Thursday, 4 December 2008

ಕಾಲಿಗೊಂದು ಕಪ್ಪೆ

"ಬೋಲೋ ವಟ ವಟ ಮಹಾರಾಜ್ ಕೀ ಜಯ್"





ಮಳೆ ಬಂದ ಕಾಲದಿ
ರಸ್ತೆ ಬದಿಯ ಕೊಳದಿ
ಕಪ್ಪೆಗಳ ಸಂಸಾರವೊಂದಿತ್ತು

ಅರೆ ಕ್ಷಣ ಬಿಡದೇ
ಅವುಗಳ "ವಟ ವಟ" ಕರ್ಣಗಳಿಗಿತ್ತು
ಅಲ್ಪ ದಿನಗಳಲ್ಲೇ
ಎಮ್ಮ ಮನೆಯಂಗಳದಲ್ಲಿ
ಕಾಲಿಗೊಂದು ಕಪ್ಪೆ ಸಿಗುತ್ತಿತ್ತು!


"ಭೋಲೋ ವಟ ವಟ ಮಹಾರಾಜ್ ಕೀ ಜಯ್"

12 ಜನ ಸ್ಪಂದಿಸಿರುವರು:

Sridhar Raju said...

uGhe...uGhe...uGhe..

Ittigecement said...

ಅಂತರ್ವಾಣಿಯವರೆ..
ಈ ಕಪ್ಪೆಗಳು ಸಾಯಂಕಾಲ ಸಮಯದಲ್ಲಿ ಹೊರಗೆ ಬಂದರೆ "ಮಳೆ" ಬರುತ್ತದೆ ಅಂತ ಹಳ್ಳಿ ಕಡೆ ರೈತರು ನಂಬುತ್ತಾರೆ. ನಾನೂ ಕೂಡ ಅದನ್ನು ಗಮನಿಸಿದ್ದೇನೆ.

ನಿಮ್ಮನೆ ಅಂಗಳದಲ್ಲಿ ಕಪ್ಪೆಗಳನ್ನು ನೋಡಿ ಸೋಜಿಗವಾಯಿತು.. ಎಲ್ಲಿಂದ ಬಂದವು? ನೀರಿನ ಟ್ಯಾಂಕಿನಿಂದಲೆ?...
ಅವುಗಳ ವಟ..ವಟ ಶಬ್ಧ ಕೇಳಿ ನಿದ್ದೆಯಂತೂ ಬರುವದಿಲ್ಲ...

THANK U...

ಅಂತರ್ವಾಣಿ said...

ಪ್ರಕಾಶಣ್ಣ,

ನಮ್ಮ ಮನೆಯ ಹತ್ತಿರದಲ್ಲೇ ಒಂದು ಕೊಳಚೆ ನೀರಿನಿಂದ ಕೂಡಿದ ಕೊಳವಿದೆ. ಅಲ್ಲಿ ಅವುಗಳು ಇದ್ದವು. ಕೆಲವು ರಾತ್ರಿಗಳಲ್ಲಿ ನಿದ್ದೆ ಬರಲಿಲ್ಲ..

ಚಿತ್ರಾ ಸಂತೋಷ್ said...

"ಭೋಲೋ ವಟ ವಟ ಮಹಾರಾಜ್ ಕೀ ಜಯ್"....!!!!!
ನಿಮ್ಮ ಬ್ಲಾಗ್ ಚೆನ್ನಾಗಿದೆ ಸರ್. ಕಪ್ಪೆ ವಟ ವಟ ಕೇಳಿ ನಿದ್ದೆ ಬರಲಿಲ್ವಾ? ಪಾಪಪಪಪ...
-ಚಿತ್ರಾ

ಅಂತರ್ವಾಣಿ said...

ಚಿತ್ರಾ ಅವರೆ,
ವಂದನೆಗಳು..
ಈಗ ಸರಿಯಾಗಿ ನಿದ್ದೆ ಬರುತ್ತಿದೆ.

ತೇಜಸ್ವಿನಿ ಹೆಗಡೆ said...

ಅಬ್ಬಾ! ಎಷ್ಟೊಂದು ಚಿಕ್ಕ ಚಿಕ್ಕ ಕಪ್ಪೇಮರಿಗಳು!!! ಕಪ್ಪೆ ನಮ್ಮ ಮೈಮೇಲೆ ಮೂತ್ರ ವಿಸರ್ಜಿಸಿದರೆ ತುಂಬಾ ಉರಿಯುಂಟಾಗಿ ಬೊಬ್ಬೆಗಳಾಗುತ್ತವೆ ಎಂದು ಕೇಳಿದ್ದೇನೆ. ನನಗಿನ್ನೂ ಆ ಅನುಭವವಾಗಿಲ್ಲ. ನಿಮಗೇನಾದರೂ ಆಗಿದೆಯೇ?

