"ಬೋಲೋ ವಟ ವಟ ಮಹಾರಾಜ್ ಕೀ ಜಯ್"
ಮಳೆ ಬಂದ ಕಾಲದಿ
ರಸ್ತೆ ಬದಿಯ ಕೊಳದಿ
ಕಪ್ಪೆಗಳ ಸಂಸಾರವೊಂದಿತ್ತು
ಅರೆ ಕ್ಷಣ ಬಿಡದೇ
ಅವುಗಳ "ವಟ ವಟ" ಕರ್ಣಗಳಿಗಿತ್ತು
ಅಲ್ಪ ದಿನಗಳಲ್ಲೇ
ಎಮ್ಮ ಮನೆಯಂಗಳದಲ್ಲಿ
ಕಾಲಿಗೊಂದು ಕಪ್ಪೆ ಸಿಗುತ್ತಿತ್ತು!
"ಭೋಲೋ ವಟ ವಟ ಮಹಾರಾಜ್ ಕೀ ಜಯ್"
Thursday, 4 December 2008
ಕಾಲಿಗೊಂದು ಕಪ್ಪೆ
Posted By ಅಂತರ್ವಾಣಿ at 10:15 pm 12 ಜನ ಸ್ಪಂದಿಸಿರುವರು
ವಿಭಾಗ: ಕವನಗಳು
Sunday, 30 November 2008
ಐನೂರು ರೂಪಾಯಿ ಕೊಡುತ್ತೀನಿ......ಏನು ಮಾಡುತ್ತೀರ?
Posted By ಅಂತರ್ವಾಣಿ at 3:15 pm 6 ಜನ ಸ್ಪಂದಿಸಿರುವರು
ವಿಭಾಗ: ಇತರೆ
Monday, 24 November 2008
ಎಮ್ಮ ಮನೆಯಂಗಳದಿ
ಎಮ್ಮ ಮನೆಯಂಗಳದಿ
ಬಂದಿತೊಂದು ಪುಟ್ಟ ಜೀವ
ನನ್ನ ಕಾಲ ಪಕ್ಕ ಇದ್ದು,
ಕಾಣದಂತೆ ನಾನಿದ್ದೆ!
ಅದನ್ನು ಕಂಡ ಕ್ಷಣದಲಿ,
ಬಂತು ಮೊಬೈಲು ಕೈಯಲಿ,
ಸೆರೆಹಿಡಿಯುತ ಅದರ ಚಲನ
ಮನಸಿನಲಿ ಮೂಡಿಸಿದೆ ಕವನ
ಶಂಕರನ ಕೊರಳಲ್ಲಿ ಇರದೇ
ಶಂಕರನ ಮನೆ ಅಂಗಳದಲಿ
ಬಂದಿತೊಂದು ಪುಟ್ಟ ಜೀವ
ಸದ್ಯ! ಯಾರಿಗೂ ಕೊಡಲಿಲ್ಲ ನೋವ.
