Thursday, 22 March 2012

ದ್ವಿಜ ಉವಾಚ


ನನ್ನ ತಮ್ಮ ತೆಗೆದ ಈ ಅತ್ಯದ್ಭುತವಾದ ಛಾಯಾಚಿತ್ರಕ್ಕೆ  ನನ್ನ ಕವನ. 
 
 
 
ಹಕ್ಕಿ ತಾನು ಹಾರುವುದ ಮರೆತು
ಬಂದಿಲ್ಲಿ ಕುಳಿತಿದೆ
ತನಗೆ ತಿಳಿದ ಚಿಲಿಪಿಲಿಯ
ಹಾಡಲಿಲ್ಲಿ ಬಯಸಿದೆ

ರೆಕ್ಕೆಯುಂಟು ಹಾರಬಲ್ಲೆ
ಅಳೆಯ ಬಹುದು ಇಳೆಯನು
ಸಲ್ಲದು ನನಗದು;
ಸಾಗಬೇಕಿದೆ ಸತ್ಯದ ಕಡೆಗೆ!

ರವಿ,ಚಂದ್ರರ ನೋಡಬಲ್ಲೆ
ತಿಳಿಯುವುದು ಹಗಲಿರುಳು
ಒಲ್ಲೆ ಇರುಳ ಜೀವನ;
ಕಾಣ ಬಯಸುವೆ ಹಗಲನು

ಕಟ್ಟಿಗೆಯಿಂದ ಕಾಯವ ಸುಡುವರು
ತೆನೆಯು ತನುವ ಸಾಗಿಸುವುದು
ಮರಣದ ಚಿಂತೆಯಾಕೆ ?
ಮೃತ್ಯುವ ಮರೆತು ಜೀವಿಸೋಣ!

Tuesday, 7 February 2012

ವ(ಹ)ರ್ಷ ಕವನ

೨೦೧೨ರ ಹೊಸ ವರ್ಷವನ್ನು ನಾನು ಪುಟಾಣಿಗಳ (ದೀಪು, ರಶ್ಮಿ, ರಾಧಿಕ, ರಂಜಿತಾ, ಸಂಧ್ಯಾ) ಜೊತೆ ಆಚರಿಸಿದೆ. ಈ ಕುರಿತಾಗಿ ಬರೆದ ಕವನ.

ನೆನ್ನೆ  ಇತ್ತು ಆಚರಣೆ
ಬೆಳಗಿನವರೆಗೂ ಜಾಗರಣೆ !

ಸೇರಿದೆವು ಸಂಜೆ ಕೊಳದ ಬಳಿ
ಜೊತೆಯಾಯಿತು ತಂಗಾಳಿ
ಆಡಿದೆವಲ್ಲಿ ಹಲವಾರು ಆಟ
ಯಾರು ಕಳಿಸಿಕೊಟ್ಟರೋ ಸಮಯಕ್ಕೆ ಓಟ !

ಗಡಿಯಾರದ ಮುಳ್ಳಿಗೋ
ಗುರಿ ಮುಟ್ಟುವ ಕಾತರ
ಅಡುಗೆ ಮನೆಯ ಊಟವ
ಬಯಸಲಿಲ್ಲ ನಮ್ಮುದರ!

ಮಾತಿನರಮನೆಯೇ ನೆಲೆಸಿತ್ತಲ್ಲಿ
ಮೌನ ಮಂಕಾಯಿತು
ಭಾವನೆಗಳು ತುಂಬಿತ್ತಲ್ಲಿ
ಗಾನ ಲಾಸ್ಯ ಮೂಡಿತು

ಕೊರೆವ ಆ ಚಳಿಯಲ್ಲೂ  
ನಮಗೊಂದೇ ಆಸೆ, ಐಸ್ ಕ್ರೀಮು ತಿನ್ನಬೇಕೆಂದು
ನೆನೆಪಿಸಿ ಕೊಂಡರೆ ಈಗಲೂ
ನಮಗೊಂದೇ ಆಸೆ, ಹೊಸ ವರ್ಷ ಬರಬೇಕೆಂದು

ನೆನ್ನೆ  ಇತ್ತು ಆಚರಣೆ
ಹೊಸ ವರ್ಷಕೆ ಜಾಗರಣೆ!

Saturday, 3 December 2011

.......ನಿನ್ನ ಹೆಸರೇನೆ?

ದಿನಕ್ಕೊಮ್ಮೆ ನಾಕು ನಿಮಿಷ ನೋಡಿ
ದಿನವೆಲ್ಲ ನೆನೆವಂತೆ ಮಾಡಿದೆಯಲ್ಲೇ
ನಿನ್ನ ಹೆಸರೇನೆ?

ಕಲ್ಪನೆಗೂ ಮೀರಿದ ಚೆಲುವಿರಲು
ನಿನ್ನೆದುರು ನುಡಿಯದಂತೆ ಮಾಡಿದೆಯಲ್ಲೇ
ನಿನ್ನ ಹೆಸರೇನೆ?

ನಿನ್ನ ಮೊಗದಿಂದ, ನಗುವಿನಿಂದ
ಚಂದಿರನ ನೆನೆಯದಂತೆ ಮಾಡಿದೆಯಲ್ಲೇ      
ನಿನ್ನ ಹೆಸರೇನೆ?

ಚೊಚ್ಚಲ ನೋಟದಲ್ಲೇ ನನ್ನೆದೆಗೆ
ಪ್ರೇಮ ಬಾಣ ಚುಚ್ಚಿದೆಯಲ್ಲೇ
ನಿನ್ನ ಹೆಸರೇನೆ?
 

Monday, 4 April 2011

ಬಡವನ ಬೆವರು

ಬಡವನ ಬೆವರಿದೆ ಭತ್ತದಲ್ಲಿ
ಬಡವನ ಬೆವರಿದೆ ಬದನೆಯಲ್ಲಿ
ಬಡವನ ಬೆವರಿದೆ ಬಟಾಣಿಯಲ್ಲಿ
ಬಡವನ ಬೆವರಿದೆ ಬಾಳೆಯಲ್ಲಿ


ಬಡವನ ಬೆವರಿದೆ ಬಂಗಲೆಯಲ್ಲಿ
ಬಡವನ ಬೆವರಿದೆ ಬಸದಿಯಲ್ಲಿ
ಬಡವನ ಬೆವರಿದೆ ಬೀದಿಯಲ್ಲಿ
ಬಡವನ ಬೆವರಿದೆ ಬಯಲಿನಲ್ಲಿ



ಬಡವನ ಬೆವರಿದೆ ಬೆಳ್ಳಿಯಲ್ಲಿ

ಬಡವನ ಬೆವರಿದೆ ಬಂಗಾರದಲ್ಲಿ
ಬಡವನ ಬೆವರಿದೆ ಬೂಟಿನಲ್ಲಿ
ಬಡವನ ಬೆವರಿದೆ ಬಾವುಟದಲ್ಲಿ