ಬಡವನ ಬೆವರಿದೆ ಭತ್ತದಲ್ಲಿ
ಬಡವನ ಬೆವರಿದೆ ಬದನೆಯಲ್ಲಿ
ಬಡವನ ಬೆವರಿದೆ ಬಟಾಣಿಯಲ್ಲಿ
ಬಡವನ ಬೆವರಿದೆ ಬಾಳೆಯಲ್ಲಿ
ಬಡವನ ಬೆವರಿದೆ ಬಂಗಲೆಯಲ್ಲಿ
ಬಡವನ ಬೆವರಿದೆ ಬಸದಿಯಲ್ಲಿ
ಬಡವನ ಬೆವರಿದೆ ಬೀದಿಯಲ್ಲಿ
ಬಡವನ ಬೆವರಿದೆ ಬಯಲಿನಲ್ಲಿ
ಬಡವನ ಬೆವರಿದೆ ಬೆಳ್ಳಿಯಲ್ಲಿ
ಬಡವನ ಬೆವರಿದೆ ಬಂಗಾರದಲ್ಲಿ
ಬಡವನ ಬೆವರಿದೆ ಬೂಟಿನಲ್ಲಿ
ಬಡವನ ಬೆವರಿದೆ ಬಾವುಟದಲ್ಲಿ
Monday, 4 April 2011
ಬಡವನ ಬೆವರು
Posted By ಅಂತರ್ವಾಣಿ at 1:43 pm 8 ಜನ ಸ್ಪಂದಿಸಿರುವರು
Friday, 5 November 2010
ಮೈಸೂರ್ ಗಾಳಿ
ಬಣ್ಣ ನೋಡಿ ಬೆರಗಾದೆ
ಕಣ್ಣ ನೋಡಿ ಕರಗಿದೆ
ಮತ್ತು ತರಿಸೊ ನೋಟಕೆ
ಮುತ್ತೆ ಪ್ರಥಮ ಕಾಣಿಕೆ!
ಮರೆಯಾಗಿ ಹೋಗಿ ನೀನಿಂದು
ತರಿಸುವೇಕೆ ಕಣ್ಣಲ್ಲಿ ಬಿಂದು
ಅಲೆಯುತಿರುವೆ ನಿನ್ನರಸುತ್ತ
ಅಲೆದುಬಂದೆ ಭೂಮಿ ಸುತ್ತ
ಮೌನ ಮುರಿಯ ಬೇಕು ನಾನು
ನಿನ್ನ ರೂಪ ನೋಡಿ
ಗಾನ ಹರಿಸ ಬೇಕು ನಾನು
ರಾಗದಿಂದ ಕೂಡಿ
[ ಮೈಸೂರಿನ ಗಾಳಿ ಸೋಕಿದ ಮೇಲೆ ಈ ರೀತಿ ಕವನ ಬರೆದ ನೆನಪಿಗಾಗಿ ಈ ಕವನಕ್ಕೆ "ಮೈಸೂರ್ ಗಾಳಿ" ಅಂತ ಹೆಸರು :-) ]
Posted By ಅಂತರ್ವಾಣಿ at 11:53 pm 9 ಜನ ಸ್ಪಂದಿಸಿರುವರು
ವಿಭಾಗ: ಪ್ರಣಯವಾಣಿ (Romantic )
Tuesday, 23 February 2010
ಫಿನ್ ಲ್ಯಾಂಡಿಗೆ ಪ್ರವಾಸ(೩) - Go Karting..
ನಾಲ್ಕು ಪೋಸ್ಟಿ ನಲ್ಲೂ ಫೋಟೋಗಳನ್ನು ಹಾಕಲು ಮರೆತಿದ್ದೆ. ಕಾರಣ ಮತ್ತೆ ಹೇಳ ಬೇಕಿಲ್ಲ. ಎರಡು ವರ್ಷಗಳಿಂದ ಸಮಯ ಸಿಕ್ಕಾಗೆಲ್ಲಾ ಹೇಳ್ತಾಯಿರ್ತೀನಿ.. "ಸ್ವಲ್ಪ ಮರವು....ವಯಸ್ಸಾಗಿದೆ" ಅಂತ.. ಈ ಸಲ ತೇಜು ಅಕ್ಕ ಜ್ಞಾಪಿಸಿದ್ದರು.
ಈಗ ಮೊದಲ ಪೋಸ್ಟಿನಿಂದ ಬಾಕಿ ಉಳಿದಿದ್ದ ಫೋಟೋಗಳು ಹಾಗು ವಿವರಗಳನ್ನು ಹಾಕುತ್ತಿದ್ದೇನೆ.

Posted By ಅಂತರ್ವಾಣಿ at 11:18 pm 9 ಜನ ಸ್ಪಂದಿಸಿರುವರು
ವಿಭಾಗ: Finland, Tampere, ಪ್ರವಾಸ ಕಥನ
Tuesday, 2 February 2010
ಫಿನ್ ಲ್ಯಾಂಡಿಗೆ ಪ್ರವಾಸ (೩) - ಊರು ಸುತ್ತಲು ಹೋಗಿ.............?
Posted By ಅಂತರ್ವಾಣಿ at 10:38 pm 1 ಜನ ಸ್ಪಂದಿಸಿರುವರು
ವಿಭಾಗ: ಪ್ರವಾಸ ಕಥನ
