Friday, 27 February, 2009

ಫಿನ್ ಲ್ಯಾಂಡಿಗೆ ಪ್ರವಾಸ(೨) - ಆಫೀಸಿನಲ್ಲಿ ಆಟ

ಹಿಂದಿನ ಭಾಗ

ನಾನು ಆಫೀಸಿನ ಹತ್ತಿರ ಹೋದೆ. ಆದರೆ ನಾಮ ಫಲಕ ಕಾಣದ ಕಾರಣ ದೇವರ ಗುಡಿಯನ್ನು ಪ್ರದರ್ಶಿಸುವ ಭಕ್ತನ ಹಾಗೆ ಪ್ರದಕ್ಷಿಣೆ ಮಾಡಿದೆ. ಆದರೂ ನಾಮ ಫಲಕ ಕಾಣಿಸಲಿಲ್ಲ. ಆದರೆ ತೆರೋ ತೋರಿಸಿದ ಚಿತ್ರ ಇದೇ ಹಾಗು ವಿಳಾಸ ಇದೆ. ಹಾಗಾಗಿ ಒಳಗೆ ಹೋಗಿ ಅಲ್ಲಿ ಕೇಳೋಣವೆಂದು ನುಗ್ಗಿದೆ. ಮೊದಲು ನನ್ನ ಕಣ್ಣಿಗೆ ಕಾಣಿಸಿದ್ದು Reception ಅಲ್ಲ Restaurant! Reception ಕೂಡ ಇತ್ತು. ಅವರಲ್ಲಿ, ನನ್ನ ಕಂಪನಿ ಎಲ್ಲಿದೆ ಎಂದು ಕೇಳಿಕೊಂಡು, ಹೋದೆ.

ಬಾಗಿಲು ತೆರೆದಿರಲಿಲ್ಲ. ಮತ್ತೆ "ಬಾಗಿಲನು ತೆರೆದು ಸೇವೆಯನು ಕೊಡೊ... " ಅಂತ ಹಾಡೋಣ ಅಂದುಕೊಂಡೆ.. ಆದರೆ ನನ್ನ ಕಣ್ಣಿಗೆ ಕಂಡ Switchನ್ನು ಒತ್ತಿದೆ. ನಂತರ Sami Ellonen ಬಂದು ಬಾಗಿಲು ತೆರೆದರು. "Good Morning Sami!"...
"Hey! Good Morning!" "How are you? How is the Hotel? ..." Jarkko (ಯಾರ್ಕ್ಕೊ) informed you will be coming..ಹೀಗೆ ಎಲ್ಲಾ ನಮ್ಮ ಮಾತು ನಡೆಯುತ್ತಿದ್ದಾಗ.. ಹಿಂದಿನಿಂದ ಒಂದು ದನಿ, "ಮೋಓಓಓಓರೋಓಓಓಓಓಓ". ಯಾರಪ್ಪ ಇವನು ಅಂತ ನೋಡಿದರೆ... ಅವರೇ ತೆರೋ!

"ಹಾಆಅಯ್ ಜೇಏಏಏ. ಗೂಊಊಊಊಡ್ ಮಾರ್ನಿಂಗ್". "Good Morning Tero!".. [ತೆರೋ ಅವರ ಸಂಭಾಷಣೆಯನ್ನು ನೀವು ಓದಿದರೆ ಮಜಾ ಇರೋದಿಲ್ಲ. ಅದನ್ನು ನನ್ನ ಧ್ವನಿಯಲ್ಲಿ ಕೇಳ ಬೇಕು. ಮುಂದೆ ಅವರ ದನಿಯನ್ನು ಅನುಕರಣೆ ಮಾಡಿ, ನಿಮಗೆ ಕೇಳಿಸುತ್ತೇನೆ. ] ನಾನು, ತೆರೋ ಹಾಗು ಸಾಮಿ ಕಾಫಿ ಕುಡಿದೆವು. ನಂತರ ಸಾಮಿ, ನನಗೆ Access Key ಕೊಡಿಸಿದರು. ಇದಾದ ಮೇಲೆ ನಾನು ಕೆಲಸ ಪ್ರಾರಂಭಿಸಿದೆ.

