ಹಾಡಲು ಬಾರದೆ ನಾನು
ಕರೆಸಿಹೆ ಕೋಗಿಲೆಯನ್ನು
ಹಾಡುತ ಹಾರೈಸಲೆಂದು
ನೆಗೆಯಲು ಬಾರದೆ ನಾನು
ಕರೆಸಿಹೆ ಹುಲ್ಲೆಯನ್ನು
ಉಡುಗೊರೆಯ ನೀಡಲೆಂದು
ಇರುಳನ್ನು ಓಡಿಸಲಾಗದೆ ನಾನು
ಕರೆಸಿಹೆ ಚಂದ್ರನನ್ನು
ಚಂದ್ರಮುಖಿಯ ನೋಡಲೆಂದು
ಭುವನ ಸುಂದರಿಯ ಮುಂದೆ
ಅನ್ಯ ಸುಂದರಿಯರೇ?
ಚಲನವಿಲ್ಲದ ನೋಟಕೆ
ಧನ್ಯ ನೀವು ನಯನಗಳೆ!
ಪ್ರೀತಿಯ ಪುಟಾಣಿ ಶದ್ದುಗೆ ಹು.ಹ.ಹಾ ಶುಭಾಶಯಗಳು
ಜ್ಞಾನದ ಬಗ್ಗೆ
-
ಜ್ಞಾನದಿಂ ಮೇಲಿಲ್ಲ| ಶ್ವಾನನಿಂ ಕೀಳಿಲ್ಲ|ಭಾನು ಮಂಡಲದಿಂ ಬೆಳಗಿಲ್ಲ ಜಗದೊಳಗೆ|ಜ್ಞಾನವೇ
ಮೇಲು ಸರ್ವಜ್ಞ||ಜ್ಞಾನದಿಂದಲಿ ಇಹವು| ಜ್ಞಾನದಿಂದಲಿ ಪರವು|ಜ್ಞಾನವಿಲ್ಲದಲೆ ಸಕಲವೂ
ತನಗಿದ್ದು|ಹಾನಿ...
15 years ago
5 ಜನ ಸ್ಪಂದಿಸಿರುವರು:
so sweet.. :)
ನಮ್ ಕಡೆ ಇಂದಾನೂ ಶುಭಾಶಯ ತಿಳಿಸಿ ಶಂಕರ್..
ಆಮೇಲೆ, sweets ಗೆ ನಾವು ಅವ್ರ್ನ ಕೇಳಲ್ಲ ನಿಮ್ಮನ್ನೆ ಕೇಳೊದು.. :)
"speak to nature" annO sheershike ge oLLe padya.. :-D
hu.ha.haa. shubhaashayagaLu - sakkath prayOga idu.. good good... :-)
shAddu putta huttu habbada shubhAshaya ninge:)!
ಮುದ್ದು ಶದ್ದುಗೆ ನನ್ನದೂ ಶುಭಾಶಯಗಳು. ಕೋಗಿಲೆ, ಜಿಂಕೆ ಹಾಗು ಚಂದ್ರರ ಹಾಗೇ ಈತನೂ ಸಹ ನಮ್ಮಲ್ಲಿ ಉಲ್ಲಾಸ ತುಂಬುತ್ತಿದ್ದಾನೆ.
ಶಂಕರ್,
ಶ್ರದ್ಧಾಳಷ್ಟೇ ಮುದ್ದಾಗಿರುವ ಕವನ.. ತುಂಬಾ ಚೆನಾಗಿದೆ. ಹಾರ್ದಿಕ ಶುಭಾಶಯಗಳು ಪುಟ್ಟಿ :)
Post a Comment