Tuesday 18 November, 2008

ಫಿನ್ ಲ್ಯಾಂಡಿಗೆ ಪ್ರವಾಸ (೧) - ಭಾರತಕ್ಕೆ ಪ್ರಯಾಣ

ಹಿಂದಿನ ಭಾಗ

ಸೋಮವಾರದಂದು ನನಗೆ ವಿಪರೀತ ಸಂತಸವಾಗಿತ್ತು. ಮಧ್ಯಾಹ್ನಕ್ಕೆ ಕಾಯುತ್ತಾಯಿದ್ದೆ. ಒಂದು ಗಂಟೆಯ ಕೆಲಸ ಮುಗಿಸಿ ಅಲ್ಲಿದ್ದವರೆಲ್ಲರಿಗೂ ನಾವು ಇಂದು ಮಧ್ಯಾಹ್ನ ಹೊರಡುತ್ತೇವೆಂದು ಹೇಳಿದೆವು. ಎಲ್ಲರೂ ನಮಗೆ "All the best. Safe journey" ಅಂತ ಹಾರೈಸಿದರು. ನಮಗೆ ಕೊಟ್ಟಿದ್ದ security key ಹಿಂದುರುಗಿಸಿ ಪ್ರತಿದಿನ ನಮಗೆ ಶುಭೋದಯ ಹೇಳುತ್ತಿದ್ದ Receptionist ಗೆ ನಗು ಮೊಗದಿಂದ, ಹೋಗಿ ಬಿಟ್ಟು ಬರ್ತೀವಿ ಎಂದು ಹೇಳಿದೆವು. ಆಕೆ ಕೂಡ ನಮಗೆ ಪ್ರಯಾಣ ಸುಖಕರವಾಗಿರಲಿ ಎಂದು ಹೇಳಿದರು. ಆನಂತರ ನಮ್ಮ ಹೊಟೆಲಿಗೆ ಬಂದೆವು. ಕೊನೆ ಬಾರಿಗೆ Cupboard, bathroom ಎಲ್ಲಾ ಕಡೆ ಯಾವೊಂದೂ ವಸ್ತುಗಳನ್ನು ಬಿಟ್ಟಿಲ್ಲವೆಂದು ಖಚಿತ ಪಡಿಸಿಕೊಂಡೆ. ನಂತರ ಲಗ್ಗೇಜ್ಜು ಸಿದ್ಧವಿತ್ತು. ನನ್ನ ಮೊಬೈಲಿಂದ ಸ್ವ-ಚಿತ್ರ ತೆಗೆದೆ.

ಈ ಒಂದೇ ಒಂದು ಚಿತ್ರದಲ್ಲೇ ನಾನು Serious ಆಗಿ pose ಕೊಟ್ಟಿಲ್ಲ.

ನಮ್ಮ "ಆಸ್ತಿ"ಗಳನ್ನು ತೆಗೆದುಕೊಂಡು Receptionಗೆ ಬಂದು ನಮ್ಮ ರೂಮಿನ Key (Card) ಹಿಂದಿರುಗಿಸಿ, ಅಲ್ಲಿಯ ಶಾಸ್ತ್ರಗಳನ್ನು ಮುಗಿಸಿ, ಅವರಿಗೆ ಕೊಡ ಬೇಕಿದ್ದ ಬಾಕಿ ಹಣವನ್ನು ಕೊಟ್ಟು ಹೊಟೆಲಿನಾಚಗೆ ಹೋದೆವು. ಅಲ್ಲೊಂದು Taxi ಸಿದ್ಧವಿತ್ತು. ಅದರೊಳಗೆ ಕೂತು, ವಿಮಾನ ನಿಲ್ದಾಣಕ್ಕೆ ಹೋಗು ಎಂದೆವು. ಆ ಡ್ರೈವರ್ ನಮ್ಮನ್ನು ಮಾತನಾಡಿಸುತ್ತ ಯಾವ ದೇಶ ನಿಮ್ಮದು ಎಂದು ಕೇಳಿದ. ಆಗ ನಾವು "ಭಾರತ"ವೆಂದು ಹೇಳಿದೆವು. ಅವನು ಭಾರತದಲ್ಲಿದ್ದನಂತೆ ಅದರ ವಿಚಾರವನ್ನು ಹೇಳುತ್ತಾ ನಮ್ಮನ್ನು ವಿಮಾನ ನಿಲ್ದಾಣಕ್ಕೆ ತಲುಪಿಸಿದ. ನಂತರ Boarding Pass ತೆಗೆದುಕೊಂಡ ಮೇಲೆ ಕಾಲ ಹರಣ ಮಾಡಲು ಒಂದೊಂದು ಅಂಗಡಿಗೆ ಭೇಟಿ ನೀಡುತ್ತಾಯಿದ್ದೆ. ನನ್ನ ಬಂಧುಗಳಿಗೆ ಉಡುಗೊರೆಗಳನ್ನೂ, ನನ್ನ ಕಚೇರಿಯವರಿಗೆ, "ಮದ್ಯವಿರುವ ಚಾಕೊಲೇಟ್"ಗಳನ್ನೂ ಖರೀದಿಸಿದೆನು.(ಬಹಳ ಬೇಡಿಕೆಯ ಚಾಕೊಲೇಟ್ ಇದು. "Liquor chocolates ತರದೇ ಇದ್ದರೆ ಆಫೀಸಿಗೆ ಬರ ಬೇಡ" ಅಂತ ಕೆಲವರು ಹೇಳಿದ್ದರು). ಅಲ್ಲಿ ಒಂದು ಸಾಮಾನ್ಯವಾದ ಲೇಖನಿಗೆ ೫ Euro ಅಂದರೆ ಸುಮಾರು ೩೨೦ ರೂಗಳು! ಇಲ್ಲೂ ಸಹ ನಾನು ಉಷ್ಣಮಾಪಕಗಳನ್ನು ವೀಕ್ಷಿಸುತ್ತಾಯಿದ್ದೆ ಸುಮ್ಮನೆ ಕುತೂಹಲಕ್ಕೆ.

