ಫಲವ ಬಯಸದೇ ನಿನ್ನ
ಕೆಲಸವ ಮಾಡುತಿರು,
ಫಲವೇ ನಿನ್ನರಸುವುದು ಅಗ್ರಜ
ಚಿಕ್ಕ ಮೌಲ್ಯವೆಂದು ಒಂದನ್ನು,
ಪಕ್ಕದಲ್ಲಿಟ್ಟು ಕಡೆಗಣಿಸಿದರೆ
ಮಿಕ್ಕ ತೊಂಬತ್ತೊಂಬತರ ಮೌಲ್ಯ
ಲೆಕ್ಕಕ್ಕೆ ದೊರೆಯುವುದಿಲ್ಲ ಅಗ್ರಜ
ಹೊಸ ವಸ್ತು, ಹೊಸ ವಸ್ತ್ರ, ಹೊಸ ವರ್ಷವೆನ್ನುತ್ತಾರೆ
ತಾಸು, ದಣಿಯದೆ ಓಡುತಿರಲು
ಹೊಸದೇನಿರುವುದು ವಸುಂಧರೆಯಲಿ ಅಗ್ರಜ