"ವಟ ವಟ ಮಾಹಾರಾಜಾ ಕಿ ಜೈ.." :)

ಅಂತರ್ವಾಣಿ said...

ತೇಜು ಅಕ್ಕ,
ಇದಕ್ಕಿಂತ ತುಂಬಾ ಮರಿಗಳು ಇದ್ದವು. ಅಮ್ಮ ಆಚೆ ಹಾಗಿ ಬಿಟ್ಟಿದ್ದರು...

ಕಪ್ಪೆ ಬಗ್ಗೆ ಕೊಟ್ಟ ಮಾಹಿತಿಗೆ ವಂದನೆಗಳು. ನನಗೂ ಅದರ ಅನುಭವವಾಗಿಲ್ಲ

Lakshmi Shashidhar Chaitanya said...

ಆಗ ಹಾವಿನ ವಿಡಿಯೋ...ಈಗ ಕಪ್ಪೆ ವಿಡಿಯೋ...ನನಗ್ಯಾಕೋ ಶೃಂಗೇರಿ ನೆನಪಾಗ್ತಿದ್ಯಲ್ಲ...

ಇರ್ಲಿ..."ಭೋಲೋ ವಟ ವಟ ಮಹಾರಾಜ್ ಕೀ ಜಯ್"....!!!!!

shivu.k said...

ಜಯಶಂಕರ್,
ವಟ ವಟ ಮಹಾರಾಜ್ ಈ ನಮ್ಮೆಲ್ಲಾ ಬ್ಲಾಗಿಗರೆಲ್ಲರಿಗೂ ಅನ್ವಹಿಸುತ್ತದೆ. ನಮ್ಮ ಕೆಲಸವೂ ಅದೇ ತಾನೆ ! ಎಲ್ಲರೂ ಬೆಳಿಗ್ಗೆ ರಾತ್ರಿ ಹಗಲು ಎನ್ನದೆ ಬ್ಲಾಗಿನಲ್ಲಿ ವಟ ವಟ ಅನ್ನುತ್ತಿರುವುದು.

ಆಹಾಂ! ನನ್ನ ಮತ್ತೊಂದು ಬ್ಲಾಗಿನಲ್ಲಿ ಹಿರಿಯಜ್ಜ ಬಂದಿದ್ದಾನೆ ಬಿಡುವು ಮಾಡಿಕೊಂಡು ಬನ್ನಿ ಬೇಟಿಮಾಡಲು.

ಅಂತರ್ವಾಣಿ said...

ಮಾ,
ಶಾರದ ಆಂಟಿ ಹಾಗು ಶಂಕ್ರಣ್ಣ ನಿನಗೆ ಒಳ್ಳೇದು ಮಾಡಲಿ.

ಶಿವು ಅವರೆ,
ನಮ್ಮದೂ "ವಟ ವಟ"ನೇ.. ನಿಮ್ಮ ಇನ್ನೊಂದು ಬ್ಲಾಗಿ ಈಗ ನೋಡುತ್ತೀನಿ. ಸ್ಪಂದಿಸುತ್ತೀನಿ.

ಸುಧೇಶ್ ಶೆಟ್ಟಿ said...

ಅ೦ತೂ ಕಪ್ಪೆಗಳ ಜೊತೆ ನೀವೂ ಕುಪ್ಪಳಿಸಿ ಚೆನ್ನಾಗಿ ಜಾಗಿ೦ಗ್ ಆಗಿರಬೇಕಲ್ಲ :)

ಹಾವು ಆಯ್ತು,ಕಪ್ಪೆ ಆಯ್ತು, ಕೊಕ್ಕರೆ ಆಯ್ತು ಮು೦ದಿನ ಸರದಿ ಯಾರದ್ದು?

ಕುತೂಹಲಿಯಾಗಿದ್ದೇನೆ.

- ಸುಧೇಶ್

ಅಂತರ್ವಾಣಿ said...

ಸುಧೇಶ್,
ಕಪ್ಪೆಗಳು ಜೊತೆಗಿದ್ದು... ನಿದ್ದೆ ಕಡೆಮೆಯಾಗಿತ್ತು. :)
ಮುಂದೆ ಯಾವ ಅತಿಥಿ ಬರುತ್ತಾರೋ ಅವರ ಚಿತ್ರ.