ನಾವು Immigration ಬಳಿ ಹೋಗುವಾಗ ಒಂದು ಡಿಜಿಟಲ್ ಕ್ಯಾಮರ ಕಣ್ಣಿಗೆ ಬಿದ್ದಿತು. ಆ ಅಂಗಡಿಯವನು, ಈ ಕ್ಯಾಮರಾಗೆ ಇವತ್ತು discount ಇದೆ ಎಂದೆನು. ಕೋಶಿ ಅದನ್ನು ನೋಡಿ, ಈಗ ಖರೀದಿಸೋದು ಸೂಕ್ತ ಎಂದನು. ಹಾಗಾಗಿ ಅದನ್ನು ಖರೀದಿಸಿದೆ. ಮುಂದಿನ ಅಂಗಡಿಗೆಯಲ್ಲಿ ಕೋಶಿಯು ತನ್ನ ಮಿತ್ರರಿಗೆ ಎರಡು ಬಾಟಲ್ಲು "Finlandia"ವನ್ನು ತೆಗೆದುಕೊಂಡ. ಆನಂತರ ನಮ್ಮ ವಿಮಾನ ಹೊರಡುವ ವೇಳೆ ಹತ್ತಿರವಾಯಿತು. ನಾವು ವಿಮಾನವನ್ನೇರಿದೆವು.

ವಿಮಾನದಲ್ಲಿ ಒಂದು ಹಿಂದಿ ಚಿತ್ರ ಪ್ರದರ್ಶನ ಮಾಡಿದರು. ಈ ಚಲನ ಚಿತ್ರ ಮುಗಿದ ಮೇಲೆ ಭಾರತದ ಕುರಿತಾದ ಒಂದು ಟೆಲಿ ಚಿತ್ರ ಪ್ರದರ್ಶನ ಮಾಡಿದರು. ಅದನ್ನು ನೋಡುತ್ತಾ ಪ್ರಯಣ ಮುಗಿಸಿದೆನು.