"ನಿನ್ನ ಸಹಾಯಕ್ಕೆ ಮತ್ತೊಬ್ಬರು ಬರ ಬೇಕಿದೆ, ಮಧ್ಯಾಹ್ನ ಬರುತ್ತಾರೆ" ಎಂದು ಯಾರ್ಕ್ಕೊ ವಿ-ಅಂಚೆ ಕಳಿಸಿದ್ದರು. ಅಷ್ಟರಲ್ಲಿ ಆಫೀಸ್ ತುಂಬಿತು. ಅಲ್ಲಿದ್ದವರು ತಾವಾಗಿಯೇ ನನ್ನ ಬಳಿ ಬಂದು ಅವರ ಪರಿಚಯ ಮಾಡಿಕೊಂಡರು. ಕಾರಿ, ತಪನಿ, ಕ್ರಿಸ್ಟಾ, ಬೆವೆ. ನಾವಿಷ್ಟೇ ಜನ ಆ ಆಫೀಸಿನಲ್ಲಿದ್ದದ್ದು!

ತೆರೋ ಹಾಗು ಸಾಮಿ Darts ಆಡುತ್ತಾಯಿದ್ದರು. ನಾನು ಅದನ್ನು ನೋಡಲು ಹೋದಾಗ ಆಟದ ಬಗ್ಗೆ ವಿವರಿಸಿ, ನನ್ನನ್ನೂ ಅವರೊಂದಿಗೆ ಸೇರಿಸಿ ಕೊಂಡರು. ಕ್ರಿಸ್ಟಾ ಕೂಡ ಬಂದಳು. ಕಾರಿ ಕೂಡ ಬಂದರು. ಆಫೀಸಿನ ಎಲ್ಲರೂ ಈಗ ಆಟವಾಡುತ್ತಾಯಿದ್ದರು. ಆ ಆಟ ನನಗೆ ತುಂಬಾ ಇಷ್ಟವಾಯಿತು. ಆಟ ಮುಗಿದ ಮೇಲೆ ಎಲ್ಲರೂ ಅವರವರ ಕೆಲಸದ ಕಡೆ ಗಮನ ಕೊಟ್ಟರು.

ಮಧ್ಯಾಹ್ನ ಊಟದ ಸಮಯವಾದಾಗ, ಅವರೆಲ್ಲರೂ ನನ್ನನ್ನು ಕರೆದರು. ಆಗ ನಾನು, "ನನ್ನ ಊಟ ತಂದಿದ್ದೇನೆ. ನೀವು ಹೋಗಿ ಮಾಡಿಕೊಂಡು ಬನ್ನಿ" ಅಂದೆ. ಆಗ ಕ್ರಿಸ್ಟಾ , ಆ ಓವೆನ್ ಉಪಯೋಗಿಸಿಕೋ ಬೇಕಿದ್ದರೆ ಎಂದರು. ನನ್ನ ಊಟವಾದ ಮೇಲೆ, ಸ್ವಲ್ಪ ಹೊತ್ತಿನಲ್ಲೇ "Stanislavs Lielausis" ಬಂದರು. ಇವರೊಂದಿಗೆ ಪರಿಚಯವಾದ ಮೇಲೆ, ನಾನು ಮಾಡ ಬೇಕಿದ್ದ ಕೆಲಸದಲ್ಲಿ ನನಗಿದ್ದ ಸಂದೇಹಗಳನ್ನು ಬಗೆ ಹರಿಸಿಕೊಳ್ಳುತ್ತಿದ್ದೆ. ಆತನೊಂದಿಗೆ ಒಂದೆರಡು ಗಂಟೆ ಚರ್ಚೆಯಾದ ಮೇಲೆ ನನ್ನ ಸಮಸ್ಯೆಗೆ ಉತ್ತರ ಸಿಗಲಾರಂಭಿಸಿತು. ಬಂದ ಕೆಲಸ ನಿರ್ವಿಘ್ನವಾಗಿ ಮುಗಿಯುತ್ತೆ ಎಂಬ ನಂಬಿಕೆ ಬಂತು.

ಈ ವಿಷಯವನ್ನು ಯಾರ್ಕ್ಕೊ ಜೊತೆ ಮಾತಾಡಿದೆವು. ಆಗ ಅವರು "Excellent!" ಅಂದರು. ಈ integration ಕೆಲಸ ಆದ ಮೇಲೆ, ನಾನು ಹಾಗು Stan ಡಾರ್ಟ್ಸ್ ಆಡಿದೆವು. ಅವರು ಕಣ್ಣಲತೆಯ ದೂರದಲ್ಲಿದ್ದ Sokos Ilves ಎಂಬ ಹೋಟೆಲ್ ನಲ್ಲಿ ತಂಗಿದ್ದರು.

ಹೆಲ್ಸಿಂಕೆಯ ಹಾಗೆ ಇಲ್ಲೂ ಕೂಡ ೩-೪ ರ ಸಮಯಕ್ಕೆ ಹಣ್ಣುಗಳನ್ನು ತಂದು ಇಡುತ್ತಿದ್ದರು. ಅದರ ಸೇವೆಯಾದ ಮೇಲೆ ಮತ್ತೆ ಡಾರ್ಟ್ಸ್, ಚಾಟ್, ಕೆಲಸ...

