Tuesday, 8 July 2008

ಹಸನ್ಮುಖಿ

ನಿನ್ನ ಕುರಿತು ಬರೆಯಲು ಕೂತೆ
ಪದಗಳ ಮರೆಸಿತು ಆ ನಿನ್ನ ನಗು!
ಏನೂ ಬರೆಯದೆ ನಾ ಸೋತೆ
ಸೋಲನ್ನು ಮರೆಸಿತು ಆ ನಿನ್ನ ನಗು!

ನುಡಿಗಳ ನಡುವೆ ನೀ ನಗುತಿರುವೆ
ನಾಡಿಮಿಡಿತದಲ್ಲೂ ನಗೆ ತುಂಬಿಕೊಂಡಿರುವೆ
ಮಡಿಯದ ಆ ನಗು ಇರಲಿ ನಿನ್ನಲಿ
ಪ್ರತಿ ಕ್ಷಣವು ಹುರುಪು ತರಲಿ ನನ್ನಲಿ

ನಿನ್ನ ನಗುವಿನ ಬಗೆಯ ತಿಳಿಸು
ಅರಿತುಕೊಳ್ಳುವೆ ಅದ ನಾನು
ಮೊಗದಲಿ ನಗುವು ಮನೆಯ ಮಾಡಿರಲು
ಹಸನ್ಮುಖಿಯು ನೀನೆನಲು ತಪ್ಪೇನು?

6 ಜನ ಸ್ಪಂದಿಸಿರುವರು:

Lakshmi Shashidhar Chaitanya said...

super- aateeta ! sakhattagide ri... :) :)

sunaath said...

ಎಷ್ಟು ಸರಳವಾಗಿದೆಯೋ ಅಷ್ಟೇ ಸುಂದರವಾಗಿದೆ.

Anonymous said...

Sakathagidhe Jay :-).. Nim any other articles thara.. :-) Always Superb..

ಕುಕೂಊ.. said...

ಸೊಗಸಾಗಿದೆ

Sudi said...

ಯಾರು ನಿನ್ನನು ಕಾಡಿದ ಆ ಹಸನ್ಮುಖಿ .... ಚೆನ್ನಾಗಿ ವರ್ಣಿಸಿದ್ದೀಯ ಹಸನ್ಮುಖಿಯನು

ತೇಜಸ್ವಿನಿ ಹೆಗಡೆ said...

ಶಂಕರ್,

ಸರಳ ಸುಂದರ ಕವನ.. ಕೆ.ಎಸ್.ಅವರ ಚಂದ್ರಮುಖಿ ನೀನೆನಲು ತಪ್ಪೇನೆ? ಎನ್ನುವ ಕವನವನ್ನೊಮ್ಮೆ ನೆನಪಿಸಿತು.