Tuesday, 23 September 2008

’ಮ’ಕಾರದ ಮಾನಿನಿಯರು!

[ ಇದು ಪೋಸ್ಟ್ ಆಗುತ್ತಾಯಿರುವ ೫೦ನೇ ಕವನ. ಆದರೆ ಇದು ೫೦ನೇ ಕವನ ಅಲ್ಲ. 2006 ರಲ್ಲಿ, ನನ್ನ ತಂಗಿ ಹಾಗು ತಮ್ಮ ಕೆಲವು ಹುಡುಗೀಯರ ಹೆಸರುಗಳನ್ನು ಕೊಟ್ಟು ಒಂದು ಕವನ ರಚಿಸಲು ಹೇಳಿದರು. ಅವರ ಬಲವಂತಕ್ಕೆ ಬರೆದದ್ದು. ಅದೇಕೋ ನನ್ನ ಆರಂಭದ ಕವನಗಳು ’ಮ’ ಕಾರದಿಂದ ಪ್ರಾರಂಭ ಮಾಡಿದ್ದೆ. ಆಮೇಲೆ, ನನ್ನ ಕವನ / ಲೇಖನದ ಶೀರ್ಷಿಕೆಗಳು ಕೆಲವು ’ಮ’ಕಾರದಿಂದ ಆರಂಭವಾಗಿವೆ: ಮೆಲೋಡಿಯಸ್ ಮೋಹನ, ಮಾಲ್ @ಮಲ್ಲೇಶ್ವರ, ಮಲೆಯಲ್ಲೊಂದು ಮಾಣಿಕ್ಯ, ಮರುಳು ಮಾತುಗಳು, ಮಗುವಾಗಬಾರದಿತ್ತೇ? ಇತ್ಯಾದಿಗಳು. ಇಂದಿನ ಕವನದ ಶೀರ್ಷಿಕೆ ಬೇರೆ ಏಕೆ ಇಡಲಿ ಎಂದು ’ಮ’ಕಾರದಿಂದ ಪ್ರಾರಂಭ ಮಾಡಿದೆ. ಖಂಡಿತವಾಗಿಯೂ ಟಿ.ಎನ್.ಸೀತಾರಾಮ್ ಅವರ ಪ್ರಭಾವವಿಲ್ಲ! ]

ಹುಡುಗಿಯರ ಹೆಸರಿನ ಕವನವಿದು
ತಂಗಿಯು ಇಟ್ಟ ಪ್ರಶ್ನೆಯಿದು
ಹತ್ತಾರು ಚೆಲುವೆಯರು ಬರುವ
ಪುಟ್ಟದೊಂದು ಕವನವಿದು.

ಮೀರಾ.. ನಿನ್ನ ಮೆಚ್ಚಿದೆ ಮನಸಾರ
ಕೊಡಲೇ ನಿನಗೆ "ಮುತ್ತಿನ" ಹಾರ?
ಮೀನ, ಮೀನಾ ನೋಡು ನನ್ನ
ಹಾಡುವೆ ನಿನಗೆ ಮೊದಲ ಗಾನ.

ಮಧುವಿನ ಹಾಗಿದ್ದ ನಿನ್ನ ಮಾತು
ಮಗುವಿನ ಹಾಗೆ ನನ್ನ ಮಾಡಿತು.
ಮಾಧುರಿ ನಿನ್ನ ಕಾಣಲು
ಬಿಡಳು ಮಂಡೋದರಿ
ಅವಳಂಥ ನಾರಿ, ರಾವಣನಿಗೆ ಸರಿ.

ಮಲ್ಲಿಕಾ ಜೊತೆಗೆ ಮಂದಿರಕ್ಕೆ ಹೋಗುವೆನೆಂದರೆ
ಹಿಂದೆ ಓಡಿ ಬರುವಳು ಮೇನಕ.
ಮೋನಿಕಾ ಜೊತೆಗೆ ಹಾಡಲು ಹೋಗುವೆನೆಂದರೆ
ಬಂದು ಕಾಡುವಳು ಮಲೈಕಾ.

ಮಧುರವಾದ ಮಾತಿಂದ ಮೌನ ಮಾಡಿದೆ
ಮೇಘ ಸಂದೇಶ ಕಳಿಸಿದರೆ ಮಾಯ ಮಾಡಿದೆ.

ಮನೀಷ ನೀ ಬಾರೆ, ನಗು ನಗುತಾ
ನಿನ್ನ ಮೊಗವ ನೋಡುತ
ಕಾಲ ಕಳೆಯುವ ತವಕ.
ಮಯೂರಿ, ನಿನ್ನ ಲಾಸ್ಯಕೆ
ಗರಿ ಮುಚ್ಚಿತು ಮಯೂರ!

7 ಜನ ಸ್ಪಂದಿಸಿರುವರು:

ತೇಜಸ್ವಿನಿ ಹೆಗಡೆ said...

ಶಂಕರ್,

:) ತುಂಬಾ ಇಷ್ಟವಾಯಿತು ನಿಮ್ಮ "ಮ"ಕಾರದ ಕವನ. ಪ್ರಾಸವನ್ನೂ ಉಳಿಸಿಕೊಂಡು ಎಲ್ಲಿಯೂ ಅರ್ಥವನ್ನೂ ಕೆಡಿಸದೇ ಸರಳ ಹಾಗೂ ಸುಂದರವಾಗಿದೆ.

ಇನ್ನೂ ನೂರಾರು ಕವನಗಳು ನಿಮ್ಮಿಂದ ಹೊರಬರಲಿ ಎಂದು ಹಾರೈಸುವೆ.

Anonymous said...

Nimma thangige innu swalpa "ma" kaara frens ididre chanagirtithu.. :) sakathagide... :)

Sridhar Raju said...

ee kavana oodhi ee haadu gnapaka banthappa...."mandaakiniye nee sidilina kidiye..." :-) :-)
mandaakini hesru biTbittidyallappa... ;-)

Rahul said...

...ಮಲೈಕಾ ಕಾಡುವಳು
ಸಾಲು ಓದಿದಾಗ ಏನನ್ನಸ್ತು ಅಂದ್ರೆ- ಅರಬಾಜ್ ಖಾನ್ ಏನೂ ಅನಲಿಲ್ವಾ?!
ಸುಮ್ನೆ ತಮಾಷೆ ಮಾಡಿದೆ ಮಾರಾಯ್ರೆ!! ಸೀರಿಯಸ್ಸಾಗಿ ತಗೋಬೇಡಿ. ಚನ್ನಾಗಿ ಬರೆದಿದೀರಾ.

ಅಂತರ್ವಾಣಿ said...

ರಾಹುಲ್,
ಧನ್ಯವಾದಗಳು.

ಅರಬಾಜ್ ಖಾನ್ ಗೆ ಕನ್ನಡ ಗೊತ್ತಿಲ್ಲ.. ಹಾಗಾಗಿ ಏನೂ ಅನ್ನಲಿಲ್ಲ

Lakshmi Shashidhar Chaitanya said...

Ditto karmakaanda prabhugaLa comment.

kavana once again fantastically superr-u. comedy timing perfect-u, brilliant-u.
50th ne kavanada post-u...ellaru 50 100 ella hoDyakk start maadidaare ittichege...mundvarili mundvarili ide trend-u. . innondh hattippattu sonne serli 50 aadmele anta nanna aashya. shubhaashaya !

maddy said...

wow.. idu olle creativity.. hesaru galannu serisi hoseda padagalu bahala sogasaavige..

keep it up

Madhu.