Monday, 15 December 2008

ಸಂಗಾತಿಯ ಚಿಂತೆಯಲ್ಲಿ


[ಚಿತ್ರವನ್ನು ಕಳುಹಿಸಿದ ಶ್ರೀಮತಿ ತೇಜಸ್ವಿನಿಯವರಿಗೆ ವಂದನೆಗಳು]



ಅಂದದ ತುಂಟ ಕಂಗಳು
ಕಂಬನಿ ಹಂಚದೆ;
ಸಂಕಟ ನುಂಗಿವೆ
ಸಂಗಾತಿಯ ಚಿಂತೆಯಲ್ಲಿ

ಬೆಳದಿಂಗಳಲ್ಲಿ ಸೌಂದರ್ಯವಿಲ್ಲ!
ಸಂಗೀತದಲ್ಲಿ ಇಂಚರವಿಲ್ಲ!
ಶ್ರೀಗಂಧದಲ್ಲಿ ಸುಗಂಧವಿಲ್ಲ!
ಸಂಗಾತಿಯ ಚಿಂತೆಯಲ್ಲಿ

ಬೆಂಕಿಗೆ ಸ್ಪಂದಿಸುವುದಿಲ್ಲ!
ನಿಂದಿಸುವರಿಗೆ ನಿಂದನೆಯಿಲ್ಲ!
ಅಂಗಾಂಗಗಳು ಅಂಕೆಯಿಲ್ಲಿಲ್ಲ!
ಸಂಗಾತಿಯ ಚಿಂತೆಯಲ್ಲಿ

ವಿ.ಸೂ: ಈ ಕವನದ ಪ್ರತಿಯೊಂದು ಪದವೂ ಅನುಸ್ವಾರಯುಕ್ತವಾದದ್ದು. ಹಿಂದೆ ಬರೆದ "ಅಂಬಿಗನ ಮಮತೆ"ಯ ಪಲ್ಲವಿ ಮಾತ್ರವೇ ಅನುಸ್ವಾರದಲ್ಲಿತ್ತು. ಬಹು ದಿನಗಳ ಪ್ರಯತ್ನ "ಅನುಸ್ವಾರಗಳ ಕವನ" ಈಗ ಫಲಕಾರಿಯಾಗಿದೆಯೆಂದು ಭಾವಿಸಿದ್ದೇನೆ.

14 ಜನ ಸ್ಪಂದಿಸಿರುವರು:

shivu.k said...

ಜಯಶಂಕರ್,
ಚಿತ್ರ ನೋಡಿ ಕವನ ಬರೆಯುವುದರಲ್ಲಿ ನೀವು ಕೂಡ ಸಿದ್ಧಹಸ್ತರು. ಚಿತ್ರಕ್ಕೆ ತಕ್ಕಂತೆ ಇದೆ ಕವನ.

ಅಂತರ್ವಾಣಿ said...

ಶಿವಣ್ಣ
ವಂದನೆಗಳು

Anonymous said...

sangaathi chinthena???Auntyge hELi hudkthaare yaarnaadru hehe!nice poem

ಅಂತರ್ವಾಣಿ said...

ಪು,
ಸಂಗಾತಿಯ ಚಿಂತೆಯಿರೋದು ನನಗಲ್ಲ. ಆ ಚಿತ್ರದಲ್ಲಿನ ಹುಡುಗಿಗೆ "ಚಿಂತೆ ಇರಬಹುದು" ಎಂದು ಕಲ್ಪಿಸಿ ಬರೆದದ್ದು..

Harisha - ಹರೀಶ said...

ನಾನು ಹೇಳಿದ್ದು.. ನೆನಪಿದೆಯಲ್ಲ.. ಪ್ರಯತ್ನಿಸಿ ;-)

ಅಂತರ್ವಾಣಿ said...

ಅಂಬಿ,
ನಿನ್ನ ಸಹಕಾರ ಬೇಕು ಅದಕ್ಕೆ :)

NilGiri said...

ನನಗೆ ಸಾಮಾನ್ಯವಾಗಿ ಕವನಗಳು ಅರ್ಥವಾಗುವುದಿಲ್ಲ:( ಆದರೆ ಚಿತ್ರ ನೋಡುತ್ತಾ ನೋಡುತ್ತಾ ನಿಮ್ಮ ಕವನ ಅರ್ಥವಾಯಿತು. ಕವನ ಚೆನ್ನಾಗಿದೆ ಜಯಶಂಕರ್.


ಏನು ಸಹಕಾರ? ಏನು ವಿಷಯ?! ನಂಗೂ ಸ್ವಲ್ಪ ಹೇಳಿ...ನಾನು ಯಾರಿಗೂ ಹೇಳಲ್ಲ!

Ittigecement said...

ಅಂತರ್ವಾಣಿ...

ಕವನ ತುಂಬಾ ಚೆನ್ನಾಗಿ ಬಂದಿದೆ...
ಇನ್ನೂ ಬರೆಯಬಹುದಿತ್ತೇನೋ ಅನಿಸಿತು...

