ಡಿಸೆಂಬರ್ ೧೨ನೇ ಮಾಸ. ಇವತ್ತು ೧೨ ನೇ ದಿನ. ಇದಕ್ಕೆ ನನ್ನ ಬದುಕಿನಲ್ಲಿ ಒಂದು ವಿಶೇಷವಿದೆ. ಕಳೆದ ವರ್ಷ ಡಿಸೆಂಬರ್ ೧೨ ರಂದು ಮೊದಲ ಪೋಸ್ಟ್ ಮಾಡಿ ನಾನೂ ಒಬ್ಬ ಕನ್ನಡದ ಬ್ಲಾಗರ್ ಎನಿಸಿಕೊಂಡೆ. ಆದರೆ ಕವನಗಳು ಅದಕ್ಕಿಂತ ಮುಂಚೆಯೇ ಇದ್ದವು. ಬ್ಲಾಗು ಶುರುಮಾಡಿದಾಗ ನನ್ನ ಕಾವ್ಯನಾಮವಾದ "ಅಗ್ರಜ" ಅಂತ ಇಟ್ಟಿದ್ದೆ. ಆಮೇಲೆ ಅದು ಹೋಗಿ ಬೇರೊಂದು ಹೆಸರು ಇಟ್ಟೆ. ಅದೂ ಸಮಾಧಾನ ಸಿಕ್ಕಿರಲಿಲ್ಲ. ಸುಮಾರು ೨೦ ಪೋಸ್ಟ್ ಆದ ಮೇಲೆ, "ಅಂತರ್ವಾಣಿ" ಪದ ಸಿಕ್ಕಿತು. ತುಂಬಾ ಹಿಡಿಸಿತು ಹಾಗು ಸೂಕ್ತ ಅನಿಸಿತು. ಹೀಗೆ ಬರೆಯುತ್ತಾ ಒಂದು ವರ್ಷ ಕಳೆದೇ ಹೋಯಿತು.
ಮೊದಲಿನಿಂದ ನನ್ನ ಬ್ಲಾಗನ್ನು ಓದಿದವರಲ್ಲಿ ಮೊದಲ ಸ್ಥಾನವನ್ನು ಕುಮಾರಿ ಲಕ್ಷ್ಮಿ ಪಡೆದಿರುತ್ತಾರೆ. ಅವರ ನಂತರದಲ್ಲಿ ಕುಮಾರಿ ಪುಷ್ಟ, ಶ್ರೀ ಸುಧೀರ್, ಶ್ರೀ ಶಿವ ಹಂಚಿಕೊಂಡಿರುತ್ತಾರೆ. ಆರ್ಕುಟ್, ಕನ್ನಡಿಗರು.ಕಾಂ ಹಾಗು ಮಜಾ ಮಾಡಿ ತಾಣದಲ್ಲಿ ಸಿಕ್ಕ ಅನೇಕ "ಬೆಮಿ" [ಬೆರಳಂಚಿನ ಮಿತ್ರರು] ಓದಿ ಪ್ರೋತ್ಸಾಹಿಸಿದ್ದಾರೆ. ಇವರಲ್ಲಿ ಶ್ರೀ ತ.ವಿ.ಶ್ರೀ, ಶ್ರೀ ಮಧು, ಶ್ರೀಮತಿ ಲಿಲ್ಲಿ ಇದ್ದಾರೆ. ಈ ಸಮಯದಲ್ಲೇ ಶ್ರೀಮತಿ ತೇಜಸ್ವಿನಿ ಅವರ ಪರಿಚಯವಾಯಿತು. ಅಂದಿನಿಂದ ನನ್ನೆಲ್ಲಾ ಕವನಗಳನ್ನು, ಲೇಖನಗಳನ್ನೂ ಓದಿ ತಪ್ಪುಗಳನ್ನು ತಿದ್ದಿ, ನನಗೆ ಪ್ರೋತ್ಸಾಹಿಸುತ್ತಾಯಿದ್ದಾರೆ. ನಂತರ ನನ್ನೀ ಚಿಕ್ಕ ಬ್ಲಾಗು ಶ್ರೀ ಅರುಣ್, ಶ್ರೀ ಹರೀಶ್ , ಶ್ರೀ ಸುನಾಥಂಕಲ್, ಶ್ರೀ ರಾಜು, ಶ್ರೀ ಶಿವಣ್ಣ, ಶ್ರೀ ಪ್ರಕಾಶಣ್ಣ , ಶ್ರೀ ಸುಧೇಶ್ ಕಣ್ಣಿಗೂ ಬಿದ್ದಿದೆ. ಇವರೆಲ್ಲರ ಸತತ ಪ್ರೋತ್ಸಾಹದಿಂದ ಹೆಚ್ಚು ಬರೆಯ ಬೇಕೆಂಬ ಬಯಕೆ ಮನಕ್ಕಾಗಿದೆ.
