ಕದಲದೆ ಕೂತಿವೆ ಎರಡು ಬೊಂಬೆಗಳು
ಕಣ್ಣೀರು ಸುರಿಸುತ್ತಿವೆ ಎರಡು ಕಣ್ಣುಗಳು
ಕನಸಿನಲೋಕದಲ್ಲಿ ವಿಹರಿಸುತ್ತಿವೆ ಬೊಂಬೆಗಳು
ಈ ನೋಟವ ನೋಡಿವೆ ಹಲವು ಕಣ್ಣುಗಳು.
ಜೀವನದ ಕನಸ ಹೊತ್ತ ಬೊಂಬೆಗಳು
ಪಡೆದವು ಮತ್ತೆರಡು ಬೊಂಬೆಗಳು
ಎರಡು ನಾವೆಯ ಪಯಣದಿ
ಬೊಂಬೆಗಳಾದವು ಕಣ್ಣುಗಳು
ಬೆಳೆದ ಬೊಂಬೆಗಳು ಕದಲದೆ ಕೂತು
ಕಣ್ಣೀರ ತರಿಸಿದವು ಕಣ್ಣುಗಳಲ್ಲಿ.
ಭಗವಂತನ ನಿಯಮದಂತೆ
ಬೊಂಬೆಗಳೇ ಕಣ್ಣುಗಳು, ಕಣ್ಣುಗಳೇ ಬೊಂಬೆಗಳು!
Monday, 28 July, 2008
ಎರಡು ಬೊಂಬೆಗಳು
Posted By ಅಂತರ್ವಾಣಿ at 10:51 pm 4 ಜನ ಸ್ಪಂದಿಸಿರುವರು
ವಿಭಾಗ: ಕವನಗಳು
Saturday, 19 July, 2008
ಸ್ನೇಹ ಕೋಟೆ
ಹಿಂದೊಂದು ದಿನದಂದು
ನೀನಾಡಿದ ನುಡಿಯೊಂದು
ಬಯಸದೇ ಯಾವ ಕೆಡುಕನ್ನು
ಬೆಸೆಯಿತು ಈ ಸಂಬಂಧವನ್ನು
ಅಪರಿಚಿತ ನಾ
ಅಪರಿಚಿತೆ ನೀ
ಸ್ನೇಹ ಕೋಟೆಗೆ ಪಾಯವ
ಕಟ್ಟಿದವಳು ನೀ
ಮೌನ ರಾಜ ನಾ,
ಮೌನ ಗೌರಿ ನೀ
ಭದ್ರ ಸ್ನೇಹ ಕೋಟೆಯ
ಕಟ್ಟಿದೆವು ಕೂಡಿ
ಬಿರುಗಾಳಿ ಬೀಸಲಿ
ಭೂಕಂಪವಾಗಲಿ
ಸುಭದ್ರ ನಾವಿಬ್ಬರೂ
ಆ ಸ್ನೇಹ ಕೋಟೆಯಲಿ
Posted By ಅಂತರ್ವಾಣಿ at 1:02 am 7 ಜನ ಸ್ಪಂದಿಸಿರುವರು
ವಿಭಾಗ: ಕವನಗಳು
Sunday, 13 July, 2008
ನಲ್ಲೆಯ ನೆನಪು
ಮಲ್ಲಿಗೆ ಹೂವ ಮುಡಿದ ನಲ್ಲೆ
ಕರದಿ ಹಿಡಿದು ಕಬ್ಬಿನ ಜಲ್ಲೆ
ಮೆಲ್ಲಗೆ ಹೆಜ್ಜೆ ಇಟ್ಟಾಗ ನಲ್ಲೆ
ಕರ ರಚಿಸಿತು ಕಬ್ಬವನಲ್ಲೆ!
ನೀ ಕುಣಿಯಲು ನೀರು ಹರಿಯಿತು
ನೀ ಮುನಿಯಲು ನೀರು ಬತ್ತಿತು
ನೀ ಶಾಂತಳಾಗಿ ಶಿವನ ಧ್ಯಾನಿಸೆ
ನೀರು ತುಂಬಿತು ನದಿಯೊಳು
ನಿನ್ನ ನೆನಪು ಕಾಡಲು
ಚಿಕ್ಕದೆನಿಸಿತು ಕಡಲು
ನೀನು ನಗೆಯ ಬೀರಲು
ಚಂದ್ರನಿಲ್ಲದೆ ಬೆಳದಿಂಗಳು!
Posted By ಅಂತರ್ವಾಣಿ at 12:00 am 7 ಜನ ಸ್ಪಂದಿಸಿರುವರು
ವಿಭಾಗ: ಕವನಗಳು, ಪ್ರಣಯವಾಣಿ (Romantic )
Tuesday, 8 July, 2008
ಹಸನ್ಮುಖಿ
ನಿನ್ನ ಕುರಿತು ಬರೆಯಲು ಕೂತೆ
ಪದಗಳ ಮರೆಸಿತು ಆ ನಿನ್ನ ನಗು!
ಏನೂ ಬರೆಯದೆ ನಾ ಸೋತೆ
ಸೋಲನ್ನು ಮರೆಸಿತು ಆ ನಿನ್ನ ನಗು!
ನುಡಿಗಳ ನಡುವೆ ನೀ ನಗುತಿರುವೆ
ನಾಡಿಮಿಡಿತದಲ್ಲೂ ನಗೆ ತುಂಬಿಕೊಂಡಿರುವೆ
ಮಡಿಯದ ಆ ನಗು ಇರಲಿ ನಿನ್ನಲಿ
ಪ್ರತಿ ಕ್ಷಣವು ಹುರುಪು ತರಲಿ ನನ್ನಲಿ
ನಿನ್ನ ನಗುವಿನ ಬಗೆಯ ತಿಳಿಸು
ಅರಿತುಕೊಳ್ಳುವೆ ಅದ ನಾನು
ಮೊಗದಲಿ ನಗುವು ಮನೆಯ ಮಾಡಿರಲು
ಹಸನ್ಮುಖಿಯು ನೀನೆನಲು ತಪ್ಪೇನು?
Posted By ಅಂತರ್ವಾಣಿ at 11:17 pm 6 ಜನ ಸ್ಪಂದಿಸಿರುವರು
ವಿಭಾಗ: ಕವನಗಳು, ಪ್ರಣಯವಾಣಿ (Romantic )