ಹರೀಷ್..ಮತ್ತು ನೀವು ಏನು ಮಾತಾಡುತಿದ್ದೀರಿ..?
ನಾನೂ ಸಹಾಯ ಮಾಡಲು ಸಿದ್ಧ...

ಧನ್ಯವಾದಗಳು...

maddy said...

superb jay..

hosa prayatna bahala chennagi moodide

Lakshmi Shashidhar Chaitanya said...

commendable. sakhattaagide poem.

ತೇಜಸ್ವಿನಿ ಹೆಗಡೆ said...

ಶಂಕರ್,

ನೀವು ನನ್ನಲ್ಲಿ ಚಿತ್ರ ಕೇಳಿದಾಗ ಕವನಕ್ಕಾಗಿ ಎಂದು ತಿಳಿದಿರಲಿಲ್ಲ. ಹೌದು ಚಿತ್ರ ಕವನ ರಚನೆಗೆ ಸ್ಫೂರ್ತಿ ನೀಡುವಂತಿದೆ. ನನಗೂ ಅದಕ್ಕೇ ಈ ಚಿತ್ರ ಬಹಳ ಇಷ್ಟವಾದದ್ದು. ಯಾವುದೋ(ಯಾರದೋ?) ನಿರೀಕ್ಷೆಯಲ್ಲಿರುವಂತಿರುವ ಸುಂದರ ಕಂಗಳಿಗೆ ಹೇಳಿಮಾಡಿಸಿದಂತಿದೆ ನಿಮ್ಮ ಸುಂದರ ಕವನ :) ಉತ್ತಮ ಪ್ರಯತ್ನ ಕೂಡ.

sunaath said...

ತೇಜಸ್ವಿನಿ ನೀಡಿದ ಸುಂದರ ಚಿತ್ರ ಹಾಗು ಕವನ ಎಷ್ಟು ಅನ್ಯೋನ್ಯವಾಗಿವೆ!
ಇಬ್ಬರಿಗೂ ಅಭಿನಂದನೆಗಳು.
ಅನುಸ್ವಾರಪ್ರಾಸಕ್ಕಾಗಿ ನಿಮಗೆ ಮತ್ತೊಮ್ಮೆ ಅಭಿನಂದನೆಗಳು.

ಅಂತರ್ವಾಣಿ said...

ಗಿರಿಜಾ ಅವರೆ,
ವಂದನೆಗಳು. ನನ್ನ ಕವನಗಳು ಅರ್ಥವಾಗುವ ರೀತಿಯಲ್ಲೇ ಇರುತ್ತವೆ :)

ಪ್ರಕಾಶಂಕಲ್,
ವಂದನೆಗಳು.

[ವಿಷಯ ಏನೆಂದರೆ ನಮ್ಮ ಅಂಬಿಗರು ಒಂದು ಪ್ರಯತ್ನ ಮಾಡು ಅಂದರು. ಆ ಮಾತಿನ ಮುಂದಿನ ಮಾತನ್ನು ಇಲ್ಲಿ ಕಾಮೆಂಟ್ ಮಾಡಿದ್ದಾರೆ. ಆ ಕವನ ನಾನು ಬರೆದರೆ ಖಂಡಿತ ಹೇಳುತ್ತೇನೆ.]

ಮಧು,
ವಂದನೆಗಳು

ಮಾ,
ವಂದನೆಗಳು

ತೇಜು ಅಕ್ಕ,
ವಂದನೆಗಳು, ನಿಮ್ಮ ಮಾತುಗಳಲ್ಲೂ ಅನೇಕ ಅನುಸ್ವಾರಗಳಿವೆ :)

ಸುನಾಥಂಕಲ್,
ವಂದನೆಗಳು.

ಎಲಾರಿಗೂ,
[ಈ ಚಿತ್ರವನ್ನು ನಾನು ನೋಡಿದ ರೀತಿ ಅದು. ಬೇರೆಯವರು ಬೇರೆ ರೀತಿಯಲ್ಲಿ ಬರೆಯ ಬಹುದು. ಈ ಚಿತ್ರ ನೋಡಿದಾಗ ಅನುಸ್ವಾರ ಪ್ರಯೋಗ ತಲೆಯಲ್ಲಿರಲಿಲ್ಲ. ಮೊದಲ ಸಾಲು ಬರೆದ ಮೇಲೆ ಅನುಸ್ವಾರದಲ್ಲೇ ಬರೆಯೋಣವೆಂದು ಪ್ರಯತ್ನ ಪಟ್ಟೆ]

ಸುಧೇಶ್ ಶೆಟ್ಟಿ said...

ಜೇ ಅವರೇ,

ಸರಳ ಮತ್ತು ಸು೦ದರ.... ಕವನ ಮತ್ತು ಕವನದ ಸು೦ದರಿ ಎರಡೂ...