Tuesday, 7 February 2012

ವ(ಹ)ರ್ಷ ಕವನ

೨೦೧೨ರ ಹೊಸ ವರ್ಷವನ್ನು ನಾನು ಪುಟಾಣಿಗಳ (ದೀಪು, ರಶ್ಮಿ, ರಾಧಿಕ, ರಂಜಿತಾ, ಸಂಧ್ಯಾ) ಜೊತೆ ಆಚರಿಸಿದೆ. ಈ ಕುರಿತಾಗಿ ಬರೆದ ಕವನ.

ನೆನ್ನೆ  ಇತ್ತು ಆಚರಣೆ
ಬೆಳಗಿನವರೆಗೂ ಜಾಗರಣೆ !

ಸೇರಿದೆವು ಸಂಜೆ ಕೊಳದ ಬಳಿ
ಜೊತೆಯಾಯಿತು ತಂಗಾಳಿ
ಆಡಿದೆವಲ್ಲಿ ಹಲವಾರು ಆಟ
ಯಾರು ಕಳಿಸಿಕೊಟ್ಟರೋ ಸಮಯಕ್ಕೆ ಓಟ !

ಗಡಿಯಾರದ ಮುಳ್ಳಿಗೋ
ಗುರಿ ಮುಟ್ಟುವ ಕಾತರ
ಅಡುಗೆ ಮನೆಯ ಊಟವ
ಬಯಸಲಿಲ್ಲ ನಮ್ಮುದರ!

ಮಾತಿನರಮನೆಯೇ ನೆಲೆಸಿತ್ತಲ್ಲಿ
ಮೌನ ಮಂಕಾಯಿತು
ಭಾವನೆಗಳು ತುಂಬಿತ್ತಲ್ಲಿ
ಗಾನ ಲಾಸ್ಯ ಮೂಡಿತು

ಕೊರೆವ ಆ ಚಳಿಯಲ್ಲೂ  
ನಮಗೊಂದೇ ಆಸೆ, ಐಸ್ ಕ್ರೀಮು ತಿನ್ನಬೇಕೆಂದು
ನೆನೆಪಿಸಿ ಕೊಂಡರೆ ಈಗಲೂ
ನಮಗೊಂದೇ ಆಸೆ, ಹೊಸ ವರ್ಷ ಬರಬೇಕೆಂದು

ನೆನ್ನೆ  ಇತ್ತು ಆಚರಣೆ
ಹೊಸ ವರ್ಷಕೆ ಜಾಗರಣೆ!

5 ಜನ ಸ್ಪಂದಿಸಿರುವರು:

sunaath said...

ಹೊಸ ವರ್ಷದ ಆಚರಣೆ ಹಾಗು ಆಚರಣೆಯ ಕವನ ಚೆನ್ನಾಗಿವೆ. ಆದರೆ ಇಷ್ಟು ದಿನ ಎಲ್ಲಿದ್ದಿರಿ?

Ittigecement said...

ಕವನ ಬಹಳ ಚೆನ್ನಾಗಿದೆ..
ಬಹಳ ದಿನಗಳ ನಂತರ ನಿಮ್ಮ ಬ್ಲಾಗಿಗೆ ಬಂದೆ...

ಎಲ್ಲಿದ್ದೀರಿ?
ಹೇಗಿದ್ದೀರಿ?

"ಖುಷಿ ಕೊಡುತ್ತವೆ...
ಈಗ..
ಗತಕಾಲದ ..
ಕಹಿ ಕೂಡ...
ನೆನಪುಗಳೇ ಹೀಗೆ...ಖುಶಿ ಕೊಡುತ್ತವೆ.."

ಮನದಾಳದಿಂದ............ said...

ಪರವಾಗಿಲ್ಲ, ಚನ್ನಾಗಿಯೇ ಆಚರಿಸಿಸ್ದಿರಿ ಹೊಸ ವರ್ಷದ ಸುಂದರ ಗಳಿಗೆಯನ್ನು.
ಕವನ ಇಷ್ಟವಾಯ್ತು.

ಅಂತರ್ವಾಣಿ said...

ಎಲ್ಲಾರಿಗೂ ವಂದನೆಗಳು :)
ನನ್ನ ಕೆಲಸದ ಮಧ್ಯೆ ಬಿಡುವು ಸಿಗದ ಕಾರಣ ಬ್ಲಾಗಿಸಲು ಆಗಿರಲಿಲ್ಲ :-)

Girish said...

ಚೆನ್ನಾಗಿದೆ ಶಂಕರ, ಜಯಶಂಕರ. ನಾನು ಸಾಮಾನ್ಯವಾಗಿ ಏನಾದರೂ ಠೀಕೆ ಹಾಕುತ್ತೇನೆ ಆದರೆ ಇದು ತುಂಬಾ ಚೆನ್ನಾಗಿ ಬಂದಿದೆ. Full Marks - 10/10 :)