Posted By ಅಂತರ್ವಾಣಿ at 11:16 pm 12 ಜನ ಸ್ಪಂದಿಸಿರುವರು
ವಿಭಾಗ: ಕವನಗಳು, ವಿಶೇಷ ಕವನಗಳು
Tuesday, 18 November 2008
ಫಿನ್ ಲ್ಯಾಂಡಿಗೆ ಪ್ರವಾಸ (೧) - ಭಾರತಕ್ಕೆ ಪ್ರಯಾಣ
ಹಿಂದಿನ ಭಾಗ
ಸೋಮವಾರದಂದು ನನಗೆ ವಿಪರೀತ ಸಂತಸವಾಗಿತ್ತು. ಮಧ್ಯಾಹ್ನಕ್ಕೆ ಕಾಯುತ್ತಾಯಿದ್ದೆ. ಒಂದು ಗಂಟೆಯ ಕೆಲಸ ಮುಗಿಸಿ ಅಲ್ಲಿದ್ದವರೆಲ್ಲರಿಗೂ ನಾವು ಇಂದು ಮಧ್ಯಾಹ್ನ ಹೊರಡುತ್ತೇವೆಂದು ಹೇಳಿದೆವು. ಎಲ್ಲರೂ ನಮಗೆ "All the best. Safe journey" ಅಂತ ಹಾರೈಸಿದರು. ನಮಗೆ ಕೊಟ್ಟಿದ್ದ security key ಹಿಂದುರುಗಿಸಿ ಪ್ರತಿದಿನ ನಮಗೆ ಶುಭೋದಯ ಹೇಳುತ್ತಿದ್ದ Receptionist ಗೆ ನಗು ಮೊಗದಿಂದ, ಹೋಗಿ ಬಿಟ್ಟು ಬರ್ತೀವಿ ಎಂದು ಹೇಳಿದೆವು. ಆಕೆ ಕೂಡ ನಮಗೆ ಪ್ರಯಾಣ ಸುಖಕರವಾಗಿರಲಿ ಎಂದು ಹೇಳಿದರು. ಆನಂತರ ನಮ್ಮ ಹೊಟೆಲಿಗೆ ಬಂದೆವು. ಕೊನೆ ಬಾರಿಗೆ Cupboard, bathroom ಎಲ್ಲಾ ಕಡೆ ಯಾವೊಂದೂ ವಸ್ತುಗಳನ್ನು ಬಿಟ್ಟಿಲ್ಲವೆಂದು ಖಚಿತ ಪಡಿಸಿಕೊಂಡೆ. ನಂತರ ಲಗ್ಗೇಜ್ಜು ಸಿದ್ಧವಿತ್ತು. ನನ್ನ ಮೊಬೈಲಿಂದ ಸ್ವ-ಚಿತ್ರ ತೆಗೆದೆ..jpg)
ಈ ಒಂದೇ ಒಂದು ಚಿತ್ರದಲ್ಲೇ ನಾನು Serious ಆಗಿ pose ಕೊಟ್ಟಿಲ್ಲ.
ನಮ್ಮ "ಆಸ್ತಿ"ಗಳನ್ನು ತೆಗೆದುಕೊಂಡು Receptionಗೆ ಬಂದು ನಮ್ಮ ರೂಮಿನ Key (Card) ಹಿಂದಿರುಗಿಸಿ, ಅಲ್ಲಿಯ ಶಾಸ್ತ್ರಗಳನ್ನು ಮುಗಿಸಿ, ಅವರಿಗೆ ಕೊಡ ಬೇಕಿದ್ದ ಬಾಕಿ ಹಣವನ್ನು ಕೊಟ್ಟು ಹೊಟೆಲಿನಾಚಗೆ ಹೋದೆವು. ಅಲ್ಲೊಂದು Taxi ಸಿದ್ಧವಿತ್ತು. ಅದರೊಳಗೆ ಕೂತು, ವಿಮಾನ ನಿಲ್ದಾಣಕ್ಕೆ ಹೋಗು ಎಂದೆವು. ಆ ಡ್ರೈವರ್ ನಮ್ಮನ್ನು ಮಾತನಾಡಿಸುತ್ತ ಯಾವ ದೇಶ ನಿಮ್ಮದು ಎಂದು ಕೇಳಿದ. ಆಗ ನಾವು "ಭಾರತ"ವೆಂದು ಹೇಳಿದೆವು. ಅವನು ಭಾರತದಲ್ಲಿದ್ದನಂತೆ ಅದರ ವಿಚಾರವನ್ನು ಹೇಳುತ್ತಾ ನಮ್ಮನ್ನು ವಿಮಾನ ನಿಲ್ದಾಣಕ್ಕೆ ತಲುಪಿಸಿದ. ನಂತರ Boarding Pass ತೆಗೆದುಕೊಂಡ ಮೇಲೆ ಕಾಲ ಹರಣ ಮಾಡಲು ಒಂದೊಂದು ಅಂಗಡಿಗೆ ಭೇಟಿ ನೀಡುತ್ತಾಯಿದ್ದೆ. ನನ್ನ ಬಂಧುಗಳಿಗೆ ಉಡುಗೊರೆಗಳನ್ನೂ, ನನ್ನ ಕಚೇರಿಯವರಿಗೆ, "ಮದ್ಯವಿರುವ ಚಾಕೊಲೇಟ್"ಗಳನ್ನೂ ಖರೀದಿಸಿದೆನು.(ಬಹಳ ಬೇಡಿಕೆಯ ಚಾಕೊಲೇಟ್ ಇದು. "Liquor chocolates ತರದೇ ಇದ್ದರೆ ಆಫೀಸಿಗೆ ಬರ ಬೇಡ" ಅಂತ ಕೆಲವರು ಹೇಳಿದ್ದರು). ಅಲ್ಲಿ ಒಂದು ಸಾಮಾನ್ಯವಾದ ಲೇಖನಿಗೆ ೫ Euro ಅಂದರೆ ಸುಮಾರು ೩೨೦ ರೂಗಳು! ಇಲ್ಲೂ ಸಹ ನಾನು ಉಷ್ಣಮಾಪಕಗಳನ್ನು ವೀಕ್ಷಿಸುತ್ತಾಯಿದ್ದೆ ಸುಮ್ಮನೆ ಕುತೂಹಲಕ್ಕೆ.
