ಆಕೆಗಿನ್ನು ೧೩. ಶಾಲೆಯಲ್ಲಿ ಓದುತ್ತಾಯಿದ್ದಾಳೆ. ಅದು ಹೇಗೋ ಒಬ್ಬನ ಮೇಲೆ ಪ್ರೀತಿ ಉಂಟಾಗಿತ್ತು. ಆ
ಹುಡುಗ ಇವಳನ್ನು ಓಡಿ ಹೋಗಲು ಕರೆದನಂತೆ. ಆದರೆ ಈಕೆಯ ಮನಸ್ಸು ಒಪ್ಪಲಿಲ್ಲ. ತಂದೆ ತಾಯಿಯರನ್ನು
ಬಿಟ್ಟು ಓಡಿ ಹೋಗ ಬಾರದು ಎಂಬ ಮನಸ್ಸಿತ್ತು. ಆದರೆ ಈ ವಿಷಯವು ಮನೆ ಮಂದಿಗೆ ತಿಳಿದು ಇವಳನ್ನು
ದೇವದಾಸಿ ಮಾಡಲು ಹೊರಟರು.
ಎಲ್ಲರೂ ಸವದತ್ತಿ ಯಲ್ಲಮ್ಮನ ಗುಡ್ದಕ್ಕೆ ಹೋಗಿ ಇವಳನ್ನು ವಧುವಿನಂತೆ ಸಿಂಗರಿಸಿದರು. ಆಕೆಗೆ ಕೈತುಂಬಾ
ಬಳೆಗಳನ್ನು ತೊಡಿಸಿದಾಗ ಬಹಳ ಆನಂದವಾಯಿತಂತೆ. ಎಲ್ಲಾ ಶಾಶ್ತ್ರಗಳನ್ನು ಮುಗಿಸಿ ಕುತ್ತಿಗೆಗೆ ಒಂದು ತಾಳಿ
ಕಟ್ಟಿದರು. ಈಗ ಇವಳು ದೇವದಾಸಿ! ಈ ಪದವು ಕೇಳಲು ಹಿತವಾಗಿದೆಯಷ್ಟೇ! ಬೇಸರದ ಸಂಗತಿಯಂದರೆ
ಇಷ್ಟನ್ನೆಲ್ಲಾ ಮಾಡಲು ಇವಳ ಹೆತ್ತಮ್ಮನ ಆಶೀರ್ವಾದವೂ ಇತ್ತು.
ಇದೆಲ್ಲಾ ಆದ ನಂತರ ಎಂದಿನಂತೆ ಶಾಲೆಗೆ ಹೋದಳು.ಸಹಪಾಠಿಗಳೆಲ್ಲಾ ಇವಳ ತಾಳಿಯನ್ನು ನೋಡಿ, ನಿನಗೆ
ಯಾವಾಗ ಮದುವೆಯಾಯಿತು? ನಿನ್ನ ಗಂಡ ಯಾರು? ಎಲ್ಲಿದ್ದಾನೆ? ಅಂತೆಲ್ಲಾ ಅನೇಕ ಪ್ರಶ್ನೆಗಳನ್ನಿಟ್ಟರು. ಆಕೆಗೆ
ಯಾವುದಕ್ಕೂ ಉತ್ತರಿಸಲು ಆಗಲಿಲ್ಲ. ಏನು ತೊಚುತ್ತೆ ...? ಪ್ರಿಯತಮ ಕರೆದಾಗ ಈಕೆ ಓಡಿ ಹೋಗಿದ್ದರೆ
ಚೆನ್ನಾಗಿರುತ್ತಿತ್ತೋ ಏನೋ ಅಂತ ನನಗೆ ಅನ್ನಿಸಿತು.
ಇವಳ ಭಾವ, ಈ ಪದ್ಧತಿ ನಡೆಸಲು ಬೇಕಾಗುವ ಖರ್ಚುಗಳನ್ನೆಲ್ಲಾ ಭರಸಿದನಂತೆ.ಹಾಗಾಗಿ ಇವಳ ತಾಯಿ
ಆತನೊಂದಿಗೆ ಮಲಗಲು ಹೇಳಿದ್ದಳಂತೆ. ಅಷ್ಟೇ ಅಲ್ಲ ಸಿಕ್ಕವರೆಲ್ಲರ ಜೊತೆಗೂ ಮಲಗಿದ್ಡಾಳಂತೆ.ಇವಳೇ
ಹೇಳುವಹಾಗೆ ಇವಳ ಅಕ್ಕನ ಸಂಸಾರ ಸರಿಯಿರಬೇಕಾದರೆ ಈಕೆ ಭಾವಾನೊಂದಿಗೆ ರಾತ್ರಿಗಳ ಕಳೆಯಬೇಕಿತ್ತು.
