ಬೇಸರ ಬೀಡು ಬಿಟ್ಟಿದೆ
ಮನದೊಳಗೆ
ಬೇಸರ ಬೀಡು ಬಿಟ್ಟಿದೆ.
ಕಾಣದೊಂದು ನೋವು ಕಾಡಿದೆ
ಕಾರಣ ನನಗೆ ತಿಳಿಯದೆ
ಕಂಬನಿಧಾರೆ ಹರಿಯುತಿದೆ
ಏಕೆ ಹೀಗಾಯಿತೋ ಇದನಾನರಿಯೆ
ಬಯಕೆಗಳು ಬತ್ತು ಹೋಗಿವೆ!
ಮನಶ್ಶಾಂತಿ ಮಡಿದಿದೆ
ಮನದಲ್ಲಿ ಬೇಸರ ಬೀಡು ಬಿಟ್ಟಿದೆ.
ಎತ್ತ ಕಡೆಯಿಂದ ಹಾರಿ ಬಂದು,
ಅಂತರಂಗವ ಸೇರಿತೋ
ಸತ್ತ ಹಾಗೆ ಮಾಡಿ ನನ್ನ
ಅಂಧಕಾರಕ್ಕೆ ನೂಕಿತೋ
ಹರಿವ ತೊರೆಯಂತೆ ಬೇಸರ ಹರಿಯ ಬಾರದೆ?
ಹರಿಯ ನೆರವಿನಿಂದ ಅಂಧಕಾರಕ್ಕೆ ಮುಕ್ತಿ ಸಿಗಬಾರದೆ?
ಜ್ಞಾನದ ಬಗ್ಗೆ
-
ಜ್ಞಾನದಿಂ ಮೇಲಿಲ್ಲ| ಶ್ವಾನನಿಂ ಕೀಳಿಲ್ಲ|ಭಾನು ಮಂಡಲದಿಂ ಬೆಳಗಿಲ್ಲ ಜಗದೊಳಗೆ|ಜ್ಞಾನವೇ
ಮೇಲು ಸರ್ವಜ್ಞ||ಜ್ಞಾನದಿಂದಲಿ ಇಹವು| ಜ್ಞಾನದಿಂದಲಿ ಪರವು|ಜ್ಞಾನವಿಲ್ಲದಲೆ ಸಕಲವೂ
ತನಗಿದ್ದು|ಹಾನಿ...
15 years ago
4 ಜನ ಸ್ಪಂದಿಸಿರುವರು:
ಮನದ ಮೂಲೆಯಲಿ ಮನೆಮಾಡಿ,
ಮುಗಿಲು ಮುಚ್ಚುವ ಮೋಡದಂತೆ..
ಮಳೆಯ ಮುಟ್ಟಲು ಬಿಡದ ಕೊಡೆಯಂತೆ..
ಮುಚ್ಚಿದ ಕಣ್ಣ ಆಕ್ರಮಿಸೊ ಕನಸಂತೆ..
ಆಸರೆಯಿಲ್ಲದಂತೆ ಮಾಡೊ ಬೇಸರ,
ಮೂಡಿಸಿದೆ ಮನದಲಿ ಚಿಂತೆಯ ಕಂತೆ ಕಂತೆ.. ಕಂತೆ ಕಂತೆ..
ಕವನ ಚೆನ್ನಾಗಿ ಮೂಡಿದೆ ಎಂದು ಹೇಳಿದ ಮಾತ್ರಕ್ಕೆ ನನ್ನ ಕರ್ತವ್ಯ ಮುಗಿಯುವದಿಲ್ಲ. ನಿಮ್ಮ ಬೇಸರಕ್ಕೆ ಕಾರಣವೇನು ಎಂದು ಕೇಳಬೇಕಾಗುತ್ತದೆ. ಬೇಸರವಾಗುವಂತಹ ವಯಸ್ಸಲ್ಲವಲ್ಲ ಇದು.Cheer up,ಜಯಶಂಕರ !
ಯಾರು ಜಯ್ ಅವ್ರ ಮನಸಲ್ಲಿ ಬೇಸರದ ಬೀಜ ಬಿತ್ತಿರೋದು...
ಬೆಂಗಳೂರಿನ ೨೧ರ ಹರೆಯ,
ನಿಮ್ಮ ಕವನವೂ ಚೆನ್ನಾಗಿದೆ :)
ಬೇಸರ ಯಾವಾಗಲೂ ಅಷ್ಟೆ ಅನೇಕ ಚೆಂತಗಳಿಗೆ ನಾಂದಿ. "ಹೀಗಾಯ್ತಲ್ಲಾ?" ಅಂತ ಚಿಂತೆ ಮಾಡುತ್ತಾನೆ ಇರುತ್ತೀವಿ. ಅದರ ಅನುಭವವೇ ಈ "ಬೇಸರದ ಬೀಡು"...ಆದರೂ ದೇವರನ್ನು ನಂಬಿದ್ದೀನಿ... ಹರಿಯ ನೆರವಿನಿಂದ ಬೇಸರ ಹರಿದ ಮೇಲೆ ಸಂತಸದ ಬಗ್ಗೆ ಬರೆಯುವೆ.
Post a Comment