Saturday 15 April, 2017

ಹೆಂಡತಿಯೊಬ್ಬಳು ಮನೆಯೊಳಗಿದ್ದರೆ

ಹೆಂಡತಿಯೊಬ್ಬಳು ಮನೆಯೊಳಗಿದ್ದರೆ
ಮನೆಯಲ್ಲೆಲ್ಲ ಸದ್ದು
ಹೆಂಡತಿಯೊಬ್ಬಳು ಹತ್ತಿರವಿದ್ದರೆ
ನನಗವಳೇ ಮುದ್ದು

ನಲ್ಲಿಯ ತಿರುಗಿಸಿ ನೀರನು ಹರಿಸಿ
ಮನೆಯಲ್ಲಾ ಕೊಳವು
ನಾನು ಮನೆಗೆ ಬರುವ ವೇಳೆಗೆ
ಏನೂಯಿಲ್ಲ ಸುಳಿವು

ಕೋಸಿನ ಹುಳಿಯನು ಮಾಡಿದಳಂದು
ತುಂಬಾ ಪ್ರೀತಿಯಿಂದ
ತೊಗರಿಯ ಬದಲು ಕಡ್ಲೆ ಬೇಳೆ
ತಪ್ಪೇನಾಯಿತದರಿಂದ

ದಿನವೂ ನಾ ಹಾಕುವ ಬಟ್ಟೆಯು
ಇವಳದೇ ನಿರ್ಧಾರ
ಎಲ್ಲರ ಮುಂದೆ ಮಿಂಚುವ ನಾನು
ಇವಳಿಗೆ ಸರ್ದಾರ

ಕಷ್ಟವು ಸರಿಯೇ ಸುಖವೂ ಸರಿಯೇ
ಜೊತೆಗೆ ಇರುತ್ತಾಳೆ
ನನ್ನ ಜೀವನ ಸಾರ್ಥಕಗೂಳಿಸಲು
ಭೂಮಿಗೆ ಬಂದಿದ್ದಾಳೆ 

ವಿ.ಸೂ:  ಕೆ ಎಸ್ ನ ಅವರ ಕವನದ ಶೈಲಿಯಲ್ಲಿ. 

1 ಜನ ಸ್ಪಂದಿಸಿರುವರು:

sunaath said...

ನಿಮ್ಮ ಕವನ ಓದಿ ತುಂಬ ಖುಶಿಯಾಯಿತು. ನನ್ನ ಹೆಂಡತಿಗೂ ಓದಿ ತೋರಿಸಿದೆ. ಅವಳೂ ಖುಶಿಪಟ್ಟಳು.