ನೀಡಿತು ನಿನಗೆ ಕಾಣಿಕೆಯಾಗಿ |

Wednesday 12 December, 2007

ನಾಲ್ಕು ಕಣ್ಣುಗಳು

ನನಗೀಗ ನಾಲ್ಕು ಕಣ್ಣುಗಳು !!!. ಹೀಗೆ ಅಂದಾಗಲೆ ನಿಮ್ಗೆ ಗೊತ್ತಾಗಿರಬೇಕು ನಾನು ಸೋಡಾ ಬುಡ್ಡಿ ಅಂತ ಅಲ್ವ?
ಈಗ ಕೆಲವು ತಿಂಗಳ ಹಿಂದೆ Doctor ನನಗೆ aunty ಒಬ್ಬರನ್ನು ಜೊತೆಗೆ ಕೊಟ್ಟಿದ್ದಾರೆ. ಅದೆ aunty(anti)glare glasses.

ನಾನು ಹುಟ್ಟೋವಾಗ ದೇವರಿಂದ ಪಡೆದದ್ದು ಎರಡು ಕಣ್ಣುಗಳು. ಈಗ ವೈದ್ಯರಿಂದ ಪಡೆದದ್ದು ಮತ್ತೆರಡು ಕಣ್ಣುಗಳು.
ದೇವರಿಂದ ಪಡೆದ ಅಂಗಗಳು, work ಆಗದೆ ಇದ್ದಾಗ ಅಥವ ಅದಕ್ಕೆ updates ಬೇಕಾದಾಗ ನಾವು ವೈದ್ಯರ ಹತ್ತಿರ ಹೋಗಬೇಕು. ಅವರು ಅದಕ್ಕೆ ಸೂಕ್ತವಾದ update ಮಾಡಿ ಪುನಃ ಹಿಂದಿನ ಸ್ಥಿತಿಗೆ ತರುವ ಪ್ರಯತ್ನ ಮಾಡುತ್ತಾರೆ. ಈ ಕೆಲ್ಸಕ್ಕೆ ಅಲ್ವೇ "ವೈದ್ಯೋ ನಾರಾಯಣೋ ಹರಿಃ"ಅನ್ನೋದು.

ದೇವರು ತುಂಬಾ ಕಿಲಾಡಿ. ನಮ್ಮ body partsಗಳಿಗೆಲ್ಲಾ future enhancements ಅಥ್ವಾ updates ಎಲ್ಲಾ ಬೇಕು ಅಂತ ಮುಂಚೆನೆ ಗೊತ್ತಿತ್ತು ಅನ್ಸುತ್ತೆ.., ಅದಕ್ಕೆ ನೋಡಿ ಎಂಥ ಕೆಲಸ ಮಾಡಿದಾನೆ. ನಮ್ಮ ಎರಡು ಕಣ್ಣಿನ ಪಕ್ಕದಲ್ಲಿ ಕಿವಿಗಳನ್ನು ಕೊಟ್ತಿದ್ದಾನೆ. ಆ ಕಿವಿಯ ಮೇಲ್ಭಾಗವನ್ನು ಮುಖಕ್ಕೆ ಅಂಟಿಸದೇ ಬಿಟ್ಟಿದ್ದಾನೆ (ಕೆಲವರ ಕಿವಿಯ ಕೆಳಭಾಗ ಅಂಟಿಕೊಂಡಿರೋದು ನಾನು ಗಮನಿಸಿದ್ದೀನಿ. ನಿಮ್ಮ ಕಿವಿಯ ಕೆಳಭಾಗ ಏನಾಗಿದೆ..??). ಏಕೆಂದರೆ.. ಮತ್ತೆರಡು ಕಣ್ಣುಗಳು ಇಡಲು ಅನುಕೂಲವಾಗಲಿ ಅಂತ.. ಹೌದಲ್ವಾ??

ನಮ್ಮ ಸುತ್ತ ಮುತ್ತ ಪ್ರತಿದಿನಿ ಕನ್ನಡಕ ಹಾಕೋರನ್ನು ನೋಡ್ತೀವಿ, ಅದೇ ರೀತಿ ಕಿವಿ ಕೇಳಿಸದೆ machine ಹಾಕಿಕೊಂಡಿರೋರು ಇರುತ್ತಾರೆ, ಇನ್ನು ಅನೇಕ ರೀತಿಯಾದ ಅಂಗವಿಕಲ ಜನರು ಇರುತ್ತಾರೆ. ಅಂಥಾ ಜನರನ್ನು ಸೋಡು, ಕುರುಡ (ಒಮ್ಮೊಮೆ ಕುಳ್ಡ ಅಂತಾರೆ), ಅಥವ, ಕಿವುಡ, ..ಹೀಗೆ ಅನೇಕ ರೀತಿಯಾಗಿ ಕರೆದು ಅವರಿಗೆ ಗೌರವ ಕೊಡದೇ ಅವಮಾನ ಮಾಡುತ್ತಾರೆ. ಅವರ ಮನಸ್ಸಿನ ನೋವು ಗೊತ್ತಾಗ ಬೇಕಾದರೆ ಆ ಸ್ಥಿತಿಯಲ್ಲಿ ನಿಮ್ಮನ್ನು ನೀವು ಕಲ್ಪನೆ ಮಾಡಿಕೊಳ್ಳಿ.

ಈ ಲೇಖನದಿಂದ ಏನು ಹೇಳೋಕೆ ಬಯಸುತ್ತೇನೆ ಅಂದರೆ, ಯಾರೆ ಆಗಲಿ ಅವರಿಗೆ ಗೌರವ ಕೊಡುವ ಕಾರ್ಯ ನಾವು ಮಾಡಬೇಕು.