ನಾವು Immigration ಬಳಿ ಹೋಗುವಾಗ ಒಂದು ಡಿಜಿಟಲ್ ಕ್ಯಾಮರ ಕಣ್ಣಿಗೆ ಬಿದ್ದಿತು. ಆ ಅಂಗಡಿಯವನು, ಈ ಕ್ಯಾಮರಾಗೆ ಇವತ್ತು discount ಇದೆ ಎಂದೆನು. ಕೋಶಿ ಅದನ್ನು ನೋಡಿ, ಈಗ ಖರೀದಿಸೋದು ಸೂಕ್ತ ಎಂದನು. ಹಾಗಾಗಿ ಅದನ್ನು ಖರೀದಿಸಿದೆ. ಮುಂದಿನ ಅಂಗಡಿಗೆಯಲ್ಲಿ ಕೋಶಿಯು ತನ್ನ ಮಿತ್ರರಿಗೆ ಎರಡು ಬಾಟಲ್ಲು "Finlandia"ವನ್ನು ತೆಗೆದುಕೊಂಡ. ಆನಂತರ ನಮ್ಮ ವಿಮಾನ ಹೊರಡುವ ವೇಳೆ ಹತ್ತಿರವಾಯಿತು. ನಾವು ವಿಮಾನವನ್ನೇರಿದೆವು..jpg)
ವಿಮಾನದಲ್ಲಿ ಒಂದು ಹಿಂದಿ ಚಿತ್ರ ಪ್ರದರ್ಶನ ಮಾಡಿದರು. ಈ ಚಲನ ಚಿತ್ರ ಮುಗಿದ ಮೇಲೆ ಭಾರತದ ಕುರಿತಾದ ಒಂದು ಟೆಲಿ ಚಿತ್ರ ಪ್ರದರ್ಶನ ಮಾಡಿದರು. ಅದನ್ನು ನೋಡುತ್ತಾ ಪ್ರಯಣ ಮುಗಿಸಿದೆನು.