ಭಾರತದ ನೆಲಕ್ಕೆ ವಿಮಾನ ಸ್ಪರ್ಶ ಮಾಡಿದಾಗ ಮಧ್ಯ ರಾತ್ರಿ ಒಂದು! ಅಲ್ಲಿಂದ Immigration ಮುಗಿಸಿ, ನನ್ನ ಲಗ್ಗೇಜನ್ನು ತೆಗೆದು ಕೊಂಡು ಮನೆಗೆ ಫೋನು ಮಾಡಿ ನನ್ನ ಸುಖಾಗಮನವನ್ನು ತಿಳಿಸಿದೆ. ನಂತರ ಅವರಿಗೆ ಬೆಂಗಳೂರಿನ ವಿಮಾನ ಹೊರಡುವ ಮುಂಚೆ ಕರೆ ಕೊಡುತ್ತೇನೆಂದು ಹೇಳಿದೆ. ನಾವೀಗ Domestic Airpotಗೆ ಹೋಗ ಬೇಕಿತ್ತು. ಅದಕ್ಕಾಗಿ waiting roomಗೆ ಹೋದೆವು. ಅಲ್ಲಿ ತಿಳಿದ ವಿಷಯವೇನೆಂದರೆ ಸದ್ಯಕ್ಕೆ Domestic airportಗೆ ಸಾರಿಗೆ ವ್ಯವಸ್ಥೆಯಿಲ್ಲ. ಸುಮಾರು ೫ ಗಂಟೆಗೆ ಇರುತ್ತದೆಯೆಂದು. ಅಲ್ಲಿಯವರೆಗು ಅಲ್ಲಿ ದೂರದರ್ಶನ ವೀಕ್ಷಿಸುತ್ತಾಯಿದ್ದೆ. ಕೋಶಿಯು "ತನ್ನವರ" ಜೊತೆಯಲ್ಲಿ ಮಾತಾಡುತ್ತಾಯಿದ್ದ. ಆಮೇಲೆ ಬಸ್ಸಿನಲ್ಲಿ ನಾವು Domestic airportಗೆ ಬಂದೆವು. ಇಲ್ಲಿ ಕೋಶಿ ಸ್ವಲ್ಪ ಗಾಬರಿಯಾದ. ಅವನ ಬ್ಯಾಗು ಎಲ್ಲೋ ಕಳೆದು ಹೋಗಿತ್ತು. ಅವನು ನನ್ನ ಕೇಳಿದ ಬ್ಯಾಗಿನ ಬಗ್ಗೆ. ನಾನು ತಿಳಿದಿಲ್ಲವೆಂದೆ. ತಕ್ಷಣ ಬಸ್ಸಿನ ಒಳಗೆ ಹೋಗಿ ನೋಡಿದ. ಆದರೂ ಸಿಗಲಿಲ್ಲ. ಆಮೇಲೆ ಅಲ್ಲಿಯ Manager ಬಳಿ ಹೋಗಿ ಈ ವಿಷಯ ಪ್ರಸ್ತಾಪಿಸಿದ. ಅವರು International airportಗೆ ಕರೆ ಮಾಡಿ, ಬ್ಯಾಗು ಅಲ್ಲಿರುವುದನ್ನು ಖಚಿತ ಪಡಿಸಿದರು.

ಅದನ್ನು ಪಡೆದ ಮೇಲೆ ನಾವು ಬೆಂಗಳೂರಿನ ವಿಮಾನ ಏರಿದೆವು. ದೆಹಲಿಯಿಂದ ಹೊರಟ ಸ್ವಲ್ಪ ಹೊತ್ತಿನಲ್ಲೇ ಒಮ್ಮೆ Pilot ಇಂದ ವಿಷಯ ಬಂತು, "Pressure ಏರು ಪೇರು ಆಗುತ್ತಾಯಿದೆ. ದಯವಿಟ್ಟು ನಿಮ್ಮ ಆಸನದಲ್ಲಿ ಬಂದು ಕುಳಿತುಕೊಳ್ಳಿ. ಸೀಟ್ ಬೆಳ್ಟ್ ಧರಿಸಿ!" ಇದಾಗಿ ಒಂದೆರಡು ಕ್ಷಣದಲ್ಲೆ ವಿಮಾನ ಅಲ್ಲಾಡಿತು. ಮನಸ್ಸಿನಲ್ಲೇ ಶಂಕರನ್ನು ನೆನೆದೆ. ಸದ್ಯ ಏನೂ ಆಗಲಿಲ್ಲ!

ನಂತರ ಮನೆಗೆ ಬಂದು ನನ್ನ ಎಲ್ಲಾ ಅನುಭವಗಳನ್ನು ಮನೆಯವರಿಗೆ ಹೇಳುತ್ತಾ, ಅಲ್ಲಿಂದ ತಂದಿದ್ದ chocolates ತಿನ್ನುತ್ತಾ ದಿನ ಕಳೆದೆನು.

ಅಲ್ಲಿಯ ಚಿತ್ರಗಳನ್ನು ವೀಕ್ಷಿಸಲು :

Finland Trip (1)

15 ಜನ ಸ್ಪಂದಿಸಿರುವರು:

Shankar Prasad ಶಂಕರ ಪ್ರಸಾದ said...