ಅಲ್ಲಿಯವರೆಲ್ಲರೂ ಸಂಜೆ ೫ಕ್ಕೆ ಖಾಲಿ! ನನಗೋ ನನ್ನ ಮನಸ್ಸು ಒಪ್ಪೋದಿಲ್ಲ ಬೇಗ ಹೊಟೆಲಿಗೆ ಹೋಗೋಕೆ. ಆರು ಮೂರಾಗಲಿ ಮೂರು ಆರಾಗಲಿ, ಎಂಟು ಗಂಟೆಗಳ ಕಾಲ ಕೆಲಸ ಮಾಡಲೇ ಬೇಕು. Stan ಕೂಡ ಬೇಗ ಹೋಗುತ್ತೀನಿ, ಆಯಾಸವಾಗಿದೆ ಎಂದು ಹೊರಟ. ನಾನು ಇನ್ನು ಸ್ವಲ್ಪ ಕೆಲಸ ಮಾಡಿ, ಆರು ಗಂಟೆಗೆ ಆಫೀಸಿನಿಂದ ಹೊರಟೆ.

8 ಜನ ಸ್ಪಂದಿಸಿರುವರು:

Lakshmi Shashidhar Chaitanya said...

:)...entu ghante nijvaaglu kelsa maadidra ? bhesh bhesh bhesh !

Ittigecement said...

ಅಂತರ್ವಾಣಿ..

ಯಾವತ್ತಿನ ಹಾಗೆ ಚಂದದ ಬರಹ..

ಎಲ್ಲ ಸೂಕ್ಷ್ಮ ವಿಷಯಗಳನ್ನು..
ಗಮನವಿಟ್ಟು ಬರೆಯುವ ನಿಮ್ಮ
ಬರವಣಿಗೆ..
ಇಷ್ಟವಾಗುತ್ತದೆ...

ಲೇಖನದ ಸಂಗಡ
ಫೋಟೊವನ್ನೂ ಹಾಕಿರಿ...

ಧನ್ಯವಾದಗಳು..

sunaath said...

ಅಲ್ಲಾ, ಅಲ್ಲಿ officeನಲ್ಲಿ ಕೂಡಾ ಆಟ ಆಡುತ್ತಾರಾ?!

sunaath said...

ನಿಮ್ಮ ಪ್ರವಾಸಕಥನ ಆಕರ್ಷಣೀಯವಾಗಿ ಹೊಸ ಹೊಸ ಮಾಹಿತಿಗಳನ್ನು ಕೊಡ್ತಾ ಇದೆ.
Very good! Carry on Jayaprakash.

ಅಂತರ್ವಾಣಿ said...

ನೋಡಮ್ಮ,
ಆಗ ೮ ಗಂಟೆ ಕೆಲಸ ಮಾಡುತ್ತಿದ್ದೆ. ಈಗ ೯ ಗಂಟೆ ಮಾಡ ಬೇಕು,

ಪ್ರಕಾಶಣ್ಣ,
ವಂದನೆಗಳು.

ಫೋಟೋ ಮುಂದೆ ಹಾಕುತ್ತೇನೆ.

ಸುನಾಥಂಕಲ್,
ವಂದನೆಗಳು

ಸುಧೇಶ್ ಶೆಟ್ಟಿ said...

ಮು೦ದಿನ ಕ೦ತಿಗೆ ಕಾತರದಿ೦ದ ಕಾಯುತ್ತಿದ್ದೇನೆ....

shivu.k said...

ಜಯಶಂಕರ್,

ಎಂದಿನಂತೆ ಸೊಗಸಾದ ನಿರೂಪಣೆ...ಪ್ರತಿಯೊಂದನ್ನು ವಿವರಿಸುವ ಪರಿ...ಅದರೆ ಏಕೋ ಬರಹ ಚಿಕ್ಕದಾಯಿತು ಅನ್ನಿಸಿತು....ಮುಂದಿನದಕ್ಕೆ ಕಾಯುತ್ತೇನೆ...

ಧನ್ಯವಾದಗಳು...

ಅಂತರ್ವಾಣಿ said...

ಸುಧೇಶ್ ಹಾಗು ಶಿವಣ್ಣ
ಧನ್ಯವಾದಗಳು.

ಮುಂದಿನ ಕಂತು ಸದ್ಯದಲ್ಲೆ ಬರುತ್ತೆ.