ಭಾರತದ ನೆಲಕ್ಕೆ ವಿಮಾನ ಸ್ಪರ್ಶ ಮಾಡಿದಾಗ ಮಧ್ಯ ರಾತ್ರಿ ಒಂದು! ಅಲ್ಲಿಂದ Immigration ಮುಗಿಸಿ, ನನ್ನ ಲಗ್ಗೇಜನ್ನು ತೆಗೆದು ಕೊಂಡು ಮನೆಗೆ ಫೋನು ಮಾಡಿ ನನ್ನ ಸುಖಾಗಮನವನ್ನು ತಿಳಿಸಿದೆ. ನಂತರ ಅವರಿಗೆ ಬೆಂಗಳೂರಿನ ವಿಮಾನ ಹೊರಡುವ ಮುಂಚೆ ಕರೆ ಕೊಡುತ್ತೇನೆಂದು ಹೇಳಿದೆ. ನಾವೀಗ Domestic Airpotಗೆ ಹೋಗ ಬೇಕಿತ್ತು. ಅದಕ್ಕಾಗಿ waiting roomಗೆ ಹೋದೆವು. ಅಲ್ಲಿ ತಿಳಿದ ವಿಷಯವೇನೆಂದರೆ ಸದ್ಯಕ್ಕೆ Domestic airportಗೆ ಸಾರಿಗೆ ವ್ಯವಸ್ಥೆಯಿಲ್ಲ. ಸುಮಾರು ೫ ಗಂಟೆಗೆ ಇರುತ್ತದೆಯೆಂದು. ಅಲ್ಲಿಯವರೆಗು ಅಲ್ಲಿ ದೂರದರ್ಶನ ವೀಕ್ಷಿಸುತ್ತಾಯಿದ್ದೆ. ಕೋಶಿಯು "ತನ್ನವರ" ಜೊತೆಯಲ್ಲಿ ಮಾತಾಡುತ್ತಾಯಿದ್ದ. ಆಮೇಲೆ ಬಸ್ಸಿನಲ್ಲಿ ನಾವು Domestic airportಗೆ ಬಂದೆವು. ಇಲ್ಲಿ ಕೋಶಿ ಸ್ವಲ್ಪ ಗಾಬರಿಯಾದ. ಅವನ ಬ್ಯಾಗು ಎಲ್ಲೋ ಕಳೆದು ಹೋಗಿತ್ತು. ಅವನು ನನ್ನ ಕೇಳಿದ ಬ್ಯಾಗಿನ ಬಗ್ಗೆ. ನಾನು ತಿಳಿದಿಲ್ಲವೆಂದೆ. ತಕ್ಷಣ ಬಸ್ಸಿನ ಒಳಗೆ ಹೋಗಿ ನೋಡಿದ. ಆದರೂ ಸಿಗಲಿಲ್ಲ. ಆಮೇಲೆ ಅಲ್ಲಿಯ Manager ಬಳಿ ಹೋಗಿ ಈ ವಿಷಯ ಪ್ರಸ್ತಾಪಿಸಿದ. ಅವರು International airportಗೆ ಕರೆ ಮಾಡಿ, ಬ್ಯಾಗು ಅಲ್ಲಿರುವುದನ್ನು ಖಚಿತ ಪಡಿಸಿದರು.
ಅದನ್ನು ಪಡೆದ ಮೇಲೆ ನಾವು ಬೆಂಗಳೂರಿನ ವಿಮಾನ ಏರಿದೆವು. ದೆಹಲಿಯಿಂದ ಹೊರಟ ಸ್ವಲ್ಪ ಹೊತ್ತಿನಲ್ಲೇ ಒಮ್ಮೆ Pilot ಇಂದ ವಿಷಯ ಬಂತು, "Pressure ಏರು ಪೇರು ಆಗುತ್ತಾಯಿದೆ. ದಯವಿಟ್ಟು ನಿಮ್ಮ ಆಸನದಲ್ಲಿ ಬಂದು ಕುಳಿತುಕೊಳ್ಳಿ. ಸೀಟ್ ಬೆಳ್ಟ್ ಧರಿಸಿ!" ಇದಾಗಿ ಒಂದೆರಡು ಕ್ಷಣದಲ್ಲೆ ವಿಮಾನ ಅಲ್ಲಾಡಿತು. ಮನಸ್ಸಿನಲ್ಲೇ ಶಂಕರನ್ನು ನೆನೆದೆ. ಸದ್ಯ ಏನೂ ಆಗಲಿಲ್ಲ!
ನಂತರ ಮನೆಗೆ ಬಂದು ನನ್ನ ಎಲ್ಲಾ ಅನುಭವಗಳನ್ನು ಮನೆಯವರಿಗೆ ಹೇಳುತ್ತಾ, ಅಲ್ಲಿಂದ ತಂದಿದ್ದ chocolates ತಿನ್ನುತ್ತಾ ದಿನ ಕಳೆದೆನು.
ಅಲ್ಲಿಯ ಚಿತ್ರಗಳನ್ನು ವೀಕ್ಷಿಸಲು :
![]() |
| Finland Trip (1) |
Posted By ಅಂತರ್ವಾಣಿ at 11:01 pm 15 ಜನ ಸ್ಪಂದಿಸಿರುವರು
ವಿಭಾಗ: ಪ್ರವಾಸ ಕಥನ