ಮುಂಚಿನ ಲೇಖನಗಳಿಗಿಂತಾ ಕಮ್ಮಿ ಉದ್ದ ಇದೆ.
ಕಂಗ್ರಾಟ್ಸ್....
ಕಟ್ಟೆ ಶಂಕ್ರ

Shankar Prasad ಶಂಕರ ಪ್ರಸಾದ said...

ಅದ್ಸರಿ, ಫಿನ್ಲ್ಯಾಂಡಲ್ಲಿ ಒಳ್ಳೇ ನೈಟ್ ಕ್ಲಬ್, ಡಿಸ್ಕೋಥೆಕ್, ಸೌನ ಬಾಥ್ ಗಳು ಇವೆಯಲ್ಲ್ಲಾ.. ಹೋಗ್ಲಿಲ್ವಾ? ಹೆಲ್ಸಿಂಕಿಯಲ್ಲಂತೂ ನೈಟ್ ಲೈಫ್ ಸಖತ್ತಾಗಿ ಇರುತ್ತೆ. ಸೌನ ಬಾಥ್ ಬಿಟ್ಟಾಕಿ, ಅಟ್ಲೀಸ್ಟ್ ಒಂದು ನೈಟ್ ಕ್ಲಬ್ / ಸ್ಟ್ರಿಪ್ ಕ್ಲಬ್ ಗೆ ಹೋಗೋದು ತಾನೆ ? ಹೋಗಿದ್ದೂ ಬರೆದಿಲ್ಲಾ ಅಂದ್ರೆ ಓಕೆ, ಆದ್ರೆ ಹೋಗಿಲ್ಲಾ ಅಂದ್ರೆ, ನೀವು ಒಂದು ಯೂರೋಪಿಯನ್ ದೇಶದಲ್ಲಿ ಏನೋ ಒಂದು ಮಿಸ್ ಮಾಡ್ಕೊಂಡ ಹಾಗೆ.
ಕಟ್ಟೆ ಶಂಕ್ರ

ಸುಧೇಶ್ ಶೆಟ್ಟಿ said...

Welcome back to India!
ನಿಮ್ಮ ಪ್ರವಾಸ ಕಥನ ಓದಿ ನಾನೇ ಫಿನ್ ಲ್ಯಾ೦ಡ್ ಸುತ್ತಿ ಬ೦ದ೦ತೆ ಆಯಿತು.

sunaath said...

ಎಷ್ಟು ಬೇಗನೇ ಮುಗಿದು ಹೋಯಿತಲ್ಲ ಪ್ರವಾಸ ಕಥನ ಎನ್ನಿಸ್ತಾ ಇದೆ.
ಇಂತಹ ಕಥನಗಳನ್ನು ಇನ್ನಷ್ಟು ಕೊಡಿ.

ಅಂತರ್ವಾಣಿ said...

ಶಂಕ್ರಣ್ಣ,
ಧನ್ಯವಾದಗಳು :)

ಫಿನ್ ಲ್ಯಾಂಡಿನಲ್ಲಿ ನೈಟ್ ಕ್ಲಬ್ ಇತ್ತು. ಆದರೆ ನಾನು ಭೇಟಿ ಕೊಟ್ಟಿಲ್ಲ.

ಈ ಪ್ರವಾಸ ಕಥನ ಸದ್ಯಕ್ಕೆ ಮುಗಿದಿದೆ. ಸ್ವಲ್ಪ ದಿನ ಆದ ಮೇಲೆ ಭಾಗ ೨ ಹಾಗು ಭಾಗ ೩ ಬರುತ್ತೆ. ಅಲ್ಲಿ ಸೌನ ಬಗ್ಗೆ ಬರಿತೀನಿ.

ಸುಧೇಶ್,
ಧನ್ಯವಾದಗಳು ಪ್ರತಿಕ್ರಿಯೆಗೆ. ಸ್ವಲ್ಪ ದಿನಗಳಾದ ಮೇಲೆ ನಿಮ್ಮನ್ನು ಮತ್ತೆರಡು ಬಾರಿ ಫಿನ್ ಲ್ಯಾಂಡಿಗೆ ಕರೆದುಕೊಂಡು ಹೋಗುತ್ತೀನಿ. ಮತ್ತೆ ಬರ್ತೀರಾ ಅಲ್ವ?

