ಪತಿ
ಕೆ.ಎಸ್.ಎನ್. ಹೇಳಿದ್ದರು
ನೀ ಕಟ್ಟಿ ಕೊಂಡಾಗಾಗುವೆ
ಕೋಟ್ಯಾಧಿಪತಿ..
ನಾ ಇವಳನ್ನು ಕಟ್ಟಿ ಕೊಂಡಾದೆ
ಕೋತಿಯ ಪತಿ!
Come-ಪನಿ
ಕೂಗಿ ಕೂಗಿ ಕರೆಯಿತು
ನನ್ನ Company,
Come ನನ್ನಲ್ಲಿ
ನಿನಗಿದೆ ಇಲ್ಲಿ
ಮಾಡಲು ಬೇಕಾದಷ್ಟು ಪನಿ*
ಪನಿ= ಕೆಲಸ (ತೆಲುಗು ಮೂಲ)
ಬಿಡುವು
ನಿರಂತರದ ಕೆಲಸದ ಮಧ್ಯ
ಉಸಿರಾಟಕ್ಕೆ ಸಿಗುವ
ಅಮೂಲ್ಯ ಕ್ಷಣ!
ದುಡಿಮೆ
ಕಷ್ಟ ಪಟ್ಟು ದುಡಿದೆ
ಕಂಪನಿಯ Welfareಗೆ
ಕೂಡಲೆ ಬಂದಿತು
ಆಮಂತ್ರಣ Farewellಗೆ!
ಅಣ್ಣಂದಿರು
ಕಾಯಕವೇ ಕೈಲಾಸ
ಅಂದರು ಆಗ ಬಸವಣ್ಣ
ಕಾಯಕದಲ್ಲೇ ವಾಸ
ಅಂದನು ಈಗ ಶಂಕರಣ್ಣ
ಜ್ಞಾನದ ಬಗ್ಗೆ
-
ಜ್ಞಾನದಿಂ ಮೇಲಿಲ್ಲ| ಶ್ವಾನನಿಂ ಕೀಳಿಲ್ಲ|ಭಾನು ಮಂಡಲದಿಂ ಬೆಳಗಿಲ್ಲ ಜಗದೊಳಗೆ|ಜ್ಞಾನವೇ
ಮೇಲು ಸರ್ವಜ್ಞ||ಜ್ಞಾನದಿಂದಲಿ ಇಹವು| ಜ್ಞಾನದಿಂದಲಿ ಪರವು|ಜ್ಞಾನವಿಲ್ಲದಲೆ ಸಕಲವೂ
ತನಗಿದ್ದು|ಹಾನಿ...
15 years ago
7 ಜನ ಸ್ಪಂದಿಸಿರುವರು:
ಹನಿಗಳು ಅರ್ಥದಿಂದ ತುಂಬಿವೆ.
kaayakavE kailaasa.. kaayaka illadiddare kai-loss-aa.... :-D
nice !
very nice buddy
ಶಂಕರ್,
ಎಲ್ಲಾ ಹನಿಗಳೂ ತುಂಬಾ ಚೆನ್ನಾಗಿವೆ. ಇಷ್ಟವಾದವು.
ಈಗಿನ ಜೀವನಕ್ಕೆ ಹತ್ತಿರವಾಗಿರುವ ಚುಟುಕುಗಳು.. ಚೆನ್ನಾಗಿವೆ.
ಧನ್ಯವಾದಗಳು ಹರೀಶ :)
Post a Comment