ಕನಸಿನ ರಾಣಿ

ಕನಸಿನಲಿ ಕಣ್ಮುಂದೆ ಬಂದ ಚೆಲುವೆ
ಕಣ್ತೆರೆಯಲು ಕಾಣದಾದೆ..
ಎಲ್ಲಿ ಹೋದೆ ನೀ ನನ್ನ ತೊರೆದು?


ರವಿಯ ಕಿರಣ ನಿನ್ನ ಚುಚ್ಚಿ
ನಮ್ಮಿಬ್ಬರ ಬೇರ್ಪಡಿಸಿತು.
ನನ್ನ ಕಣ್ಣೊಳಗೆ ಇರಲು ಅಂಜಿಕೆಯೇ
ಏಕೆ ಮಾಯವಾದೇ ನನ್ನಿಂದ?


ಕನಸಿನ ಆಸೆಯ ಕಣ್ಣೀರಾಗಿಸಬೇಡ
ಮತ್ತೊಮ್ಮೆ ನಿನ್ನ ನೆನಪಲ್ಲೇ ನಿದ್ರಿಸಿರುವೆ
ಬಂಧಿಸುವೆ ಕಣ್ಣ ಕೋಟೆಯಲಿ ಭದ್ರವಾಗಿ
ನೀ ಇದ ನೋಡುವೆಯ?

ಪರಿಸರ

ಕಾಣುತಿದೆ ಹಸಿರು ಕಣ್ತುಂಬ
ಹಕ್ಕಿಯ ಕೂಗು ಇರಲು ಕಿವಿತುಂಬ
ತಂಗಾಳಿ ಬೀಸಿ ಕಣ್ಮುಚ್ಚಲು
ನಿನ್ನ ನೆನಪೇ ಮನತುಂಬ

ನೀರಿನ ಕಲರವ ಕಿವಿಗೆ ಬಡಿದಾಗ
ಮನದಲ್ಲಿನ ಉಲ್ಲಾಸ ನೀ ಬಲ್ಲೆಯ?
ಹಗಲು ಇರುಳ ನಡುವೆ ಕೊಟ್ಟಿರುವೆ ಕೆಲ ಸಮಯ
ಅದು ವ್ಯರ್ಥವಾಗದಂತೆ
ಉಪಯೊಗಿಸುವುದು ನಮ್ಮ ಕರ್ತವ್ಯ

ನಮಗಾಗಿ ಕೊಟ್ಟಿರುವೆ ನೀ ಸಾಕಷ್ಟು ಉಡುಗೊರೆ
ಹಣ್ಣು, ನೀರು, ದವಸ ಧಾನ್ಯ
ನಿನಗಾಗಿ ಕೊಟ್ಟೆವು ನಾವು
ಎಲ್ಲಾ ಕಡೆ ಮಾಲಿನ್ಯ
ನೀನಿಲ್ಲದೆ ನಮ್ಮಗಿಲ್ಲ ಜೀವನ
ಹಾಳು ಮಾಡುತಿರುವರು ಕೆಲವರು ನಿನ್ನ ಜೀವನ
ಎಚ್ಚೆತ್ತು ಕೊಳ್ಳಿರಿ ಜನರೇ
ಉಳಿಸಿರಿ ನಮ್ಮ ಪರಿಸರ

ಹುಟ್ಟು ಹಬ್ಬದ ಕಾಣಿಕೆ

ಮತ್ತೆ ಮತ್ತೆ ಬರಲಿ ಈ ದಿನ
ನೀನು ಮರೆಯಲಾರದ ಈ ದಿನ
ಹರಸುವೆ ನಿನಗೆ ಇದಾಗಲಿ ಸುದಿನ... ನಿನ್ನ ಜನುಮದಿನ.

ಹೂವಿನಂತಿರಲಿ ನಿನ್ನ ಜೀವನ
ಬಯಸಬೇಡಾ ನೀ ಮುಳ್ಳನ್ನ
ಸಿಗುತಿರಲಿ ನಿನಗೆ ಪ್ರತಿದಿನ.. ನೀ ಬಯಸಿದ್ದನ್ನ

ಜೇನಿನಂತಿರಲಿ ನಿನ್ನ ಜೀವನ
ಮರೆತುಬಿಡು ನೀ ಕಹಿಯನ್ನ
ಸಿಗುತಿರಲಿ ನಿನಗೆ ಪ್ರತಿದಿನ.. ನೀ
ಬಯಸಿದ್ದನ್ನ

ತಾಯಿ

ತಾಯಿಗಿಂತ ದೇವರಿಲ್ಲ
ಎಂಬ ಮಾತು ಸುಳ್ಳಲ್ಲ.
ಸುಳ್ಳನೆಂದು ಆಡುವುದಿಲ್ಲ
ಆಡುವುದ ಕಲಿಸಿಹಳಲ್ಲ.
ಕಲಿಸಿಹಳು ನನಗೆ ಅ ಆ ಇ ಈ
ಈ ನನ್ನ ದೇವತೆ.
ದೇವತೆಗೂ ಮಿಗಿಲು ಇವಳು
ಇವಳಿಗೆ ನನ್ನ ಆಧ್ಯತೆ.
ಎತ್ತಾಡಿಸಿ ಮುದ್ದಿಸಿಹಳು ನನ್ನ
ನನ್ನ ಜೀವನ ರೂಪಿಸಿಹಳು.