ಹೀಗೆ ದಿನಗಳು ಕಳೆದಂತೆ ಈಕೆ ಗರ್ಭವತಿಯಾದಳು.ಒಂದು ಹೆಣ್ಣು ಮಗುವಿಗೆ ಜನ್ಮವಿತ್ತಳು.ಮತ್ತೆರಡು
ವರ್ಷಗಳಲ್ಲಿ ಇನ್ನೊಂದು ಗಂಡು ಮಗುವಿಗೆ ಜನ್ಮವಿತ್ತಳು. ಇಷ್ಟೇ ಈಕೆಯ ಸಂಸಾರ.ನಿನ್ನ ಮಕ್ಕಳು ಏನ್
ಮಾಡ್ತಾಯಿದ್ದರೆ ಅಂತ ಕೇಳಿದಾಗ, ಆಕೆ ಹೆಮ್ಮೆಯಿಂದ ಹೇಳುತ್ತಾಳೆ "ಹೈ ಸ್ಕೋಲ್ ಓದುತ್ತಾಯಿವೆ".
ತಂದೆ ಹೆಸರು ಏನನ್ನು ಕೊಟ್ಟಿದ್ದೀರ ಅಂತ ಕೇಳಿದಾಗ ಆಕೆ ಹೇಳುತ್ತಾಳೆ "ನನ್ನ ಹೆಸರನ್ನೇ ಕೊಟ್ಟಿದ್ದೀನಿ".
ಯಾಕಮ್ಮ ತಂದೆ ಯಾರು ಅಂತ ಗೊತ್ತಿಲ್ಲವೇ? ಅಂತ ಕೇಳಿದ ಪ್ರಶ್ನೆಗೆ "ತಂದೆ ಹೆಸರು ಕೊಟ್ಟರೆ ಅವರು
ಮುಂದೆ ಹಕ್ಕು ಚಲಾಯಿಸ ಬಹುದು.ಹಾಗಾಗಿ ಕೊಟ್ಟಿಲ್ಲ".ಈ ಮಾತನ್ನು ಕೇಳಿದಾಗ ತುಂಬಾ ದುಃಖವಾಯಿತು
ನನಗೆ.
ಈಕೆಯ ತಾಯಿದ ಮಹದಾಸೆ ಇದ್ದದ್ದು ಇವಳನ್ನು ಪುಣೆ, ಮುಂಬೈಗೆ ಕಳುಹಿಸಿ ಹೆಚ್ಚು ಹೆಚ್ಚು ಹಣ
ಸಂಪಾದಿಸುವುದು.ಆದರೆ ದೇವರ ದಯೆಯಿಂದ ಇದು ಸಾಧ್ಯವಾಗಲಿಲ್ಲ.
ಈಕೆಯ ಮಗಳು ಒಮ್ಮೆ ಕೇಳಿದಳಂತೆ "ನಮ್ಮಪ್ಪ ಯಾರಮ್ಮ? ನಮ್ಮಪ್ಪ ಎಲ್ಲಮ್ಮ?... ನಿನ್ನ ಮದುವೆ
ಮಾಡಿಕೊಟ್ಟಿದ್ದರೆ,ನಮ್ಮ ಜೊತೆಗೆ ಅಪ್ಪನೂ ಇರುತ್ತಿದ್ದರಲ್ವೇನಮ್ಮ". ಏನು ಉತ್ತರ ಕೋಟ್ಟಾಳು ಈಕೆ? ನಾನು
ಏನು ಹೇಳುತ್ತೀನಿ ಅಂದರೆ, ಆ ಯಲ್ಲಮ್ಮನ ಸಮ್ಮುಖದಲ್ಲಿ, ಒಂದು ಕೆಟ್ಟ ಪದ್ಧತಿಯನ್ನು ಆಚರಿಸಿ ಎಷ್ಟೋ
ಹೆಣ್ಣು ಮಕ್ಕಳ ಜೀವನವನ್ನು ಹಾಳು ಮಾಡಿದ್ದಾರೆ. ಈಗಲೂ ಈ ಪದ್ಧತಿಯಿದೆಯಂತೆ.