ನನಗೆ ಪ್ರೋತ್ಸಾಹ ನೀಡುತ್ತಾ ಬಂದಿರು ಎಲ್ಲರಿಗೂ ಹೃತ್ಪೂರ್ವಕ ವಂದನೆಗಳು.
"ಅಂತರ್ವಾಣಿ" ಪದಕ್ಕೆ ನಾ ಬರೆದ ಕವನ:
"ಹೇಳುವೆನು ನನ್ನೀ ಅಂತರ್ವಾಣಿಯ
ಕೇಳಿದರು ಸರಿ, ಕೇಳದಿದ್ದರೂ ಸರಿ
ಬರೆಯುವೆನು ನನ್ನೀ ಚೇತನವಿರುವವರೆಗೂ
ಓದಿದರು ಸರಿ, ಓದದಿದ್ದರೂ ಸರಿ"
ಜ್ಞಾನದ ಬಗ್ಗೆ
-
ಜ್ಞಾನದಿಂ ಮೇಲಿಲ್ಲ| ಶ್ವಾನನಿಂ ಕೀಳಿಲ್ಲ|ಭಾನು ಮಂಡಲದಿಂ ಬೆಳಗಿಲ್ಲ ಜಗದೊಳಗೆ|ಜ್ಞಾನವೇ
ಮೇಲು ಸರ್ವಜ್ಞ||ಜ್ಞಾನದಿಂದಲಿ ಇಹವು| ಜ್ಞಾನದಿಂದಲಿ ಪರವು|ಜ್ಞಾನವಿಲ್ಲದಲೆ ಸಕಲವೂ
ತನಗಿದ್ದು|ಹಾನಿ...
15 years ago
17 ಜನ ಸ್ಪಂದಿಸಿರುವರು:
congratulations. All the best. ಬರೀತಿರಿ.
ಕೇಳುವೆನು ನಿನ್ನೀ ಅಂತರ್ವಾಣಿಯ
ಹೇಳಿದರು ಸರಿ, ಹೇಳದಿದ್ದರೂ ಸರಿ
ಓದುವೆನು ನನ್ನೀ ಚೇತನವಿರುವವರೆಗೂ
ಸರಿ ಸರಿ.. ಇನ್ನೊಂದ್ ಪೋಸ್ಟ್ ಬರಿ ;-)
ವರುಷ ಪೂರೈಸಿದ ಹರುಷಕ್ಕೆ ಹರೀಶನ ಅಭಿನಂದನೆಗಳು :-)
ಅಭಿನಂದನೆಗಳು :)
ಅಭಿನಂದನೆಗಳು ಜಯಶಂಕರ್.
ನಿಮ್ಮ ಬರವಣಿಗೆ ಹೀಗೆ ಬರುತ್ತಿರಲಿ.
congrajulations! innu hechechu barithiri!
ಅಂತರ್ವಾಣಿ....
ತುಂಬಾ ಖುಷಿಯಾಗುತ್ತಿದೆ....
ನಿಮ್ಮ ಬ್ಲೊಗ್ ವೈವಿದ್ಯಮಯವಾಗಿದೆ...
ನನಗೆ ಸಮಯ ಇದ್ದಾಗ ನಿಮ್ಮ ಹಳೆಯ ಲೆಖನ ಓದುತ್ತಾ ಕಳೆಯುತ್ತಿದ್ದೆನೆ...
ಇನ್ನೂ ಬರೆಯಿರಿ...
ಓದಲು ನಾನಿದ್ದೇನೆ...
ಅಭಿನಂದನೆಗಳು....