ಸುನಾಥ್ ಅಂಕಲ್,
ಸದ್ಯಕ್ಕೆ ಭಾಗ ಒಂದು ಮುಗಿತು. ಭಾಗ ೨ ಹಾಗು ಭಾಗ ೩ ಸ್ವಲ್ಪ ದಿನಗಳಾದ ಮೇಲೆ ಬರುತ್ತೆ.

Lakshmi Shashidhar Chaitanya said...

good.

ಅಂತರ್ವಾಣಿ said...

ಮಾ,
ಗೊತ್ತಾಗುತ್ತೆ ನಿನಗೆ ತುಂಬಾ ಕೆಲಸಯಿದೆ ಅಂತ :):)

ಅಂತರ್ವಾಣಿ said...

ಶಂಕ್ರಣ್ಣ,
ಯೂರೋಪಿನಲ್ಲಿ ನಾನು ಮಿಸ್ ಮಾಡಿಕೊಂಡಿದ್ದು ಅಂದರೆ ತಂದೆ, ತಾಯಿ, ಬಂಧು ಮಿತ್ರರು.

ತೇಜಸ್ವಿನಿ ಹೆಗಡೆ said...

ಶಂಕರ್,

ಕೊನೆಯ ಚಿತ್ರದಲ್ಲಿರುವವರ ಗುರುತೇ ಸಿಕ್ಕದು ನೋಡಿ :) ಅಂದ ಹಾಗೆ ನೀವೊಬ್ಬರೇ ಚೋಕಲೇಟ್ ತಿಂದ್ರಲ್ಲಾ.. ನಮಗೆಲ್ಲಾ ಇಲ್ವಾ? :P ಚೆನ್ನಾಗಿದೆ.

Ittigecement said...

ಲೇಖನ ಮಾಲೆ ಅತ್ಯುತ್ತಮವಾಗಿತ್ತು. ಒಳ್ಳೆಯ ಮಾಹಿತಿ ಕೊಟ್ಟಿದ್ದೀರಿ. ನನಗೂ ಒಮ್ಮೆ ಭೇಟಿ ಕೊಡುವ ಆಸೆ ಹುಟ್ಟಿಸಿದ್ದೀರಿ, ಧನ್ಯವಾದಗಳು.

ಅಂತರ್ವಾಣಿ said...

tejaswini avare,
naanu smile maaDirodrinda nimage gurutu siktha illa :D

prakaash avare,
modala bhaaga maathravE mugidirOdu.. innu 2 bhaagagaLu post maadabekide. swlpa dinagaLaada mele post maaduve.alliyavargu kavana post maaduve. baMdu hOguttaayiri

Harisha - ಹರೀಶ said...

ನಿಮ್ಮೆಲ್ಲಾ ಕಥನಗಳನ್ನೂ ಒಂದೇ ಬಾರಿಗೆ ಓದಿ ಮುಗಿಸಿದೆ! ಬಹಳ ಇಷ್ಟವಾಯಿತು. ಮುಂದಿನ ಪ್ರವಾಸದ ಬರಹಗಳಿಗೆ ಎಲ್ಲರಂತೆ ನಾನೂ ಕಾಯುತ್ತಿದ್ದೇನೆ..

ಅಂತರ್ವಾಣಿ said...

ಹರೀಶ್,
ತುಂಬಾ ಧನ್ಯವಾದಗಳು.

ಸದ್ಯಕ್ಕೆ ಕವನಗಳು ಬರಲಿವೆ. ಮುಂದೆ ಎರಡನೆ ಭಾಗ ಹಾಗು ಮೂರನೆ ಭಾಗ ಬರುತ್ತೆ.

shivu.k said...

ನಿಮ್ಮ ಪ್ರವಾಸ ಕಥನ ಇಷ್ಟು ಬೇಗ ಮುಗಿಯಿತಲ್ಲ . ಇನ್ನೂ ಸ್ವಲ್ಪ ಇದ್ದಿದ್ದರೆ ಚೆನ್ನಿತ್ತು. ಹೋಗಲಿ ಬಿಡಿ. ಸುರಕ್ಷಿತವಾಗಿ ನಮ್ಮ ದೇಶಕ್ಕೆ ಬಂದಿರಲ್ಲ. ಅದೇ ಸಂತೋಷ.

ಅಂತರ್ವಾಣಿ said...

ಶಿವು ಅವರೆ,
ವಂದನೆಗಳು.

ಇನ್ನೂ ಎರಡು ಭಾಗ ಬರೋದಿದೆ.