ಈಕೆಯ ಜೀವನ ಬರೀ ನೋವೆ? ಅಂತ ಯೋಚನೆ ಮಾಡುತ್ತಾಯಿದ್ದೆ. ಆಗ ಈಕೆ ಜೀವನಕ್ಕೆ Turning
Point ಸಿಕ್ಕಿತು. ಮಹಿಳಾ ಹಿತ/ಅಭಿವೃದ್ದಿ ಮಾಡುವ ಸಂಘವೊಂದು ಈಕೆಯಿದ್ದೆ ಊರಿಗೆ ಬಂದು,"ಇಲ್ಲಿ
ದೇವದಾಸಿಯರು ಇದ್ದಾರೆಯೆ? ಅಂಥವರಿಗೆ ತಿಳುವಳಿಕೆ ಮಾತು ಹೇಳಿ, ಮುಂದೆ ಈ ರೀತಿ ಆಗದಿರಲು
ನೋಡಿಕೊಳ್ಳುವ ಜವಾಬ್ದಾರಿ ನಮ್ಮದು. ನಿಮ್ಮ ಊರಲ್ಲಿ ಅಂಥವರು ಇದ್ದರೆ ದಯವಿಟ್ಟು ತೋರಿಸಿ. ಅವರಿಗೆ
ಒಳ್ಳೆ ಭವಿಷ್ಯ ನಿರೂಪಿಸುತ್ತೇವೆ". "ನಮ್ಮೂರಲ್ಲಿ ದೇವದಾಸಿ ಅಂತ ಯಾರೂ ಇಲ್ಲ" ಅಂತ ಹೇಳಿದ್ದಳಂತೆ.
ಆ ಊರಿನ ಜನರಿಗೆ ಇದು ಹೊಸ ಪದ. ಅವರಿಗೆ ಗೊತ್ತಿದ್ದ ಪದವೆಂದರೆ ಸೂX.ಇವರುಗಳು ನಮ್ಮ ತಲೆ
ತಿನ್ನೋಕೆ ಬಂದಿದ್ದಾರೆ ಅಂತ ತಿಳಿದ ದೇವದಾಸಿಯರು,"ನೀವು ನಾಳೆ ಬನ್ನಿ. ನೀವು ರಾತ್ರಿ ೧೦ ಗಂಟೆಗೆ
ಬನ್ನಿ" ಅಂತೆಲ್ಲ ಹೇಳಿ ಕಳುಹಿಸುತ್ತಾಯಿದ್ದರಂತೆ. ಆದರೆ ಆ ಸಂಘದವರು ಅವರು ಹೇಳಿದ ಸಮಯಕ್ಕೆ
ಸರಿಯಾಗಿ ಅವರನ್ನು ಭೇಟಿಮಾಡುತ್ತಾಯಿದ್ದರಂತೆ. ಏನಾದರೂ ಆಗಲಿ ಒಮ್ಮೆ ಅವರ ಭಾಷಣ ಕೇಳಬೇಕು
ಅಂತ ಕೇಳಿದರಂತೆ ಆ ಊರಿನ ದೇವದಾಸಿಯರು. ಅವರ ಮಾತು ಕೇಳಿದ ಮೇಲೆ,ನಮ್ಮ ಮೇಲೆ
ಲೈಂಗಿಕ ಕಿರುಕುಳ ಕೊಡುವವರನ್ನು ಶಿಕ್ಷೆಗೆ ಗುರಿ ಪಡಿಸಬಹುದು ಎಂಬ ವಿಚಾರ ತಿಳಿದು ಕೊಂಡರಂತೆ.
ಎಂದಿನಂತೆ ಈಕೆ ಭಾವ ಒಂದು ರಾತ್ರಿ ಬರಲು ಹೇಳಿದನಂತೆ. ಆಗ ಈಕೆ, "ಹಿಂದೆ ಆಗಿರೋದು ಆಗೋಯ್ತು.
ಇನ್ನು ಮುಂದೆ ನೀನು ಹೀಗೆ ಕರೆದರೆ.. ಪೋಲೀಸಿಗೆ ಹಿಡಿದು ಕೊಡುತ್ತೀನಿ. ಹುಷಾರ್!" ಅಂತ
ಗದರಸಿದಳಂತೆ.ಅಬ್ಬಾ! ಏನಮ್ಮ ನಿನ್ನ ಧೈರ್ಯ.. ಮೆಚ್ಚೆದೆ ಕಣಮ್ಮ..ಅಲ್ಲಿಂದ ಈಕೆ ಹಾಗು ಇವಳಂತೆ
ಇದ್ದ ಕೆಲವರು,ಈ ಪದ್ಧತಿನಿಲ್ಲುಸುವುದರಲ್ಲಿ ತೊಡಗಿದ್ದಾರಂತೆ. ದೇವದಾಸಿ ಶಾಸ್ತ್ರ ನಡಿತಾಯಿದೆ ಅಂತ ವಿಚಾರ
ತಿಳಿದ ತಕ್ಷಣವೇ ಪೋಲೀಸಿಗೆ ದೂರು ನೀಡಿ,ಅವರನ್ನು ಅಲ್ಲಿಗೆ ಕರೆದು ಕೊಂಡು ಹೋಗಿ
ತಡಿಯುತ್ತಾಯಿದ್ದಾಳಂತೆ. ಹೀಗೆ ಮುಂದುವರಿಸಮ್ಮ.