ಶಂಕರ್,
ಹಾರ್ದಿಕ ಶುಭಾಶಯಗಳು :) ನಿಮ್ಮ ಅಂತರ್ವಾಣಿಯನ್ನು ನಾನಂತೂ ತಪ್ಪದೇ ಕೇಳುವೆ.... ಅಲ್ಲಾ ಓದುವೆ ;-) ಹೀಗೇ ಬರೆಯುತ್ತಿರಿ. ಬರುತ್ತಿರುವೆ. ಶುಭವಾಗಲಿ.
ಮಾ, ಅಂಬಿ, ಗಿರಿಜಾ ಅವರೆ, ಶಿವಣ್ಣ, ಪು, ಪ್ರಕಾಶಣ್ಣ, ತೇಜು ಅಕ್ಕ ನಿಮ್ಮೀ ಸ್ಫೂರ್ತಿಯೇ ನನ್ನ ಬ್ಲಾಗಿಗೆ ಒಂದು ವರಷ ಆಗುವಂತೆ ಮಾಡಿದೆ.
ಜಯಶಂಕರ,
ಹಾರ್ದಿಕ ಶುಭಾಶಯಗಳು.
ಹೆಚ್ಚೆಚ್ಚು ಲೇಖನಗಳ ನಿರೀಕ್ಷೆಯಲ್ಲಿರುವೆ.
ನಿಮ್ಮ ಬ್ಲಾಗ್ ಓದಿರುವವರಲ್ಲಿ ಕುಮಾರಿ ಲಕ್ಷ್ಮೀ ಮೊದಲ ಸ್ಥಾನ ಪಡೆದಿದ್ದರೆ ಸುಧೇಶ್ ಕೊನೆಯ ಸ್ಥಾನ ಪಡೆದಿದ್ದಾರೆ :(
ಹಿ...ಹಿ...ತಮಾಷೆಗೆ ಅ೦ದೆ.
ಕ೦ಗ್ರಾಟ್ಸು ಸ೦ವತ್ಸರ ಪೂರೈಸಿದುದಕ್ಕೆ.
ಹೀಗೆ ಬರೀತಾ ಇರಿ. ನಾವು ಓದುತ್ತಾ ಇರುತ್ತೇವೆ.
- ಸುಧೇಶ್
ಸನಾಥಂಕಲ್ ಹಾಗು ಸುಧೇಶ್ ವಂದನೆಗಳು.
ಒಳ್ಳೇ "ಶ್ರೀ" ಸೇರಿಸಿಬಿಟ್ಟಿದ್ದೀರ ಎಲ್ಲರಿಗೂ.. ಗುಡ್ ಗುಡ್...
ಸಂವತ್ಸರೋತ್ಸವದ ಶುಭಾಶಯಗಳು ಕಣಪ್ಪೋ..
ಹಾಗೇ ತಮ್ಮ ಬ್ಲಾಗು ಶತಮಾನೋತ್ಸವವನ್ನೂ ಆಚರಿಸುವಂತಾಗಲಿ.. :-)
ಅರುಣ್,
ವಂದನೆಗಳು
Oh modala varshada sambrama joragidhe..heeghe nimma blog varsha varshavu harshadayakavagi beleyutha erali..illi bheti needuva ellarigu sada santasada nagu taruvantagali endu hrudayapurvakavagi abhinandisutha..
-Lilly.
congrats Jay..
heege munduvaresi nimma kannada kavanagala yaatreyanna...
Madhu
ಹಾಯ್,
ಒ೦ದು ವರುಷದ ಯಶಸ್ವಿ ಪಯಣಕ್ಕೆ ಅಭಿನಂದನೆಗಳು. ಹೀಗೆ ಮುಂದುವರೆಯಲಿ.
ನಿಮ್ಮ ಬ್ಲಾಗ್ ಲಿ೦ಕಿಸಿಕೊಳ್ಳುತ್ತಿದ್ದೇನೆ:) ನೀವೂ ಲಿ೦ಕಿಸಿಕೊಳ್ಳುವಿರೆ೦ದು ಆಶಿಸುವೆ:)
ಆಗಾಗ ಭೇಟಿ ನೀಡುತ್ತಿರಿ..
ಲಿಲ್ಲಿ -> ಸಾಕ್ಷಿ ಸಿಕ್ಕಿದೆ :)
ಮಧು -> ವಂದನೆಗಳು
ಸುಷ್ಮ -> ವಂದನೆಗಳು.. ಇಗೊ ಬಂದೆ ನಿಮ್ಮ ಬ್ಲಾಗಿಗೆ...
Post a Comment