ಈಕೆಯ ಸಂಸಾರಕ್ಕೆ ಮತ್ತೊಬ್ಬರು ಸೇರಿದ್ದಾರಂತೆ. ಯಾರೆಂದರೆ, ಈಕೆಯ ಪ್ರಿಯತಮ! ಅವನು ಇವಳೊಂದಿಗೆ
ಇದ್ದಾನಂತೆ. ಈ ವಿಚಾರ ಕೇಳಿದ ಮೇಲೆ "ಪ್ರೀತಿ ಸುಳ್ಳಲ್ಲ!" ಅಂತ ಗೊತ್ತಾಗುತ್ತೆ ಅಲ್ವಾ?
ಈ ಕೆಟ್ಟ ಪದ್ಧತಿ ನಿಂತು ಹೋಗಲಿ. ಇದಕ್ಕೆ ಯಾರೂ ಬಲಿಯಾಗುವುದು ಬೇಡ.
10 ಜನ ಸ್ಪಂದಿಸಿರುವರು:
ಶಂಕರ್, ಎರಡು ಸಲಿ ಓದಿದೆ.. ಸ್ವಲ್ಪ serious topic .. ತುಂಬಾ ಯೋಚನೆ ಮಾಡೊ ವಿಶಯ. ಓದಿದ ಮೇಲೆ ಎನಾದ್ರು ಮಾಡಬೇಕು ಅಂತ ಅನ್ಸಿದ್ರು, ಏನ್ ಮಾಡೊದು ಗೊತ್ ಆಗಲ್ಲ. Its not seen much now a days, or i havent seen it around ansatte.
Male 21,
nanagU ee paddhati nintogide antha nambidde... aadre aake baayinda kElida mEle idu eegalU ide antha tiLitu....aadare idu hechchaagi irOdu bijapur ansutte... savadatti guDDa sutta muttalu...
ಶಂಕರ,
ಲೇಖನವು ಅರ್ಧ ಮಾತ್ರ ಕಾಣ್ತಾ ಇತ್ತು. ಏನೇ ಪ್ರಯತ್ನ ಮಾಡಿದರೂ ಒಂದು column widthನಲ್ಲಿ ಎಷ್ಟು ಕಾಣಬೇಕೊ ಅಷ್ಟೇ ಕಾಣುತ್ತಿತ್ತು.
ಅಷ್ಟನ್ನೇ ಓದಿದರೂ ಸಹ, ಮನಸ್ಸಿಗೆ ನೋವೆನಿಸುವ ವಿಷಯ. ಅಥಣಿ (ಬೆಳಗಾವಿ ಜಿಲ್ಲೆ)ಯಲ್ಲಿ ಈ ಪದ್ಧತಿಯ ವಿರುದ್ಧ ಹೋರಾಡುವ ಹಾಗು ದೇವದಾಸಿಯರ rehabilitation ಮಾಡುವ ಸಂಘಟನೆ ಒಂದಿದೆ ಎಂದು ಪೇಪರ್‌ನಲ್ಲಿ ಓದಿದ್ದೆ.
inthavarannu main stream ge taro prayatna maadle beku.
bahaLa besarada sangati ree.. :-(
Hmmm :-(
Naanu thumba sala hogidini savadati-ge.. aa heNmakLna avr manevre heege kushi inda devadasiyarna maadodhu :-(
ಆಕೆಯ ಪ್ರಿಯಕರ ಈಗಲೂ ಆಕೆಗೆ ಸಾಥ್ ನೀಡುತ್ತಿರುವುದು ಸಮಾಧಾನಕರ ಅಂಶ. ಇವರಂತೆ ಎಲ್ಲ ದೇವದಾಸಿಯರೂ ಎಚ್ಚೆತ್ತು ಈ ಪದ್ಧತಿಯನ್ನು ತೆಗೆಯಬೇಕು. ನಾವಿಲ್ಲಿ ಬೆಂಗಳೂರಲ್ಲಿ ಬೊಬ್ಬೆ ಹಾಕಿದ್ರೆ ಏನೂ ಆಗಲ್ಲ.
ಹರೀಶ್,
ನನ್ನ ಪ್ರಾರ್ಥನೇಯೂ ಇದೇ. ಈ ಕೆಟ್ಟ ಪದ್ದತಿ ನಾಶವಾಗಲಿಯೆಂದು.
its is really a lamenting Story for that lady who has suffered so much of woe in her life
navu e thara paddhatheyanna modhlu nermula madabeku
its is really a lamenting Story for that lady who has suffered so much of woe in her life
navu e thara paddhatheyanna modhlu nermula madabeku
Post a Comment